T20 World Cup: ಆತ ಸಿಕ್ಕ ಅವಕಾಶ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದ ಆರ್ಸಿಬಿ ಕೋಚ್

ಕ್ರಿಕೆಟ್ ವೃತ್ತಿಜೀವನವೇ ಮುಗಿದುಹೋಯಿತು ಎಂದು ಎಲ್ಲರೂ ದಿನೇಶ್ ಕಾರ್ತಿಕ್ ಬಗ್ಗೆ ಮಾತನಾಡುತ್ತಿದ್ದಾಗ ಆತ ಮಾತ್ರ ತನ್ನ ಛಲ ಬಿಟ್ಟಿರಲಿಲ್ಲ. ಐಪಿಎಲ್‌ನಲ್ಲಿ ಆರ್ ಸಿಬಿ ಪರವಾಗಿ ಅದ್ಭುತ ಪ್ರದರ್ಶನ ನೀಡಿದ ಆತ, ಮತ್ತೆ ಭಾರತ ತಂಡಕ್ಕೆ ವಾಪಸಾಗಿದ್ದ, ಮಾತ್ರವಲ್ಲದೆ ಟಿ20 ವಿಶ್ವಕಪ್ 2022ರ ತಂಡಕ್ಕೂ ಆಯ್ಕೆ ಆಗಿದ್ದ.
ಟೀಂ ಇಂಡಿಯಾದ ಫಿನಿಷರ್ ಪಾತ್ರ ನಿರ್ವಹಿಸುವ ಜವಾಬ್ದಾರಿ ಹೊತ್ತಿದ್ದ ದಿನೇಶ್ ಕಾರ್ತಿಕ್ ಈ ಬಾರಿ ವಿಶ್ವಕಪ್‌ನಲ್ಲಿ ಅದನ್ನು ನಿಭಾಯಿಸುವಲ್ಲಿ ಎಡವಿದರು. ಪಾಕಿಸ್ತಾನ ವಿರುದ್ಧ ಔಟಾಗುವ ಮೂಲಕ ತಂಡದ ಮೇಲೆ ಒತ್ತಡ ಹಾಕಿದರು. ದಕ್ಷಿಣ ಆಫ್ರಿಕಾ ವಿರುದ್ಧ ರನ್ ಗಳಿಸಲು ಪರದಾಡಿದ ಕಾರ್ತಿಕ್ 15 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿದರು. ವಿಶ್ವಕಪ್‌ನಂತಹ ದೊಡ್ಡ ವೇದಿಕೆಯಲ್ಲಿ ಅವಕಾಶ ಸಿಕ್ಕಾಗ ಅದನ್ನು ಕೈಚೆಲ್ಲಿದರು. ಯುವ ಆಟಗಾರ ರಿಷಬ್ ಪಂತ್ ಬದಲಿಗೆ ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡಲಾಗಿತ್ತು.
ಆದರೆ, ಅವರ ಕಳಪೆ ಪ್ರದರ್ಶನದಿಂದ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದ್ದು, ರಿಷಬ್ ಪಂತ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ದಿನೇಶ್ ಕಾರ್ತಿಕ್ ತಮಗೆ ಸಿಕ್ಕ ಅವಕಾಶ ಬಿಟ್ಟುಕೊಡುವ ಮೂಲಕ ಟಿ20 ವಿಶ್ವಕಪ್‌ನ ಉಳಿದ ಪಂದ್ಯಗಳಿಗೆ ರಿಷಬ್ ಪಂತ್ ಪ್ಲೇಯಿಂಗ್ XI ಗೆ ಮರಳಲು ಬಾಗಿಲು ತೆರೆದಿದ್ದಾರೆ ಎಂದು ಆರ್ ಸಿಬಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.

ಬಾಂಗ್ಲಾ ವಿರುದ್ಧ ಗೆಲ್ಲಲೇಬೇಕು ಭಾರತ
ಭಾರತ ತಂಡವು ಬುಧವಾರ, ನವೆಂಬರ್ 2 ರಂದು ಅಡಿಲೇಡ್‌ನಲ್ಲಿ ನಡೆಯಲಿರುವ ಸೂಪರ್ 12 ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಸೆಮಿ-ಫೈನಲ್‌ನಲ್ಲಿ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಅವರು ಆ ಪಂದ್ಯವನ್ನು ಮತ್ತು ಜಿಂಬಾಬ್ವೆ ವಿರುದ್ಧದ ಅವರ ಅಂತಿಮ ಗುಂಪು-ಹಂತದ ಪಂದ್ಯವನ್ನು ಗೆಲ್ಲಬೇಕಾಗುತ್ತದೆ.
ಬುಧವಾರ ನಡೆಯುವ ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆಯಾಗುವ ಸಾಧ್ಯತೆ ಇದೆ. ದಿನೇಶ್ ಕಾರ್ತಿಕ್ ಬದಲಿಗೆ ಪಂತ್ ಆಡುವ ಸಾಧ್ಯತೆ ಇದ್ದು, ದೀಪಕ್ ಹೂಡಾ ಬದಲಿಗೆ ಅಕ್ಷರ್ ಪಟೇಲ್ ತಂಡಕ್ಕೆ ವಾಪಸಾಗುವ ನಿರೀಕ್ಷೆ ಇದೆ.
ಟಿ20 ವಿಶ್ವಕಪ್: ಬಾಂಗ್ಲಾ ವಿರುದ್ಧ ಗೆಲ್ಲಲೇಬೇಕಾದ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ 11

ಸಿಕ್ಕಿದ್ದ ಅವಕಾಶ ಬಳಸಿಕೊಳ್ಳಲಿಲ್ಲ
"ದಿನೇಶ್ ಕಾರ್ತಿಕ್ ಅವರಿಗೆ ಎರಡು ಉತ್ತಮ ಅವಕಾಶಗಳು ಸಿಕ್ಕಿವೆ. ಮೊದಲ ಪಂದ್ಯದಲ್ಲಿ ಹೆಚ್ಚು ಸಮಯ ಸಿಗದಿದ್ದರೂ, ಅಶ್ವಿನ್ ಮಾಡಿದ ಕೆಲಸವನ್ನು ಅವರು ಮಾಡಬೇಕಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಅವರು ಸಾಕಷ್ಟು ಸಮಯವನ್ನು ಹೊಂದಿದ್ದರು. ಆದರೆ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು" ಎಂದು ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮುಖ್ಯ ತರಬೇತುದಾರ ಬುಧವಾರದ ಪಂದ್ಯದಲ್ಲಿ ಕಾರ್ತಿಕ್ ಆಡದಿದ್ದರೆ ಪಂದ್ಯಾವಳಿಯ ಉಳಿದ ಭಾಗಗಳಿಗೆ ಪಂತ್‌ಗೆ ಆದ್ಯತೆ ನೀಡಬಹುದು ಎಂದು ಹೇಳಿದ್ದಾರೆ.

ಪಂತ್‌ಗೆ ಅವಕಾಶ ಬಿಟ್ಟುಕೊಟ್ಟರು
"ಆದ್ದರಿಂದ ದಿನೇಶ್ ಕಾರ್ತಿಕ್ ಎರಡು ಪ್ರಮುಖ ಅವಕಾಶಗಳನ್ನು ಕೈಬಿಟ್ಟಿದ್ದಾರೆ. ದಿನೇಶ್ ಕಾರ್ತಿಕ್ ಈ ಪಂದ್ಯಕ್ಕೆ ಅನರ್ಹರಾಗಿದ್ದರೆ, ರಿಷಬ್ ಪಂತ್ ಎಲ್ಲಾ ಪಂದ್ಯಗಳನ್ನು ಆಡಲು ಅತ್ಯಂತ ಪ್ರಬಲ ಅಭ್ಯರ್ಥಿಯಾಗಬಹುದು" ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಬೆನ್ನುನೋವಿಗೆ ಒಳಗಾದ ನಂತರ ಅವರು ಮೈದಾನವನ್ನು ತೊರೆದರು, ಪಂತ್ ಅವರಿಗೆ ವಿಕೆಟ್‌ಕೀಪರ್ ಆಗಿ ಬದಲಿಯಾಗಿ ಬಂದರು. ದಿನೇಶ್ ಕಾರ್ತಿಕ್ ಬೆನ್ನು ನೋವಿನಿಂದ ಚೇತರಿಸಿಕೊಂಡಿದ್ದರೂ, ಬಾಂಗ್ಲಾ ವಿರುದ್ಧ ಆಡುವ ಸಾಧ್ಯತೆ ಕಡಿಮೆ ಇದ್ದು ಪಂತ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications