For Quick Alerts
ALLOW NOTIFICATIONS  
For Daily Alerts
 

ನಾಯಕನೇ ಆ ತಂಡದ ದೌರ್ಬಲ್ಯ: ಬಲಿಷ್ಠ ತಂಡಕ್ಕೆ ಆಕಾಶ್ ಚೋಪ್ರ ಎಚ್ಚರಿಕೆ

T20 World Cup: Aakash Chopra said Temba Bavuma as a captain, as a batter, is a weakness

ಟಿ20 ವಿಶ್ವಕಪ್‌ಗೆ ಕೆಲವೇ ದಿನಗಳಿರುವ ಸಂದರ್ಭದಲ್ಲಿ ಸಾಖಷ್ಟು ವಿಶ್ಲೇಷಣೆಗಳು ನಡೆಯುತ್ತಿದೆ. ಪ್ರತಿ ತಂಡಗಳ ಬಲಾಬಲಗಳ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ಕೇಳಿ ಬರುತ್ತವೆ. ಯಾವ ತಂಡಗಳು ಟೂರ್ನಿಯಲ್ಲಿ ಬಲಿಷ್ಠವಾಗಿದೆ? ಯಾವ ತಂಡಗಳಿಗೆ ಟೂರ್ನಿ ಗೆಲ್ಲುವ ಸಾಮರ್ಥ್ಯವಿದೆ ಈ ಎಲ್ಲಾ ವಿಚಾರಗಳು ಈ ಹಂತದಲ್ಲಿ ಸಾಕಷ್ಟು ಕುತೂಹಲ ಮೂಡಿಸುತ್ತವೆ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಕೂಡ ತಮ್ಮ ವಿಶ್ಲೇಷಣೆ ನಡೆಸಿದ್ದು ಟೂರ್ನಿಯ ಪ್ರಮುಖ ತಂಡಗಳಲ್ಲಿ ಒಂದಾಗಿರುವ ದಕ್ಷಿಣ ಆಫ್ರಿಕಾ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆಕಾಶ್ ಚೋಪ್ರ ದಕ್ಷಿಣ ಆಫ್ರಿಕಾ ತಂಡದ ಬಗ್ಗೆ ತಮ್ಮ ಅಭಿಪ್ರಾವನ್ನು ಹಂಚಿಕೊಂಡಿದ್ದಾರೆ. ಈ ಬಾರಿಯ ವಿಶ್ವಕಪ್‌ನಲ್ಲಿ ಭಾಗವಹಿಸಿರುವ ಬಲಿಷ್ಠ ತಮಡಗಳ ಪೈಕಿ ದಕ್ಷಿಣ ಆಫ್ರಿಕಾ ಕೂಡ ಒಂದಾಗಿದೆ. ಆದರೆ ಈ ತಂಡಕ್ಕೆ ನಾಯಕ ಟೆಂಬಾಬವುಮಾ ಅವರೇ ದೌರ್ಬಲ್ಯ ಎಂದು ನೇರವಾಗಿ ಉಲ್ಲೇಖಿಸಿದ್ದಾರೆ ಆಕಾಶ್ ಚೋಪ್ರ.

ಮುಂಬರುವ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕ ಹಾಗೂ ಪ್ರಮುಖ ಬ್ಯಾಟರ್ ಟೆಂಬಾ ಬವುಮಾ ಅವರೇ ಪ್ರಮುಖ ದೌರ್ವಲ್ಯವಾಗಿ ಕಾಣಿಸುತ್ತಿದ್ದಾರತೆ ಎಂದಿದ್ದಾರೆ ಆಕಾಶ್ ಚೋಪ್ರ. ಟೆಂಬಾ ಬವುಮಾ ದಕ್ಷಿಣ ಆಫ್ರಿಕಾದ ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಳ್ಳಲು ಅರ್ಹವಾಗಿಲ್ಲ ಎಂದಿರುವ ಚೋಪ್ರ ಇತ್ತೀಚಿನ ದಿನಗಳಲ್ಲಿ ಅವರ ಪ್ರದರ್ಶನ ಅತ್ಯಂತ ಕಳಪೆಯಾಗಿದೆ ಎಂದಿದ್ದಾರೆ.

"ಟೆಂಬಾ ಬಾವುಮಾ ನಾಯಕನಾಗಿ, ಬ್ಯಾಟರ್ ಆಗಿ ದುರ್ಬಲವಾಗಿದ್ದಾರೆ. ನಾನು ಅವರಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ ಯಾಕೆಂದರೆ ಇದನ್ನು ಅಂತರರಾಷ್ಟ್ರೀಯ ಆಟಗಾರನಿಗೆ ಹೇಳಬಾರದು. ಆದರೆ ಹೇಳದಿರುವುದು ಕೂಡ ಸರಿಯಲ್ಲ. ದುರದರಷ್ಟವಶಾತ್ ಆತನಿಗೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನವಿಲ್ಲ. ಹಾಗಿದ್ದರೂ ಅವರು ನಾಯಕನಾಗಿರುವ ಕಾರಣ ತಂಡದಲ್ಲಿ ಆಡುತ್ತಾರೆ. ಆದರೆ ರಿಲೀ ರೊಸ್ಸೋ, ರೀಜಾ ಹೆಂಡ್ರಿಕ್ಸ್ ಅಥವಾ ಟ್ರಿಸ್ಟಾನ್ ಸ್ಟಬ್ಸ್ ಈ ಮೂವರ ಪೈಕಿ ಒಬ್ಬರು ಅವರ ಕಾರಣದಿಮದಾಗಿ ಆಡುವ ಬಳಗದಿಂದ ಹೊರಗುಳಿಯಬೇಕಾಗುತ್ತದೆ" ಎಂದಿದ್ದಾರೆ ಆಕಾಶ್ ಚೋಪ್ರ.

ಇನ್ನು ಇದೇ ಸಂದರ್ಭದಲ್ಲಿ ಈ ಪ್ರತಿಷ್ಠಿತ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರವಾಗಿ ವಿಕೆಟ್‌ಕೀಪರ್-ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅತಿ ಹೆಚ್ಚು ರನ್ ಗಳಿಸುವ ಆಟಗಾರನಾಗಿ ಹೊರಹೊಮ್ಮಬಹುದು ಎಂದು ಚೋಪ್ರಾ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಬೌನ್ಸ್ ಸ್ನೇಹಿ ಪಿಚ್‌ಗಳಲ್ಲಿ ಕ್ವಿಂಟನ್ ಡಿಕಾಕ್ ಆಡುವುದನ್ನು ಹೆಚ್ಚು ಆನಂದಿಸುತ್ತಾರೆ ಎಂದಿದ್ದಾರೆ ಆಕಾಶ್ ಚೋಪ್ರ.

ಟೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ ಈ ಬಾರಿಯ ಟಿ20 ವಿಶ್ವಕಪ್ ಅಭಿಯಾನವನ್ನು ಅಕ್ಟೋಬರ್ 24 ರಂದು ಹೊಬಾರ್ಟ್‌ನ ಬೆಲ್ಲೆರಿವ್ ಓವಲ್‌ನಲ್ಲಿ ಪ್ರಾರಂಭಿಸಲಿದ್ದಾರೆ. ಅವರು ತಮ್ಮ ಮೊದಲ ಮುಖಾಮುಖಿಯಲ್ಲಿ ಅರ್ಹತಾ ಸುತ್ತಿನ ಬಿ ಗುಂಪಿನ ವಿಜೇತ ತಂಡವನ್ನು ಎದುರಿಸಲಿದ್ದಾರೆ.

Story first published: Thursday, October 13, 2022, 16:13 [IST]
Other articles published on Oct 13, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+