Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಶೀದ್ ಅಮೋಘ ಹೋರಾಟ ವ್ಯರ್ಥ: ರೋಚಕ ಸೆಣೆಸಾಟದಲ್ಲಿ ಆಸ್ಟ್ರೇಲಿಯಾಗೆ 4 ರನ್‌ಗಳ ಗೆಲುವು

T20 World Cup: Australia win importent match against Afghanistan by 4 runs

ಟಿ20 ವಿಶ್ವಕಪ್‌ನಲ್ಲಿ ಇಂದು ಆಸ್ಟ್ರೇಲಿಯಾಗೆ ನಿರ್ಣಾಯಕವಾಗಿದ್ದ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಸೋಲಿನ ಅಂಚಿಗೆ ತಲುಪಿ ಕಡೆಗೂ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆಲ್‌ರೌಂಡರ್ ರಶೀದ್ ಖಾನ್ ಅಂತಿಮ ಹಂತದಲ್ಲಿ ಅಮೋಗ ಹೋರಾಟವನ್ನು ಪ್ರದರ್ಶಿಸಿದ್ದು ತಂಡವನ್ನ ಗೆಲುವಿನ ಸನಿಹಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು ಕೂಡ ಗೆಲುವಿನ ದಡ ದಾಟಲು ಸಾಧ್ಯವಾಗಲಿಲ್ಲ. ಹೀಗಾಗಿ ಅಂತಿಮ ಹಂತದಲ್ಲಿ ಆಸ್ಟ್ರೇಲಿಯಾ ತಂಡ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ.

ಈ ಪಂದ್ಯ ಅಫ್ಘಾನಿಸ್ತಾನ ತಂಡಕ್ಕಿಂತ ಆಸ್ಟ್ರೇಲಿಯಾ ತಂಡಕ್ಕೆ ಅತ್ಯಂತ ಮಹತ್ವದ್ದಾಗಿತ್ತು. ಸೆಮಿಫೈನಲ್ ಹಂತಕ್ಕೇರುವ ಸ್ಪರ್ಧೆಯಲ್ಲಿ ಮುಂದುವರಿಯಬೇಕಾದರೆ ಆಸ್ಟ್ರೇಲಿಯಾ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು. ತೀವ್ರ ಪೈಪೋಟಿಯನ್ನು ನಡೆಸಿದ ಬಳಿಕ ಆಸಿಸ್ ಪಡೆ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈಗ ಆಸ್ಟ್ರೇಲಿಯಾ ತಂಡಕ್ಕೆ ಶನಿವಾರ ನಡೆಯಲಿರುವ ಶ್ರೀಲಂಕಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಸೆಣೆಸಾಟ ಮಹತ್ವವಾಗಿದ್ದು ಶ್ರೀಲಂಕಾ ತಂಡ ಗೆದ್ದು ಇಂಗ್ಲೆಂಡ್ ಸೋತರೆ ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದೆ. ಇಂಗ್ಲೆಂಡ್ ಗೆದ್ದರೆ ಆಸಿಸ್ ಪಡೆಯ ಸೆಮಿಫೈನಲ್ ಕನಸು ಭಗ್ನವಾಗುವುದು ಖಚಿತ.

ಸವಾಲಿನ ಗುರಿ ನೀಡಿದ ಆಸ್ಟ್ರೇಲಿಯಾ

ಸವಾಲಿನ ಗುರಿ ನೀಡಿದ ಆಸ್ಟ್ರೇಲಿಯಾ

ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೊದಲಿಗೆ ಬ್ಯಾಟಿಂಗ್ ನಡೆಸಿದ್ದು ಉತ್ತಮ ಆರಂಭ ಪಡೆಯತುವಲ್ಲಿ ವಿಫಲವಾಯಿತು. ಆರೋನ್ ಫಿಂಚ್ ಈ ಪಂದ್ಯದಿಂದ ಹೊರಗುಳಿದ ಕಾರಣ ಕ್ಯಾಮರೂನ್ ಗ್ರೀನ್ ಆರಂಭಿಕನಾಗಿ ಕಣಕ್ಕಿಳಿದರೂ ಈ ಪಂದ್ಯದಲ್ಲಿ ವಿಫಲವಾದರು. ಡೇವಿಡ್ ವಾರ್ನರ್ 25 ರನ್ ಬಾರಿಸಿ ವಿಕೆಟ್ ಕಳೆದುಕೊಂಡರೆ ಸ್ಟೀವ್ ಸ್ಮಿತ್ 4 ರನ್‌ಗೆ ಔಟಾದರು. ಸ್ಟೋಯ್ನಿಸ್ ಕೂಡ 21 ಎಸೆತಗಳಲ್ಲಿ 25 ರನ್‌ಗಳಿಸಿದರು. ಇನ್ನು ಮಿಚೆಲ್ ಮಾರ್ಶ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. 30 ಎಸೆತಗಳನ್ನು ಎದುರಿಸಿದ ಮಾರ್ಶ್ 45 ರನ್‌ಗಳ ಕೊಡುಗೆ ನೀಡಿದರೆ ಮ್ಯಾಕ್ಸ್‌ವೆಲ್ 32 ಎಸೆತಗಳಲ್ಲಿ 54 ರನ್‌ಗಳ ಕೊಡುಗೆ ನೀಡಿದರು. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ ಆಸ್ಟ್ರೇಲಿಯಾ ತಂಡ 168 ರನ್‌ಗಳನ್ನು ಗಳಿಸಲು ಯಶಸ್ವಿಯಾಯಿತು.

ಉತ್ತಮ ಹೋರಾಟ ನೀಡಿದ ಅಫ್ಘಾನಿಸ್ತಾನ

ಉತ್ತಮ ಹೋರಾಟ ನೀಡಿದ ಅಫ್ಘಾನಿಸ್ತಾನ

ಆಸ್ಟ್ರೇಲಿಯಾ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ ಮೊದಲ ವಿಕೆಟನ್ನು ಶೀಘ್ರವಾಗಿಯೇ ಕಳೆದುಕೊಂಡಿತು. ಆದರೆ ರಹ್ಮನುಲ್ಲಾ ಗರ್ಬಾಜ್ 17 ಎಸೆತಗಳಲ್ಲಿ 30 ರನ್ ಬಾರಿಸಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಮಿಂಚಿದರು.ಇಬ್ರಾಹಿಮ್ ಜದ್ರಾನ್, ಗುಲ್ಬಾದಿನ್ ನೈಬ್ ಸಾಧಾರಣ ಪ್ರದರ್ಶನ ನೀಡಿದರು. ಆದರೆ ನಾಯಕ ಮೊಹಮ್ಮದ್ ನಬಿ ಹಾಗೂ ನಜೀಬುಲ್ಲಾ ಜದ್ರಾನ್ ವೈಫಲ್ಯ ಅನುಭವಿಸಿದರು. ಹೀಗಾಗಿ ಅಫ್ಘಾನಿಸ್ತಾನ ಸುಲಭವಾಗಿ ಸೋಲುವ ಹಂತಕ್ಕೆ ತಲುಪಿತ್ತು. ಆದರೆ ಅಂತಿಮ ಹಂತದಲ್ಲಿ ರಶೀದ್ ಖಾನ್ ಸ್ಪೋಟಕಲ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಗೆಲುವಿನ ವಿಶ್ವಾಸ ಮೂಡಿಸಿದರು.

ರಶೀದ್ ಹೋರಾಟ ವ್ಯರ್ಥ

ರಶೀದ್ ಹೋರಾಟ ವ್ಯರ್ಥ

ಆಸ್ಟ್ರೇಲಿಯಾ ತಂಡ ನೀಡಿದ ಮೊತ್ತವನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ 16 ಓವರ್‌ಗಳು ಅಂತ್ಯವಾದ ಸಂದರ್ಭದಲ್ಲಿ 6 ವಿಕೆಟ್ ಕಳೆದುಕೊಂಡು 112 ರನ್‌ಗಳನ್ನು ಗಳಿಸಿತ್ತು. ಈ ಹಂತದಲ್ಲಿ ಅಫ್ಘಾನ್ ಗೆಲುವಿಗೆ 24 ಎಸೆತಗಳಲ್ಲಿ 57 ರನ್‌ಗಳ ಅಗತ್ಯವಿತ್ತು. ಹೀಗಾಗಿ ಆಫ್ಘನ್ ಪಡೆ ಆಸಿಸ್ ವಿರುದ್ಧ ಸುಲಭ ಸೋಲು ಅನುಭವಿಸಲಿದೆ ಎಂದು ಭಾವಿಸಲಾಗಿತ್ತು. ಆದರೆ ರಶೀದ್ ಖಾನ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಆಸಿಸ್ ಪಡೆಯ ಲೆಕ್ಕಾಚಾತವನ್ನು ತಲೆಕೆಳಗಾಗಿಸಿದರು. ಈ ಹಂತದಲ್ಲಿ ರಶೀದ್ ಖಾನ್ 23 ಎಸೆತಗಳಲ್ಲಿ 48 ರನ್‌ಗಳನ್ನು ಬಾರಿಸಿ ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದರಾದರೂ ಗೆಲುವು ಸಾಧ್ಯವಾಗಲಿಲ್ಲ. ಅಂತಿಮ ಓವರ್‌ನಲ್ಲಿ ಅಫ್ಘಾನಿಸ್ತಾನದ ಗೆಲುವಿಗೆ 22 ರನ್‌ಗಳ ಅಗತ್ಯವಿತ್ತು. ಆದರೆ 16 ರನ್‌ಗಳಿಸಿದ ಅಫ್ಘಾನಿಸ್ತಾನ ಆತಿಥೇಯ ಆಸ್ಟ್ರೇಲಿಯಾಗೆ ಶರಣಾಯಿತು.

ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಆಸ್ಟ್ರೇಲಿಯಾ: ಕ್ಯಾಮರೂನ್ ಗ್ರೀನ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (ನಾಯಕ & ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ಕೇನ್ ರಿಚರ್ಡ್ಸನ್, ಆಡಮ್ ಝಂಪಾ, ಜೋಶ್ ಹ್ಯಾಜಲ್ವುಡ್
ಬೆಂಚ್: ಆಶ್ಟನ್ ಅಗರ್, ಆರನ್ ಫಿಂಚ್, ಟಿಮ್ ಡೇವಿಡ್, ಮಿಚೆಲ್ ಸ್ಟಾರ್ಕ್

ಅಫ್ಘಾನಿಸ್ತಾನ ಆಡುವ ಬಳಗ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಉಸ್ಮಾನ್ ಘನಿ, ಇಬ್ರಾಹಿಂ ಜದ್ರಾನ್, ಗುಲ್ಬದಿನ್ ನೈಬ್, ದರ್ವಿಶ್ ರಸೂಲಿ, ನಜೀಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ (ನಾಯಕ), ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ
ಬೆಂಚ್: ಮೊಹಮ್ಮದ್ ಸಲೀಂ ಸಫಿ, ಕೈಸ್ ಅಹ್ಮದ್, ಅಜ್ಮತುಲ್ಲಾ ಒಮರ್ಜಾಯ್, ಫರೀದ್ ಅಹ್ಮದ್ ಮಲಿಕ್

Story first published: Friday, November 4, 2022, 17:41 [IST]
Other articles published on Nov 4, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+