NZ vs SL: ಶ್ರೀಲಂಕಾ ವಿರುದ್ಧ ಶತಕ ಸಿಡಿಸಿ ಬೃಹತ್ ಟಿ20 ವಿಶ್ವಕಪ್ ದಾಖಲೆ ಮುರಿದ ಗ್ಲೆನ್ ಫಿಲಿಪ್ಸ್

ಶನಿವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್‌ನ ಸೂಪರ್ 12ರ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ವಿರುದ್ಧ ನ್ಯೂಜಿಲೆಂಡ್ ತಂಡ ಭರ್ಜರಿಯಾಗಿ ಜಯ ಗಳಿಸಿದ್ದು, ಪ್ರಮುಖ 2 ಅಂಕಗಳನ್ನು ಪಡೆದುಕೊಂಡು ಗುಂಪು 1ರ ಪಾಯಿಂಡ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.
ನ್ಯೂಜಿಲೆಂಡ್ ನೀಡಿದ್ದ 168 ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿದ ಶ್ರೀಲಂಕಾ ತಂಡ ಆರಂಭದಲ್ಲಿಯೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಿಯಮಿತವಾಗಿ ವಿಕೆಟ್ ಕಳೆದುಕೊಂಡ ಶ್ರೀಲಂಕಾ ಅಂತಿಮವಾಗಿ 19.1 ಓವರ್‌ಗಳಲ್ಲಿ 102 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ನ್ಯೂಜಿಲೆಂಡ್ ತಂಡ 65 ರನ್‌ಗಳ ಬೃಹತ್ ಅಂತರದಿಂದ ಜಯ ದಾಖಲಿಸಿತು.
ನ್ಯೂಜಿಲೆಂಡ್ ತಂಡದ ಬ್ಯಾಟ್ಸ್‌ಮನ್ ಗ್ಲೆನ್ ಫಿಲಿಪ್ಸ್ ಅವರು ಟಿ20 ವಿಶ್ವಕಪ್ 2022ರ ಗ್ರೂಪ್ 1 ಸೂಪರ್ 12ರ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಿರುಸಿನ ಶತಕದೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ತಾವು ಅತ್ಯುತ್ತಮ ಬ್ಯಾಟರ್ ಎಂಬುದನ್ನು ತೋರಿಸಿದರು.
ಗ್ಲೆನ್ ಫಿಲಿಪ್ಸ್ 64 ಎಸೆತಗಳಲ್ಲಿ 104 ರನ್ ಸಗಳಿಸುವ ಮೂಲಕ ನ್ಯೂಜಿಲೆಂಡ್ 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 167 ರನ್ ಒಟ್ಟುಗೂಡಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳು ಸೇರಿದ್ದವು.

ಗ್ಲೆನ್ ಫಿಲಿಪ್ಸ್ ಟಿ20 ವಿಶ್ವಕಪ್ ಇತಿಹಾಸದ 4ನೇ ಕ್ರಮಾಂಕದಲ್ಲಿ ಶತಕ
ಗ್ಲೆನ್ ಫಿಲಿಪ್ಸ್ ಅವರು ನ್ಯೂಜಿಲೆಂಡ್‌ನ ಅನಿಶ್ಚಿತ ಪರಿಸ್ಥಿತಿಯಲ್ಲಿ ಬ್ಯಾಟಿಂಗ್‌ಗೆ ಬಂದರು, ಸ್ಕೋರ್‌ಕಾರ್ಡ್ 15/3 ಇದ್ದಾಗ ಆರಂಭಿಕ ಬ್ಯಾಟರ್‌ಗಳು ಮತ್ತು ನಾಯಕ ಕೇನ್ ವಿಲಿಯಮ್ಸನ್ ಬೇಗನೆ ವಿಕೆಟ್ ಕಳೆದುಕೊಂಡಿತ್ತು. ನಂತರ ಫಿಲಿಪ್ಸ್ ಮತ್ತು ಡೇರಿಲ್ ಮಿಚೆಲ್ ಸ್ಕೋರ್ ಬೋರ್ಡ್‌ನಲ್ಲಿ ಹೋರಾಟದ ಮೂಲಕ ಮೊತ್ತವನ್ನು ಹೆಚ್ಚಿಸಿದರು.
ತನ್ನ ಶತಕದ ಪ್ರಕ್ರಿಯೆಯಲ್ಲಿ ಗ್ಲೆನ್ ಫಿಲಿಪ್ಸ್ ಅವರು ಒಂದು ಬೃಹತ್ ದಾಖಲೆಯನ್ನು ಸಾಧಿಸಿದರು. ಅವರ 102ನೇ ಟಿ20 ಪಂದ್ಯದಲ್ಲಿ 4ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವಾಗ ಬ್ಯಾಟರ್‌ನಿಂದ ಅತ್ಯುತ್ತಮ ಪ್ರದರ್ಶನವಾಗಿದೆ. ಗ್ಲೆನ್ ಫಿಲಿಪ್ಸ್ ಟಿ20 ವಿಶ್ವಕಪ್ ಇತಿಹಾಸದಲ್ಲಿ 4 ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬಂದು ಶತಕ ಬಾರಿಸಿದ ಮೊದಲ ಬ್ಯಾಟರ್ ಎನಿಸಿದರು.

ಗ್ಲೆನ್ ಫಿಲಿಪ್ಸ್ ಟಿ20 ಪಂದ್ಯಗಳಲ್ಲಿ 149 ಸಿಕ್ಸರ್
ಇದೇ ವೇಳೆ, 2021ರಿಂದ ಗ್ಲೆನ್ ಫಿಲಿಪ್ಸ್ ಟಿ20 ಪಂದ್ಯಗಳಲ್ಲಿ 149 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ, ಇದು ಎರಡನೇ ಅತಿ ಹೆಚ್ಚಿನ ದಾಖಲೆಯಾಗಿದೆ. ಟಿ20ಯಲ್ಲಿ 152 ಸಿಕ್ಸರ್‌ಗಳನ್ನು ಸಿಡಿಸಿರುವ ಇಂಗ್ಲೆಂಡ್‌ನ ಲಿಯಾಮ್ ಲಿವಿಂಗ್‌ಸ್ಟೋನ್ ಅವರಿಗಿಂತ ಹಿಂದೆ ಇದ್ದಾರೆ.
ಗ್ಲೆನ್ ಫಿಲಿಪ್ಸ್ ಹೊರತುಪಡಿಸಿ, ಉಳಿದ ಬ್ಯಾಟರ್‌ಗಳಾರು ದೊಡ್ಡ ಸ್ಕೋರ್ ಮಾಡಲು ವಿಫಲರಾದರು. 24 ಎಸೆತಗಳಲ್ಲಿ 22 ರನ್ ಗಳಿಸಿದ ಡೇರಿಲ್ ಮಿಚೆಲ್ ಕಿವೀಸ್ ಪರ ಎರಡನೇ ಅತ್ಯುತ್ತಮ ಸ್ಕೋರರ್ ಎನಿಸಿದರು. ಗ್ಲೆನ್ ಫಿಲಿಪ್ಸ್ ತಮ್ಮ ಅತ್ಯುತ್ತಮ ಶತಕದ ಹಾದಿಯಲ್ಲಿ ಒಂದು ಜೀವದಾನ ಪಡೆದ ಅದೃಷ್ಟವಂತರು.

ಶ್ರೀಲಂಕಾ 102 ರನ್‌ಗಳಿಗೆ ಆಲೌಟ್
ಗ್ಲೆನ್ ಫಿಲಿಪ್ಸ್ ಅವರು 12 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ಅವರ ಕ್ಯಾಚ್ ಅನ್ನು ಕೈಬಿಡಲಾಯಿತು. ಕ್ಯಾಚ್ ಬಿಟ್ಟವರು ಪಾತುಮ್ ನಿಸ್ಸಾಂಕ. ವನಿಂದು ಹಸರಂಗ ಅವರ ಬೌಲಿಂಗ್‌ನಲ್ಲಿ ನೇರವಾಗಿ ಕೈಗೆ ಬಂದ ಕ್ಯಾಚ್ ಬಿಟ್ಟರು. ಅದು ಶ್ರೀಲಂಕಾಗೆ ಮುಳುವಾಯಿತು.
168 ರನ್‌ಗಳ ಬೆನ್ನಟ್ಟಿದ ಶ್ರೀಲಂಕಾ ಭಯಾನಕ ಆರಂಭವನ್ನು ಪಡೆಯಿತು. ಮೊದಲ 10 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 58 ರನ್ ಗಳಿಸಿತ್ತು. ಇಲ್ಲಿಂದ ಮುಂದೆ ಶ್ರೀಲಂಕಾ ಪರ ನಾಯಕ ದಸುನ್ ಶನಕ 32 ಎಸೆತಗಳಲ್ಲಿ 35 ರನ್ ಗಳಿಸಿದರೆ, ಮಧ್ಯಮ ಕ್ರಮಾಂಕದ ಬ್ಯಾಟರ್ ಭಾನುಕಾ ರಾಜಪಕ್ಸೆ 22 ಎಸೆತಗಳಲ್ಲಿ 34 ರನ್ ಗಳಿಸಿದರು. ಆದರೆ ಸೋಲಿನಿಂದ ಪಾರು ಮಾಡಲಾಗಲಿಲ್ಲ ಮತ್ತು 102 ರನ್‌ಗಳಿಗೆ ಆಲೌಟ್ ಆಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications