For Quick Alerts
ALLOW NOTIFICATIONS  
For Daily Alerts
 

ಪಾಕ್ ಸ್ಪಿನ್ನರ್ ಉಸ್ಮಾನ್ ತಾರೀಕ್ ಎದುರಿಸಲು ಟೀಮ್ ಇಂಡಿಯಾ ರೆಡಿ ಎಂದ ಇಶಾನ್‌

ನವದೆಹಲಿ: ಟಿ20 ವಿಶ್ವಕಪ್‌ 2026ರ ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಣ ಬಿಗ್‌ ಫೈಟ್‌ಗೆ ದಿನಗಣನೆ ಆರಂಭವಾಗಿದೆ. ಕಳೆದ ಕೆಲವು ದಿನಗಳಿಂದ ಮೈದಾನದ ಹೊರಗೆ ನಡೆದ ನಾಟಕಕ್ಕೆ ತೆರೆ ಬಿದ್ದಿದೆ. ಮತ್ತು ಉಭಯ ತಂಡಗಳು ದೊಡ್ಡ ವೇದಿಕೆಯಲ್ಲಿ ಮುಖಾಮುಖಿಯಾಗಲಿವೆ. ಆರಂಭದ ದಿನಗಳಲ್ಲಿ ವೇಗದ ಬೌಲಿಂಗ್ ಹಾಗೂ ಬ್ಯಾಟಿಂಗ್ ನಡುವಿನ ಕಾಳಗ ಎಂದೇ ಖ್ಯಾತಿ ಪಡೆದಿದ್ದ ಭಾರತ ಹಾಗೂ ಪಾಕ್ ನಡುವಣ ಪಂದ್ಯ ದಿನ ಕಳೆದಂತೆ ತನ್ನ ಸ್ವರೂಪ ಬದಲಿಸಿದೆ.

ಟೀಮ್ ಇಂಡಿಯಾ, ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಹೇಗೆಲ್ಲಾ ತಯಾರಿ ನಡೆಸಿದೆ ಎಂಬುದರ ಒದು ಘಲಕ್ ನವದೆಹಲಿಯಲ್ಲಿ ನಡೆದ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಸಿಕ್ಕಿದೆ. ಟಿ20 ವಿಶ್ವಕಪ್‌ನ ಲೀಗ್‌ ಹಂತದ ಪಂದ್ಯದಲ್ಲಿ ಟೀಮ್ ಇಂಡಿಯಾ ನಮೀಬಿಯಾ ತಂಡವನ್ನು 93 ರನ್‌ಗಳಿಂದ ಮಣಿಸಿದೆ. ಭಾರತ ಈ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ನೆರವಾದವರು, ಆರಂಭಿಕ ಆಟಗಾರ ಇಶಾನ್‌ ಕಿಶನ್. ಇವರು ತಮ್ಮ ಸ್ಫೋಟಕ ಆಟದಿಂದ ಅರ್ಧಶತಕ ಬಾರಿಸಿ ಮಿಂಚಿದರು. ಅಲ್ಲದೆ ತಂಡ ಪಾಕ್ ವಿರುದ್ಧದ ಪಂದ್ಯಕ್ಕೆ ಹೇಗೆ ತಯಾರಿ ನಡೆಸಿದೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.

T20 World Cup

ನಮೀಬಿಯಾ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಇಶಾನ್‌ ಕಿಶನ್, ನಾವು ನಮ್ಮ ಅಭ್ಯಾಸವನ್ನು ಪೂರ್ಣಗೊಳಿಸಿದ್ದೇವೆ. ಇನ್ನು ನಾವು ಚೆಂಡನ್ನು ನೋಡುವುದು ಹಾಗೂ ನಮ್ಮ ನೈಜ ಆಟವನ್ನು ಆಡುವುದೇ ಗುರಿ ಎಂದಿದ್ದಾರೆ.ಇನ್ನು ಚೆಂಡು ನಮಗೆ ದೊಡ್ಡ ಹೊಡೆತಕ್ಕೆ ಸಹಕಾರಿಯಾಗಿದ್ದರೆ ನಾವು ಅದನ್ನು ಬಾರಿಸುತ್ತೇವೆ. ಹೊಡಿಬಡಿ ಆಟದ ರೀತಿಯಲ್ಲೇ ನಾವು ಆಡುತ್ತಿದ್ದೇವೆ. ಅಲ್ಲದೆ ನಮ್ಮ ತಂಡದ ಕ್ಷಮತೆಯ ಮೇಲೆ ನಮಗೆ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.

ಈ ಮಟ್ಟದ ಕ್ರಿಕೆಟ್‌ ಆಟವನ್ನು ಆಡುವಾಗ ನಾವು ಎಲ್ಲ ಪಂದ್ಯಕ್ಕೂ ತಯಾರಾಗಿರುತ್ತೇವೆ. ಈ ಹಂತದಲ್ಲಿ ಕೆಲವು ವಿಡಿಯೋಗಳನ್ನು ನೋಡಿ, ಅವರ ನ್ಯೂನತೆಯನ್ನು ಅರಿತು ಆ ಬೌಲರ್‌ ಎದುರಿಸುತ್ತೇವೆ. ಇದರಿಂದ ನಮಗೆ ಆ ಬೌಲರ್‌ ಎದುರಿಸುವುದು ಹೇಗೆ ಎಂಬುದು ತಿಳಿಯುತ್ತದೆ ಎಂದು ಇಶಾನ್‌ ಸ್ಪಷ್ಟ ಪಡಿಸಿದ್ದಾರೆ.

ಪಾಕ್‌ ತಂಡದಲ್ಲಿದ್ದಾರೆ ನುರಿತ ಸ್ಪಿನ್ ಬೌಲರ್ಸ್‌

ಟೀಮ್ ಇಂಡಿಯಾ ನಮೀಬಿಯಾ ವಿರುದ್ಧದ ಪಂದ್ಯವನ್ನು ಗೆದ್ದಿರ ಬಹುದು. ಆದರೆ ನಮೀಬಿಯಾ ಸ್ಪಿನ್ ಬೌಲರ್‌ ಅವರನ್ನು ಎದುರಿಸುವಲ್ಲಿ ವಿಫಲವಾಗಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಇದೇ ರೀತಿ ಮಾಡಿದಲ್ಲಿ ದೊಡ್ಡ ಆಘಾತವಾಗುತ್ತದೆ. ಪಾಕಿಸ್ತಾನ ತಂಡದಲ್ಲಿ ನುರಿತ ಸ್ಪಿನ್ ಬೌಲರ್‌ಗಳ ದಂಡೇ ಇದೆ. ಅಬ್ರಾರ್ ಅಹ್ಮದ, ಶಾಬದ್ ಖಾನ್, ಮೊಹಮ್ಮದ್‌ ನವಾಜ್‌ನ ಸೈಮ್‌ ಆಯುಬ್‌, ಉಸ್ಮಾನ್‌ ತಾರೀಕ್‌ ನಂತಹ ಬೌಲರ್‌ಗಳು ಇದ್ದಾರೆ. ಈ ಬೌಲರ್‌ಗಳನ್ನು ಎದುರಿಸುವುದೇ ದೊಡ್ಡ ಸವಾಲು ಆಗಿದೆ. ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ಸ್ಪಿನ್ ಬೌಲರ್‌ಗಳನ್ನು ಎದುರಿಸುವಲ್ಲೇ ವಿಫಲವಾಗಿದೆ. ಸ್ಪಿನ್ ಬೌಲಿಂಗ್‌ಗೆ ಹೆಚ್ಚಿನ ವಿಕೆಟ್‌ ಒಪ್ಪಿಸಿದೆ.

Story first published: Friday, February 13, 2026, 10:13 [IST]
Other articles published on Feb 13, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+