ಟಿ20 ವಿಶ್ವಕಪ್‌ಗೆ ಭರ್ಜರಿ ನಗದು ಪುರಸ್ಕಾರ ಘೋಷಿಸಿದ ಐಸಿಸಿ

ಅಬುಧಾಬಿ: ಮುಂಬರಲಿರುವ ಟಿ20 ವಿಶ್ವಕಪ್‌ಗಾಗಿ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಪ್ರತಿಷ್ಠಿತ ಈ ಕ್ರಿಕೆಟ್ ಟೂರ್ನಿಯಲ್ಲಿ ವಿಶ್ವದ 16 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಚಾಂಪಿಯನ್ಸ್ ಎನಿಸುವ ತಂಡಕ್ಕೆ ದೊಡ್ಡ ಮಟ್ಟದಲ್ಲಿ ನಗದು ಪುರಸ್ಕಾರ ದೊರೆಯಲಿದೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭಾನುವಾರ (ಅಕ್ಟೋಬರ್ 10) ಟಿ20 ವಿಶ್ವಕಪ್‌ಗೆ ಭರ್ಜರಿ ನಗದು ಪುರಸ್ಕಾರ ಘೋಷಿಸಿದೆ.
ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿ ನಡೆಯುತ್ತಿದೆ. ಇದು ಮುಗಿದ ಬಳಿಕ, ಅಂದರೆ ಅಕ್ಟೋಬರ್ 15ಕ್ಕೆ ಐಪಿಎಲ್ ಮುಗಿದರೆ ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ಯುಎಇ ಮತ್ತು ಓಮನ್‌ನಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ.

ಗೆಲ್ಲುವ ತಂಡಕ್ಕೆ ಬಹುಮಾನವೆಷ್ಟು?
ಟಿ20 ವಿಶ್ವಕಪ್‌ನಲ್ಲಿ ಗೆಲ್ಲುವ ತಂಡಕ್ಕೆ ದೊಡ್ಡ ಮಟ್ಟದಲ್ಲಿ ನಗದು ಪುರಸ್ಕಾರ ಸಿಗಲಿದೆ. ಚಾಂಪಿಯನ್ಸ್ ಎನಿಸುವ ತಂಡ 1.6 ಮಿಲಿಯನ್ ಯುಎಸ್‌ಡಿ ಪಡೆದುಕೊಳ್ಳಲಿದೆ. ಇದು ಭಾರತೀಯ ಕರೆನ್ಸಿಗೆ ಹೋಲಿಸಿದರೆ 12,02,10,400 ರೂಪಾಯಿ ಆಗುತ್ತದೆ. ಟೂರ್ನಿಯ ಒಟ್ಟಾರೆ ಬಹುಮಾನಗಳ ಮೊತ್ತ 5.6 ಮಿಲಿಯನ್ ಯುಎಸ್‌ಡಿ ಆಗಿರಲಿದೆ. ಅಂದರೆ 42,07,36,400 ರೂ. ಆಗಿರಲಿದೆ. ಸೆಮಿಫೈನಲ್‌ನಲ್ಲಿ ಸೋಲುವ ಎರಡು ತಂಡಗಳು ತಲಾ ಯುಎಸ್‌ಡಿ 400,000 (3,00,52,600 ರೂ.) ಪಡೆದುಕೊಳ್ಳಲಿವೆ. ನವೆಂಬರ್ 10, 11ಕ್ಕೆ ಈ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಈ ಬಾರಿಯ ವಿಶ್ವಕಪ್ ವೇಳೆ ಡಿಆರ್‌ಎಸ್ ಕೂಡ ಇರಲಿದೆ. ಹೀಗಾಗಿ ಪಂದ್ಯಗಳು ಹೆಚ್ಚು ರೋಚಕ ಅನ್ನಿಸಲಿವೆ.

ಸೋಲುವ ತಂಡಗಳಿಗೂ ಭರ್ಜರಿ ಮೊತ್ತ
ಸೂಪರ್ 12 ಹಂತದಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ತಂಡಗಳು ಸೆಣಸಾಡಲಿವೆ. ಸೆಮಿಫೈನಲ್ ಅವಕಾಶವನ್ನು ಕಳೆದುಕೊಳ್ಳುವ ತಂಡಗಳು ತಲಾ ಯುಎಸ್‌ಡಿ 70,000 (52,59,205 ರೂ.) ಪಡೆದುಕೊಳ್ಳಲಿವೆ. ಆರಂಭಿಕ ಹಂತದಲ್ಲೇ ಹೊರ ಬೀಳುವ ಪ್ರತೀ ತಂಡಗಳು ಯುಎಸ್‌ಡಿ 40,000 (30,05,260 ರೂ.) ಪಡೆದುಕೊಳ್ಳಲಿವೆ. ಸೂಪರ್ 12ಗೆ ಬರಲು ಶ್ರಮಿಸುತ್ತಿರುವ ತಂಡಗಳೆಂದರೆ ಬಾಂಗ್ಲಾದೇಶ, ಐರ್ಲೆಂಡ್, ನಮೀಬಿಯಾ, ನೆದರ್ಲ್ಯಾಂಡ್ಸ್, ಓಮನ್, ಪಪುವಾ ನ್ಯೂಗಿನಿಯಾ, ಸ್ಕಾಟ್ಲೆಂಡ್ ಮತ್ತು ಶ್ರೀಲಂಕಾ. 2016ರಂತೆ ಸೂಪರ್ 12ನಲ್ಲಿ ಗೆಲ್ಲುವ ಪ್ರತೀ ಪಂದ್ಯಕ್ಕೂ ಬೋನಸ್ ನಗದು ಇರಲಿದೆ. ಸೂಪರ್ 12 ಹಂತದ 30 ಪಂದ್ಯಗಳಲ್ಲಿ ಪ್ರತೀ ಪಂದ್ಯಗಳ ಗೆಲುವಿಗೂ ಯುಎಸ್‌ಡಿ 40,000 ಸಿಗಲಿದೆ.

ಹಿಂದಿನ ಟಿ20 ವಿಶ್ವಕಪ್ ಇಣುಕು ನೋಟ
2007ರಲ್ಲಿ ಆರಂಭಗೊಂಡಿರುವ ಟಿ20 ವಿಶ್ವಕಪ್ ಟೂರ್ನಿ ಈವರೆಗೆ ಒಟ್ಟು ಆರು ಆವೃತ್ತಿಗಳನ್ನು ಕಂಡಿದೆ. ಈ ಬಾರಿ ನಡೆಯುತ್ತಿರುವುದು 7ನೇ ಆವೃತ್ತಿ. ಭಾರತ, ಪಾಕಿಸ್ತಾನ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ಪ್ರಶಸ್ತಿ ಗೆದ್ದಿವೆ. ಇದರಲ್ಲಿ ವೆಸ್ಟ್ ಇಂಡೀಸ್ ತಂಡ 2012 ಮತ್ತು 2016ರಲ್ಲಿ ಅಂದರೆ ಕಡೇಯ ಸೀಸನ್‌ನಲ್ಲಿ ಚಾಂಪಿಯನ್ಸ್ ಪಟ್ಟ ಗೆದ್ದಿದೆ. ಬಲಿಷ್ಠ ದೇಶಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಗೆದ್ದಿಲ್ಲ. ಭಾರತ ಆರಂಭಿಕ ಆವೃತ್ತಿ ಅಂದರೆ 2007ರಲ್ಲಿ ಪಾಕಿಸ್ತಾನ ಸೋಲಿಸಿ ಚೊಚ್ಚಲ ಟ್ರೋಫಿ ಗೆದ್ದಿತ್ತು. ಎಂಎಸ್ ಧೋನಿ ತಂಡದ ನಾಯಕರಾಗಿದ್ದರು. ಈ ಬಾರಿ ಅಕ್ಟೋಬರ್ 24ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಟೂರ್ನಿಯಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಕುತೂಹಲ ಮೂಡಿಸಿದೆ. 2020ರಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿ ಕೋವಿಡ್ ಕಾರಣದಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟಿತ್ತು. ಅದೂ ಅಲ್ಲದೆ, ಭಾರತದಲ್ಲಿ ನಡೆಯಬೇಕಿದ್ದ ಟೂರ್ನಿ ಕೋವಿಡ್ ಭೀತಿಯಿಂದಾಗಿ ಯುಎಇ ಮತ್ತು ಓಮನ್‌ನಲ್ಲಿ ನಡೆಯುತ್ತಿದೆ. ಆದರೆ ಆತಿಥ್ಯ ಈಗಲೂ ಭಾರತದ ಕೈಯಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications