For Quick Alerts
ALLOW NOTIFICATIONS  
For Daily Alerts
 

ಒಂದು ವರ್ಷದ ಅಂತರ, ಐದು ಬದಲಾವಣೆ: ಕಳೆದ ವರ್ಷದ ವಿಶ್ವಕಪ್‌ಗಿಂತ ಬಲಿಷ್ಠವಾಗಿದೆಯಾ ಭಾರತ?

T20 world cup: difference between team India squad of 2021 and 2022 t20 world cup

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಘೋಷಣೆ ಮಾಡಲಾಗಿದೆ. ಕಳೆದ ವರ್ಷ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಭಾರತ ಲೀಗ್ ಹಂತದಿಂದಲೇ ಹೊರಬಿದ್ದಿತ್ತು. ಹೀಗಾಗಿ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಟೂರ್ನಿಗೆ ರೋಹಿತ್ ಶರ್ಮಾ ನೇತೃತ್ವದಲ್ಲಿ ಯಾವೆಲ್ಲಾ ಆಟಗಾರರು ಕಣಕ್ಕಿಳಿಯಬಹುದು ಎಂಬ ಕುತೂಹಲ ಮೂಡಿಸಿತ್ತು. ಇದೀಗ ಆ ಕುತೂಹಲಕ್ಕೆ ತೆರೆಬಿದ್ದಿದ್ದು ಆಸಿಸ್ ನೆಲದಲ್ಲಿ ಈ ತಂಡದ ಪ್ರದರ್ಶನ ಹೇಗಿರಲಿದೆ ಎಂಬ ಕುತೂಹಲ ಮಾತ್ರವೇ ಉಳಿದುಕೊಂಡಿದೆ.

ಈ ಬಾರಿಯ ಟಿ20 ವಿಶ್ವಕಪ್‌ಗೆ ಸೋಮವಾರ ತಂಡವನ್ನು ಘೋಷಣೆ ಮಾಡಿದಾಗ ಕಳೆದ ವರ್ಷದ ತಂಡಕ್ಕಿಂತ ದೊಡ್ಡ ಬದಲಾವಣೆಯೇನೂ ಕಾಣಿಸಿಲ್ಲ. ಕಳೆದ ವರ್ಷದ ಬಹುತೇಕ ಬಳಗವನ್ನು ಉಳಿಸಿಕೊಳ್ಳಲಾಗಿದೆ. ತಂಡದ ಸಂಯೋಜನೆಯ ದೃಷ್ಟಿಯಿಂದ ಮಾತ್ರವೇ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಕಣಕ್ಕಿಳಿದಿದ್ದ ಭಾರತದ ಅಗ್ರ ಕ್ರಮಾಂಕದ ಸಂಪೂರ್ಣ ಆಟಗಾರರು ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ. ರೋಹಿತ್ ಶರ್ಮಾ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದರೆ ಉಪನಾಯಕನಾಗಿ ಕೆಎಲ್ ರಾಹುಲ್ ಆರಂಭಿಕನಾಗಿ ಸಾಥ್ ನೀಡಲಿದ್ದಾರೆ. ವಿರಾಟ್ ಕೊಹ್ಲಿ ಅಗ್ರ ಕ್ರಮಾಂಕದ ಮತ್ತೋರ್ವ ಪ್ರಮುಖ ಆಟಗಾರ.

ಹಾಗಾದರೆ ಈ ಬಾರಿಯ ಟಿ20 ವಿಶ್ವಕಪ್‌ಗೆ ಹಾಗೂ ಕಳೆದ ಬಾರಿಯ ವಿಶ್ವಕಪ್‌ಗೆ ಹೋಲಿಸಿದರೆ ಮಾಡಿಕೊಂಡಿರುವ ಬದಲಾವಣೆಗಳು ಯಾವುದು? ತಂಡದಲ್ಲಿ ಆಗಿರುವ ಐದು ಬದಲಾವಣೆಗಳ ಬಗ್ಗೆ ಇಲ್ಲಿದೆ ಮಾಹಿತಿ..

ದೀಪಕ್ ಹೂಡಾಗೆ ಸ್ಥಾನ ಇಶಾನ್ ಕಿಶನ್ ಹೊರಕ್ಕೆ

ದೀಪಕ್ ಹೂಡಾಗೆ ಸ್ಥಾನ ಇಶಾನ್ ಕಿಶನ್ ಹೊರಕ್ಕೆ

ಕಳೆದ ಕೆಲ ತಿಂಗಳಿನಿಂದ ಭಾರತ ತಂಡದಲ್ಲಿ ಸಿಕ್ಕ ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಂಡಿರುವ ದೀಪಕ್ ಹೂಡಾ ಅರ್ಹವಾಗಿಯೇ ಟೀಮ್ ಇಂಡಿಯಾ ಸ್ಕ್ವಾಡ್‌ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಒಂದೆರಡು ವರ್ಷಗಳಲ್ಲಿ ದೀಪಕ್ ಹೂಡಾ ಅವರ ಫಾರ್ಮ್‌ಗೆ ಸಿಕ್ಕ ಅತ್ಯುತ್ತಮ ಉಡುಗೊರೆ ಇದಾಗಿದೆ. ಎಲ್ಲಾ ಕ್ರಮಾಂಕದಲ್ಲಿಯೂ ಆಡುವ ಸಾಮರ್ಥ್ಯವಿರುವ ದೀಪಕ್ ಹೂಡಾ ವಿಶ್ವಕಪ್‌ನಲ್ಲಿ ಮಿಂಚುವ ವಿಶ್ವಾಸವನ್ನು ಮೂಡಿಸಿದ್ದಾರೆ. ಮತ್ತೊಂದೆಡೆ ಆರಂಭಿಕನಾಗಿ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಮರ್ಥ್ಯವಿರುವ ಇಶಾನ್ ಕಿಶನ್ ಈ ಬಾರಿಯ ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ. ಇತ್ತೀಚಿನ ಕೆಲ ಪಂದ್ಯಗಳಲ್ಲಿ ಉತ್ತಮ ಫಾರ್ಮ್ ಪ್ರದರ್ಶಿಸಲು ವಿಫಲವಾದ ಇಶಾನ್ ಕಿಶನ್‌ ನಿರಾಸೆ ಅನುಭವಿಸಿದ್ದಾರೆ.

Asia Cup 2022 Final: ಪಾಕಿಸ್ತಾನ ಮಣಿಸಿ 6ನೇ ಬಾರಿ ಚಾಂಪಿಯನ್ ಆದ ಶ್ರೀಲಂಕಾ

ದಿನೇಶ್ ಕಾರ್ತಿಕ್‌ಗೆ ಅವಕಾಶ ರವೀಂದ್ರ ಜಡೇಜಾ ಹೊರಕ್ಕೆ

ದಿನೇಶ್ ಕಾರ್ತಿಕ್‌ಗೆ ಅವಕಾಶ ರವೀಂದ್ರ ಜಡೇಜಾ ಹೊರಕ್ಕೆ

ಟೀಮ್ ಇಂಡಿಯಾದ ಈ ಬಾರಿಯ ವಿಶ್ವಕಪ್‌ನ ತಂಡದಲ್ಲಿ ಕಾಣಿಸಿಕೊಂಡ ಮತ್ತೊಂದು ಪ್ರಮುಖ ಹೆಸರು ದಿನೇಶ್ ಕಾರ್ತಿಕ್. ಫಿನಿಷರ್ ಆಗಿ ಭಾರತ ತಂಡದಲ್ಲಿ ಅತ್ಯಂತ ಪರಿಣಾಮಕಾರಿ ಪ್ರದರ್ಶನ ನೀಡಿರುವ ಡಿಕೆ ಅರ್ಹವಾಗಿಯೇ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ನೀಡಿದ ಅಮೋಘ ಪ್ರದರ್ಶನದ ಕಾರಣದಿಂದಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡ ಡಿಕೆ ತಮ್ಮ ಕನಸಿನಂತೆಯೇ ವಿಶ್ವಕಪ್ ಸ್ಕ್ವಾಡ್‌ನಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಮತ್ತೊಂದೆಡೆ ಆಲ್‌ರೌಂಡರ್ ರವೀಂದ್ರ ಜಡೇಜಾ ಗಾಯದ ಕಾರಣದಿಂದಾಗಿ ಈ ಬಾರಿಯ ಟಿ20 ವಿಶ್ವಕಪ್‌ನ ತಂಡದಿಂದ ಹೊರಬಿದ್ದಿದ್ದಾರೆ.

ಹರ್ಷಲ್ ಪಟೇಲ್‌ಗೆ ಸ್ಥಾನ, ವರುಣ್ ಚಕ್ರವರ್ತಿ ಔಟ್

ಹರ್ಷಲ್ ಪಟೇಲ್‌ಗೆ ಸ್ಥಾನ, ವರುಣ್ ಚಕ್ರವರ್ತಿ ಔಟ್

2021ರ ಟಿ20 ವಿಶ್ವಕಪ್‌ನಲ್ಲಿ ನೆಟ್ ಬೌಲರ್ ಆಗಿದ್ದ ಹರ್ಷಲ್ ಪಟೇಲ್ ಈ ಬಾರಿ ಮುಖ್ಯ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಈ ಬಾರಿಯ ಟಿ20 ವಿಶ್ವಕಪ್ ನಡೆಯುವ ಕಾರಣ ಕಳೆದ ವಿಶ್ವಕಪ್‌ನ ಬಳಿಕ ಸ್ಕ್ವಾಡ್‌ನ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಬದಲಾವಣೆ ಮಾಡಿಕೊಂಡಿತು ಮ್ಯಾನೇಜ್‌ಮೆಂಟ್. ಭಾರತದ ಪರವಾಗಿ ಹಾಗೂ ಕಳೆದ ಐಪಿಎಲ್ ಆವೃತ್ತಿಯಲ್ಲಿ ಕೆಕೆಆರ್ ಪರವಾಗಿ ಪರಿಣಾಮಕಾರಿಯಾಗಿ ಪ್ರದರ್ಶನ ನೀಡಲು ವಿಫಲವಾದ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಭಾರತ ತಂಡದಿಂದ ಹೊರಬಿದ್ದಿದ್ದಾರೆ.

ರಾಹುಲ್ ಚಾಹರ್ ಬದಲಿಗೆ ಯುಜುವೇಂದ್ರ ಚಾಹಲ್

ರಾಹುಲ್ ಚಾಹರ್ ಬದಲಿಗೆ ಯುಜುವೇಂದ್ರ ಚಾಹಲ್

ಕಳೆದ ವರ್ಷದ ಟಿ20 ವಿಶ್ವಕಪ್‌ನ ತಂಡದಲ್ಲಿ ಅನುಭವಿ ಯುಜುವೇಂದ್ರ ಚಾಹಲ್ ಬದಲಿಗೆ ರಾಹುಲ್ ಚಾಹರ್‌ಗೆ ಅವಕಾಶ ನೀಡುವ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ನೀಡಿತ್ತು ಟೀಮ್ ಇಂಡಿಯಾ ಆಯ್ಕೆ ಸಮಿತಿ. ಆಯ್ಕೆ ಮಂಡಳಿಯ ಈ ನಿರ್ಧಾರವನ್ನು ಸಮರ್ಥನೆ ಮಾಡಿಕೊಳ್ಳುವಂತಾ ಪ್ರದರ್ಶನ ರಾಹುಲ್ ಚಾಹರ್ ಅವರಿಂದ ಕಳೆದ ವರ್ಷ ಬಾರಲಿಲ್ಲ. ಆದರೆ ನಂತರ ಅನುಭವಿ ಯುಜುವೇಂದ್ರ ಚಾಹಲ್ ತನ್ನಲ್ಲಿ ಸಾಮರ್ಥ್ಯ ಇನ್ನೂ ಇದೆ ಎಂದು ಬಲವಾಗಿ ಸಮರ್ಥನೆ ಮಾಡಿಕೊಂಡರು. ಅದರ ಪರಿಣಾಮವಾಗಿ ರಾಹುಲ್ ಚಾಹರ್ ಭಾರತ ತಂಡದಿಂದ ಹೊರಬಿದ್ದರು. ಮತ್ತೆ ಭಾರತ ತಂಡದಲ್ಲಿ ರಾಹುಲ್ ರಾಹರ್‌ಗೆ ಸದ್ಯದ ಮಟ್ಟಿಗೆ ಅವಕಾಶವಿಲ್ಲ ಎಂಬ ಪರಿಸ್ಥಿತಿಯಿದೆ. ಅದೇ ಕಾರಣದಿಂದಾಗಿ ಈ ಬಾರಿಯ ವಿಶ್ವಕಪ್ ತಂಡದಲ್ಲಿ ಯುಜುವೇಂದ್ರ ಚಾಹಲ್ ಅರ್ಹವಾಗಿಯೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದು ರಾಹುಲ್ ಚಹರ್ ಹೊರಬಿದ್ದಿದ್ದಾರೆ.

ಭಾರತ ಪ್ರಶಸ್ತಿ ಗೆದ್ದಿಲ್ಲ, ಆದರೂ ಈತನಿಗಾಗಿ ಏಷ್ಯಾ ಕಪ್ ತಯಾರಿಸಿದಂತಿತ್ತು; ಸಂಜಯ್ ಮಂಜ್ರೇಕರ್

ಮೊಹಮ್ಮದ್ ಶಮಿ ಬದಲಿಗೆ ಅರ್ಷ್‌ದೀಪ್ ಸಿಂಗ್

ಮೊಹಮ್ಮದ್ ಶಮಿ ಬದಲಿಗೆ ಅರ್ಷ್‌ದೀಪ್ ಸಿಂಗ್

ಈ ಬಾರಿಯ ಟಿ20 ವಿಶ್ವಕಪ್‌ನ ಅತ್ಯಂತ ಕಠಿಣ ನಿರ್ಧಾರವೆಂದೇ ಹೇಳಲಾಗುತ್ತಿರುವ ನಿರ್ಧಾರವಿದು. ಅನುಭವಿ ಮೊಹಮ್ಮದ್ ಶಮಿ ಬದಲಿಗೆ ಯುವ ಆಟಗಾರ ಅರ್ಷ್‌ದೀಪ್ ಸಿಂಗ್‌ಗೆ ಭಾರತ ತಂಡದಲ್ಲಿ ಅವಕಾಶ ನೀಡಲಾಗಿದೆ. ಕಳೆದ ವಿಶ್ವಕಪ್‌ನ ಬಳಿಕ ಮೊಹಮ್ಮದ್ ಶಮಿ ಟಿ20 ತಂಡದಿಂದ ಹೊರಬಿದ್ದಿದ್ದರು. ಹೀಗಾಗಿ ಈ ಬಾರಿಯ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಹೆಚ್ಚಿನ ನಿರೀಕ್ಷೆಗಳು ಇರಲಿಲ್ಲ. ಆದರೆ ಏಷ್ಯಾ ಕಪ್‌ನಲ್ಲಿ ಭಾರತ ಅನುಭವಿ ಆಟಗಾರರ ಕೊರತೆಯನ್ನು ಎದುರಿಸಿದ ಕಾರಣ ಶಮಿ ಮತ್ತೆ ತಂಡಕ್ಕೆ ಸೇರ್ಪಡೆಗೊಳಿಸಬೇಕೆಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದರೆ ಮೊಹಮ್ಮದ್ ಶಮಿ ಅವರನ್ನು ಮೀಸಲು ಆಟಗಾರನನ್ನಾಗಿ ಹೆಸರಿಸಲಾಗಿದ್ದು ಪ್ರಾಥಮಿಕ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಯುವ ವೇಗಿ ಅರ್ಷ್‌ದೀಪ್ ಸಿಂಗ್‌ಗೆ ಭಾರತ ತಂಡದಲ್ಲಿ ಸ್ಥಾನ ದೊರೆತಿದ್ದು ಕುತೂಹಲ ಮೂಡಿಸಿದೆ.

Story first published: Tuesday, September 13, 2022, 9:38 [IST]
Other articles published on Sep 13, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+