
ಶಾರ್ಟ್ ಪಿಚ್ ಎಸೆತಗಳೊಂದಿಗೆ ಅಭ್ಯಾಸ
ಟಿ20 ವಿಶ್ವಕಪ್‌ಗೆ ಆರಂಭಕ್ಕೆ ಮುನ್ನ ಪಾಕಿಸ್ತಾನ ನ್ಯೂಜಿಲೆಂಡ್‌ನಲ್ಲಿ ತ್ರಿಕೋನ ಸರಣಿಯನ್ನು ಆಡಿತ್ತು. ನ್ಯೂಜಿಲೆಂಡ್‌ನಲ್ಲಿ ವಿಭಿನ್ನ ಬೌನ್ಸ್‌ನೊಂದಿಗೆ ಆಡಿದ ಪಾಕಿಸ್ತಾನ, ಆಸ್ಟ್ರೇಲಿಯಾದಲ್ಲಿ ವಿಭಿನ್ನ ಪಿಚ್‌ಗಳಿಗೆ ಹೊಂದಿಕೊಳ್ಳಲು ಶಾರ್ಟ್ ಪಿಚ್ ಅಭ್ಯಾಸ ನಡೆಸಿತು.
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪಿಚ್‌ಗಳ ವೇಗ ಮತ್ತು ಬೌನ್ಸ್‌ನಲ್ಲಿ ಸಾಕಷ್ಟು ವ್ಯತ್ಯಾಸ ಇರುವುದರಿಂದ, ನಾಯಕ ಬಾಬರ್ ಅಜಂ ಶಾರ್ಟ್ ಮತ್ತು ಬೌನ್ಸರ್ ಬಾಲ್‌ಗಳಿಗೆ ಸತತ ಅಭ್ಯಾಸ ಮಾಡಿದರು. ಇದರೊಂದಿಗೆ ಭಾರತದ ಶಾರ್ಟ್ ಪಿಚ್ ಎಸೆತಗಳನ್ನು ಎದುರಿಸಲು ಸಿದ್ಧವಾಗುತ್ತಿದ್ದಾರೆ.

ಅಭ್ಯಾಸ ಪಂದ್ಯ ವೀಕ್ಷಿಸಿದ ಬಾಬರ್ ಅಜಂ ಪಡೆ
ಸೋಮವಾರ ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಅಭ್ಯಾಸ ಪಂದ್ಯವನ್ನು ಪಾಕಿಸ್ತಾನದ ಆಟಗಾರರು ಸ್ಟ್ಯಾಂಡ್‌ನಿಂದ ವೀಕ್ಷಿಸಿದರು. ಮೊಹಮ್ಮದ್ ಶಮಿ ಕೇವಲ 1 ಓವರ್ ಬೌಲಿಂಗ್ ಮಾಡಿದರು. ಆದರೆ, 3 ಅದ್ಭುತ ಯಾರ್ಕರ್‌ಗಳನ್ನು ಎಸೆಯುವ ಮೂಲಕ ಮೂರು ವಿಕೆಟ್ ಪಡೆದರು. ಒಂದ್ ರನೌಟ್ ಕೂಡ ಮಾಡಿದರು.
ಅಭ್ಯಾಸ ಪಂದ್ಯದಲ್ಲಿ ಭಾರತದ ಬೌಲಿಂಗ್ ಅನ್ನು ವೀಕ್ಷಿಸಿರುವ ಪಾಕಿಸ್ತಾನ, ತುಸು ಹೆಚ್ಚಾಗಿಯೇ ತರಬೇತಿ ಪಡೆಯುತ್ತಿದೆ. ಭಾರತದ ಬೌಲಿಂಗ್ ಹೇಗೆ ಎದುರಿಸಬೇಕು ಎಂದು ಬಾಬರ್ ಅಜಂ ಮತ್ತು ಪಡೆ ಈಗಾಗಲೇ ರಣತಂತ್ರ ರೂಪಿಸುತ್ತಿದೆ.

ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯ
ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ಮುನ್ನ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ತನ್ನ ಅಂತಿಮ ಅಭ್ಯಾಸ ಪಂದ್ಯವನ್ನು ಆಡಲಿದೆ. ಮೊದಲನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಂ ಇಂಡಿಯಾ ಆತ್ಮವಿಶ್ವಾಸದಲ್ಲಿದ್ದರೆ, ತಮ್ಮ ಮೊದಲನೇ ಅಭ್ಯಾಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ 98 ರನ್‌ಗಳಿಗೆ ಆಲೌಟ್ ಆಗಿತ್ತು, ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಮೊದಲನೇ ಪಂದ್ಯದ ಸೋಲಿನಿಂದ ಹೊರಬಂದು ಗೆಲುವು ಸಾಧಿಸಲು ಕಿವೀಸ್ ಪಡೆ ಸಜ್ಜಾಗುತ್ತಿದೆ.
ಭಾರತ ತನ್ನ ಎರಡನೇ ಅಭ್ಯಾಸ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಸೂರ್ಯಕುಮಾರ್ ಸ್ಥಾನದಲ್ಲಿ ದೀಪಕ್ ಹೂಡಾ ಅಥವಾ ರಿಷಬ್ ಪಂತ್ ಆಡುವ ಸಾಧ್ಯತೆ ಇದೆ.

ಟಿ20 ವಿಶ್ವಕಪ್‌ಗೆ ಉಭಯ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಶಮಿ, ರಿಷಬ್ ಪಂತ್, ದೀಪಕ್ ಹೂಡಾ
ಪಾಕಿಸ್ತಾನ: ಬಾಬರ್ ಆಜಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಹೈದರ್ ಅಲಿ, ಶಾನ್ ಮಸೂದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಖುಷ್ದಿಲ್ ಶಾ, ಇಫ್ತಿಕರ್ ಅಹ್ಮದ್, ಆಸಿಫ್ ಅಲಿ, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಮೊಹಮ್ಮದ್ ಹಸ್ನೈನ್, ಹ್ಯಾರಿಸ್ ರೌಫ್, ಫಖರ್ ಜಮಾನ್, ಶಾಹೀನ್ಫ್ರಿ ಜಮಾನ್.


Click it and Unblock the Notifications
