T20 World Cup 2024: ಟೂರ್ನಿಯಿಂದ ಪಾಕಿಸ್ತಾನ ಹೊರಗುಳಿಯುವುದು ಬಹುತೇಕ ಖಚಿತ; ಇಲ್ಲಿವೆ ಪ್ರಮುಖ 3 ವಿಷಯಗಳು!
ಜೂನ್ 13 ಗುರುವಾರ, 2024ರ ಟಿ20 ವಿಶ್ವಕಪ್‌ನ ಸೂಪರ್-8 ಗೆ ಅರ್ಹತೆ ಪಡೆಯಲು ಪಾಕಿಸ್ತಾನದ ಲೆಕ್ಕಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರತ ಮೊದಲ ತಂಡವಾಗಿ ಎ ಗುಂಪಿನಿಂದ ಸೂಪರ್-8 ಹಂತಕ್ಕೆ ಅರ್ಹತೆ ಪಡೆದಿದೆ.
ಸೂಪರ್-8 ಹಂತಕ್ಕೆ ಅರ್ಹತೆ ಪಡೆಯಲು ಪಾಕಿಸ್ತಾನ ತಂಡವು ತನ್ನ ಮುಂದಿನ ಪಂದ್ಯ ಹಾಗೂ ಯುಎಸ್‌ಎ ಎದುರು ಐರ್ಲೆಂಡ್ ಗೆಲ್ಲುವುದರ ಮೇಲೆ ಅವಲಂಬಿತವಾಗಿದೆ. ಅದರೂ ಪಾಕಿಸ್ತಾನಕ್ಕೆ ಸೂಪರ್-8 ತಲುಪಲು ಕಷ್ಟವಾಗಿರುವ 3 ಪ್ರಮುಖ ವಿಷಯಗಳು ಇಲ್ಲಿವೆ.

ಯುಎಸ್ಎ ಸೋಲುವುದು ಪಾಕ್‌ಗೆ ಅನಿವಾರ್ಯ
ಪಾಕಿಸ್ತಾನವು ಇಲ್ಲಿಯವರೆಗೆ ಮೂರು ಪಂದ್ಯಗಳನ್ನು ಆಡಿದ್ದು, 1ರಲ್ಲಿ ಗೆದ್ದರೆ 2ರಲ್ಲಿ ಹೀನಾಯವಾಗಿ ಸೋತಿದೆ. ಇದೀಗ ತನ್ನ ಕೊನೆಯ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಆಡಲಿದೆ.
ಇತ್ತ ಐರ್ಲೆಂಡ್ ವಿರುದ್ಧ ಯುಎಸ್ಎ ಗೆದ್ದರೆ, ಅದು 6 ಅಂಕಗಳನ್ನು ಪಡೆದು ಸೂಪರ್-8 ಗೆ ಅರ್ಹತೆ ಪಡೆಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ತನ್ನ ಕೊನೆಯ ಪಂದ್ಯವನ್ನು ಗೆದ್ದರೂ ಟಿ20 ವಿಶ್ವಕಪ್ ಪಯಣ ಅಲ್ಲಿಗೆ ಮುಗಿಯುತ್ತದೆ. ಹೀಗಾಗಿ ಸೂಪರ್-8 ಗೆ ಪಾಕಿಸ್ತಾನ ಅರ್ಹತೆ ಪಡೆಯಲು ಐರ್ಲೆಂಡ್ ವಿರುದ್ಧ ಯುಎಸ್‌ಎ ಹೀನಾಯವಾಗಿ ಸೋಲಬೇಕಿದೆ.
ಪಾಕಿಸ್ತಾನಕ್ಕೆ ಮಳೆ ಭೀತಿ
ಮೊದಲನೆಯದಾಗಿ, ಪಾಕಿಸ್ತಾನದ ಸೂಪರ್-8 ಕ್ಕೆ ಆರ್ಹತೆ ಪಡೆಯುವ ಭರವಸೆಗೆ ಮಳೆಯಿಂದ ಅಡ್ಡಿಯಾಗುವ ಸಾಧ್ಯತೆಗಳಿವೆ. ಏಕೆಂದರೆ, ಐರ್ಲೆಂಡ್ vs ಯುಎಸ್‌ಎ ನಡುವಿನ ಪಂದ್ಯದ ವೇಳೆ ಮಳೆ ಆಗುವ ಸಂಭವವಿದೆ.
ಈ ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ. ಒಂದು ವೇಳೆ ಈ ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ಸಿಗಲಿದೆ. ಆಗ ಅಮೆರಿಕ 5 ಅಂಕಗಳೊಂದಿಗೆ ಅರ್ಹತೆ ಪಡೆಯಲಿದೆ. ಪಾಕಿಸ್ತಾನ ತನ್ನ ಕೊನೆ ಪಂದ್ಯವನ್ನು ಗೆದ್ದರೂ ಕೇವಲ 4 ಅಂಕಗಳನ್ನು ತಲುಪಬಹುದು.
ಐರ್ಲೆಂಡ್-ಪಾಕ್ ಪಂದ್ಯಕ್ಕೆ ಮಳೆಯಾದರೆ ಸಂಕಷ್ಟ
ಐರ್ಲೆಂಡ್ ವಿರುದ್ಧ ಅಮೇರಿಕಾ ಸೋತು, ಇತ್ತ ಪಾಕಿಸ್ತಾನದ ಕೊನೆ ಪಂದ್ಯದಲ್ಲಿ ಮಳೆ ಬಂದರೆ ಬಾಬರ್ ಅಜಮ್ ಪಡೆ ಟಿ20 ವಿಶ್ವಕಪ್‌ನಿಂದ ಔಟಾಗಲಿದೆ. ಏಕೆಂದರೆ ಪಂದ್ಯ ರದ್ದಾದ ಸಂದರ್ಭದಲ್ಲಿ, ಎರಡೂ ತಂಡಗಳು ತಲಾ ಒಂದು ಅಂಕವನ್ನು ಪಡೆಯುತ್ತವೆ.
ಆಗ ಪಾಕಿಸ್ತಾನವು ಕೇವಲ 3 ಅಂಕಗಳನ್ನು ತಲುಪಲು ಸಾಧ್ಯವಾಗುತ್ತದೆ. ಯುಎಸ್‌ಎ 4 ಅಂಕಗಳೊಂದಿಗೆ ಅರ್ಹತೆ ಪಡೆಯುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications