
ಗೌತಮ್ ಗಂಭೀರ್ ಸಲಹೆ
ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಭಾರತೀಯ ಬ್ಯಾಟರ್‌ಗಳಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ ಮತ್ತು. ಭಾರತದ ಬ್ಯಾಟರ್‌ಗಳು ಶಾಹೀನ್ ಅಫ್ರಿದಿಯನ್ನು ತಮ್ಮ ನಿಯಂತ್ರಣಕ್ಕೆ ಪಡೆಯಲು ಯತ್ನಿಸಬೇಕು ಎಂದಿದ್ದಾರೆ. ಬ್ಯಾಟರ್‌ಗಳು ಆತನಲ್ಲಿರುವ ಕೌಶಲ್ಯಕ್ಕೆ ಭಯಪಡಬಾರದು. ಬದಲಿಗೆ ಆತನನ್ನು ಸಂಪೂರ್ಣ ಆತ್ಮವಿಶ್ವಾಸದಿಂದ ಎದುರಿಸಬೇಕು ಮತ್ತು ದೊಡ್ಡ ಹೊಡೆತಗಳಿಗೆ ಮುಂದಾಗಬೇಕು. ಇದರಿಂದಾಗಿ ಎದುರಾಳಿಯ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ. ಈ ಮೂಲಕ ಯಶಸ್ಸು ಸಾಧಿಸಬಹುದು ಎಂದು ಗಂಭೀರ್ ಸಲಹೆ ನೀಡಿದ್ದಾರೆ.

ವಿಕೆಟ್ ಉಳಿಸಿಕೊಳ್ಳುವ ಯೋಚನೆ ಬೇಡ
ಮುಂದುವರಿದು ಮಾತನಾಡಿದ ಗೌತಮ್ ಗಂಭೀರ್ ಶಾಹೀನ್ ಅಫ್ರಿದಿ ಕಣಕ್ಕಿಳಿದಾಗ ತಂಡದ ಆಟಗಾರರು ವಿಕೆಟ್ ಉಳಿದಿಕೊಳ್ಳುವುದಕ್ಕಾಗಿ ಪ್ರಯತ್ನವನ್ನು ನಡೆಸುವುದು ಬೇಡ ಎಂದಿದ್ದಾರೆ. ಬದಲಾಗಿ ಆತನ ಎಸೆತಗಳಿಂದ ಸಾಧ್ಯವಾದಷ್ಟು ರನ್‌ಗಳನ್ನು ಗಳಿಸಬೇಕು. ನೀವು ವಿಕೆಟ್ ಕಾಪಾಡಿಕೊಳ್ಳಲು ಪ್ರಯತ್ನಿಸಿದರೆ ಎಲ್ಲವೂ ಸಣ್ಣದೆನಿಸುತ್ತದೆ. ಟಿ20 ಮಾದರಿಯಲ್ಲಿ ನೀವು ವಿಕೆಟ್ ಉಳಿಸಿಕೊಳ್ಳುವುದಕ್ಕಾಗಿ ಪ್ರಯತ್ನ ಪಡಲೇಬಾರದು" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್.

ಕಳೆದ ವಿಶ್ವಕಪ್‌ನಲ್ಲಿ ಭಾರತಕ್ಕೆ ಕಂಟಕವಾಗಿದ್ದ ಶಾಹಿನ್
ಶಾಹೀನ್ ಅಫ್ರಿದಿ ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಕಣಕ್ಕಿಳಿದಾಗ ತಂಡಕ್ಕೆ ದೊಡ್ಡ ಆಘಾತ ನೀಡಿದ್ದರು. ಈ ಮೂಲಕ ಭಾರ್ತದ ವಿರುದ್ಧ ಪಾಕಿಸ್ತಾನ ಮೇಲುಗೈ ಸಾಧಿಸಲು ಕಾರಣವಾಗಿದ್ದರು. ಭಾರತದ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಇಬ್ಬರನ್ನು ಕೂಡ ಪವರ್‌ಪ್ಲೇ ಅವಧಿಯಲ್ಲಿಯೇ ಫೆವಿಲಿಯನ್‌ಗೆ ಅಟ್ಟುವ ಮೂಲಕ ಪಾಕ್ ಮೇಲುಗೈ ಸಾಧಿಸಲು ಕಾರಣವಾದರು. ಅದಾದ ಬಳಿಕ ಅರ್ಧ ಶತಕ ಸಿಡಿಸಿ ಮಿಂಚಿದ್ದ ನಾಯಕ ವಿರಾಟ್ ಕೊಹ್ಲಿಯನ್ನು ಕೂಡ ಶಾಹಿನ್ ಅಫ್ರಿದಿ ಔಟ್ ಮಾಡುವ ಮೂಲಕ ಈ ಪಂದ್ಯದಲ್ಲಿ ಮೂರು ವಿಕೆಟ್ ಪಡೆದು ಭಾರೀ ಯಶಸ್ಸು ಸಾಧಿಸಿದ್ದರು.

ಅಗ್ರ ಕ್ರಮಾಂಕ ಬಲಿಷ್ಠವಾಗಿದೆ
ಇನ್ನು ಶಾಹಿನ್ ಅಫ್ರಿದಿ ಹೊಸ ಚೆಂಡಿನಲ್ಲಿ ಅತ್ಯಂತ ಅಪಾಯಕಾರಿ ವೇಗಿ ಎಂಬುದು ತನಗೆ ಅರಿವಿದೆ ಎಂದಿರುವ ಗಂಭೀರ್ ಭಾರತದ ಬ್ಯಾಟಿಂಗ್ ಕ್ರಮಾಂಕದ ಗುಣಮಟ್ಟದ ಬಗ್ಗೆಯೂ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. "ಶಾಹಿನ್ ಶಾ ಅಫ್ರಿದಿ ಹೊಸ ಚೆಂಡಿನಲ್ಲಿ ಅಪಾಯಕಾರಿಯಾಗಬಲ್ಲ ಆಟಗಾರ ಎಂದು ನನಗೆ ತಿಳಿದಿದೆ. ಆದರೆ ಅದನ್ನು ಗಣನೆಗೆ ತೆಗೆದುಕೊಳ್ಳದೆ ಹೆಚ್ಚು ರನ್‌ಗಳನ್ನು ಗಳಿಸುವ ಪ್ತಯತ್ನ ನಡೆಸಬೇಕು ಭಾರತದ ಆಟಗಾರರು. ಚೆಂಡು ಸರಿಯಾದ ಸ್ಥಳದಲ್ಲಿ ಬರುವುದು ಗಮನಿಸಿ ಉತ್ತಮ ಸಮಯ ಮಾಡಿಕೊಂಡು ಬಾರಿಸಬೇಕು. ಭಾರತ ತಂಡದ ಅಗ್ರ 3-4 ಆಟಗಾರರು ಗುಣಮಟ್ಟದ ಆಟಗಾರರನ್ನು ಹೊಂದಿದ್ದು ಅವರು ಖಂಡಿತವಾಗಿಯೂ ಶಾಹೀನ್ ಶಾ ಆಫ್ರಿದಿಯನ್ನು ಸಮರ್ಥವಾಗಿ ಎದುರಿಸಲಿದ್ದಾರೆ" ಎಂದಿದ್ದಾರೆ ಗೌತಮ್ ಗಂಭೀರ್.
ಟಿ20 ವಿಶ್ವಕಪ್‌ಗಾಗಿ ಭಾರತ ತಂಡ ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್ ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್


Click it and Unblock the Notifications
