ವೆಸ್ಟ್ ಇಂಡೀಸ್ ಪಾಲಿಗೆ ಆಸ್ಟ್ರೇಲಿಯಾದಲ್ಲಿ ವಿಶೇಷವಾಗಿದ್ದು ನಡೆಯಲಿದೆ ಎಂದ ಮಾಜಿ ನಾಯಕ

ಟಿ20 ಕ್ರಿಕೆಟ್ ಮಾದರಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಯಾವತ್ತಿಗೂ ಎದುರಾಳಿಗಳು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಅದಕ್ಕೆ ಕಾರಣ ಆ ತಂಡದಲ್ಲಿರುವ ಆಟಗಾರರು. ಹೊಡಿ ಬಡಿ ಆಟಕ್ಕೆ ಹೇಳಿ ಮಾಡಿಸಿದಂತಿರುವ ಈ ವಿಂಡೀಸ್ ತಂಡದ ಆಟಗಾರರು ಅಪಾಯಕಾರಿ ಎಂದು ಎಲ್ಲಾ ತಂಡಗಳು ಪರಿಗಣಿಸುತ್ತವೆ.
ಆದರೆ ಈ ಬಾರಿಯ ವಿಶ್ವಕಪ್‌ನಲ್ಲಿ ವಿಂಡಿಸ್ ತಂಡದಲ್ಲಿ ಹೇಳಿಕೊಳ್ಳುವಂತಾ ಸ್ಟಾರ್ ಆಟಗಾರರಿಲ್ಲದೆ ಕಳಗುಂದಿದಂತೆ ಭಾಸವಾಗುತ್ತಿದೆ. ಹಾಗಿದ್ದರೂ ಯುವ ಪ್ರತಿಭಾವಂತ ಆಟಗಾರರು ತಂಡದಲ್ಲಿದ್ದು ಆತ್ಮವಿಶ್ವಾಸದಿಂದಿದ್ದಾರೆ. ಈ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ತಂಡದ ಮಾಜಿ ಕ್ರಿಕೆಟಿಗ ವಿಶ್ವಕಪ್ ವಿಜೇತ ತಂಡದ ನಾಯಕ ಡ್ಯಾರನ್ ಸಮಿ ಪ್ರತಿಕ್ರಿಯೆ ನೀಡಿದ್ದು ವೆಸ್ಟ್ ಇಂಡೀಸ್ ತಂಡ ಈ ಬಾರಿ ಆಸ್ಟ್ರೇಲಿಯಾದಲ್ಲಿ ಖಂಡಿತವಾಗಿಯೂ ವಿಶೇಷವಾಗಿರುವುದನ್ನು ಸಾಧಿಸಲಿದೆ ಎಂದಿದ್ದಾರೆ.
"ತಂಡದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಯುವ ಹಾಗೂ ಅನುಭವಿ ಆಟಗಾರರು ಇದ್ದು ಇದು ತಂಡಕ್ಕೆ ಸಕಾರಾತ್ಮಕವಾಗಿ ನೆರವಾಗಲಿದೆ. ಬಲಿಷ್ಠವಾಗಲಿ ಸಾಕಷ್ಟು ಅವಕಾಶಗಲೂ ವೆಸ್ಟ್ ಇಂಡೀಸ್ ತಂಡದ ಮುಂದಿದೆ. ನಾಯಕ ನಿಕೋಲಸ್ ಪೂರನ್ ಜೊತೆಗ ಮಾರನಾಡಿದ್ದು ಆಟಗಾರರು ಉತ್ತಮವಾಗಿ ಸಿದ್ಧವಾಗುತ್ತಿದ್ದಾರೆ ಎಂದಿದ್ದಾರೆ. ಸಾಕಷ್ಟು ಅದ್ಭುತ ಪ್ರತಿಭಾವಂತ ಆಟಗಾರರು ಇರುವ ಕಾರಣದಿಂದಾಗಿ ನನಗೆ ಈ ತಂಡದ ಮೇಲೆ ನಿಜಕ್ಕೂ ಅದ್ಭುತ ಭಾವನೆಯಿದೆ" ಎಂದಿದ್ದಾರೆ ಡ್ಯಾರನ್ ಸಮಿ.
"ನಮ್ಮ ತಂಡದಲ್ಲಿ ಬ್ಯಾಟರ್‌ಗಳು ಯಾವಾಗಲೂ ಇರುತ್ತಾರೆ. ಕೈಲ್ ಮೇಯರ್ಸ್ ಅದ್ಭುತ ಪ್ರತಿಭಾವಂತ ಆಟಗಾರ. ಚೆಂಡನ್ನು ಅದ್ಭುತವಾಗಿ ಬಾರಿಸುವ ಕೌಶಲ್ಯ ಹೊಂದಿದ್ದಾರೆ. ನಿಕೋಲಸ್ ಮ್ಯಾಚ್ ವಿನ್ನರ್ ಎಂದು ನಮಗೆ ತಿಳಿದಿದೆ. ಇನ್ನು ಈ ಬಾರಿಯ ವಿಶ್ವಕಪ್‌ನಲ್ಲಿ ಉತ್ತಮವಾದ ವಿಕೆಟ್‌ಗಳನ್ನು ಪಡೆಯುವ ಬೌಲರ್‌ಗಳು ಇದ್ದಾರೆ. ಕಳೆದ ಬಾರಿ ವಿಕೆಟ್‌ಗಳನ್ನು ಪಡೆಯಲು ನಾವು ಸಮರ್ಥವಾಗಿರಲಿಲ್ಲ. ಆದರೆ ಈ ಬಾರಿ ಹಾಗಾಗುವುದಿಲ್ಲ"ಎಂದಿದ್ದಾರೆ ಡ್ಯಾರನ್ ಸಮಿ.
ಮುಂದುವರಿದು ಮಾತನಾಡಿದ ಡ್ಯಾರೆನ್ ಸಮಿ "ಅಕೀಲ್ ಹುಸೇನ್ ಅವರನ್ನು ಗಮನಿಸಬಹುದು. ಅವರು ವಿಶ್ವದ ಅಗ್ರ 10 ಬೌಲರ್‌ಗಳ ಪೈಕಿ ಒಬ್ಬರಾಗಿದ್ದಾರೆ. ಒಡೀಯನ್ ಸ್ಮಿತ್ ಕೂಡ ಸಾಕಷ್ಟು ಸುಧಾರಿಸುತ್ತಿದ್ದಾರೆ. ಉತ್ತಮವಾಗಿ ಬೆಳವಣಿಗೆ ಸಾಧಿಸುತ್ತಾ ಸೂಕ್ತ ಸಂಯೋಜನೆಯೊಂದಿಗೆ ಆಡುವುದು ಇಲ್ಲಿ ಬಹಳ ಮುಖ್ಯವಾಗುತ್ತದೆ. ನಾನು ಯಾವಾಗಲೂ ವೆಸ್ಟ್ ಇಂಡೀಸ್ ತಂಡದ ಮೇಲಿನ ವಿಶ್ವಾಸ ಕಳೆದುಕೊಂಡಿಲ್ಲ. ಈ ಬಾರಿ ಆಸ್ಟ್ರೇಲಿಯಾದಲ್ಲಿ ಉತ್ತಮವಾಗಿರುವುದನ್ನು ಸಾಧಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ"ಎಂದಿದ್ದಾರೆ.
ವಿಶ್ವಕಪ್‌ಗೆ ಆಯ್ಕೆಯಾಗಿರುವ ವೆಸ್ಟ್ ಇಂಡೀಸ್ ತಂಡ: ನಿಕೋಲಸ್ ಪೂರನ್ (ನಾಯಕ), ರೋವ್‌ಮನ್ ಪೊವೆಲ್ (ಉಪ ನಾಯಕ), ಯಾನಿಕ್ ಕ್ಯಾರಿಯಾ, ಜಾನ್ಸನ್ ಚಾರ್ಲ್ಸ್, ಶೆಲ್ಡನ್ ಕಾಟ್ರೆಲ್, ಜೇಸನ್ ಹೋಲ್ಡರ್, ಅಕೆಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಎವಿನ್ ಲೆವಿಸ್, ಕೈಲ್ ಮೇಯರ್ಸ್, ಓಬೆಡ್ ಮೆಕಾಯ್, ರೇಮನ್ ರೈಫರ್, ಓಡಿಯನ್ ಸ್ಮಿತ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications