Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND Vs Pak : ಭಾರತ-ಪಾಕಿಸ್ತಾನ ಪಂದ್ಯ ರದ್ದಾದರೆ ಯಾರಿಗೆ ಲಾಭ, ಮುಂದಿನ ಲೆಕ್ಕಾಚಾರವೇನು ಗೊತ್ತಾ?

T20 World Cup: If Rain Spoils India-Pakistan Match, Know Points Table, Semifinal Calculation

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ 10 ವಿಕೆಟ್‌ಗಳ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿ ರೋಹಿತ್ ಶರ್ಮಾ ಪಡೆ ಸಿದ್ಧವಾಗಿದೆ.

ಇನ್ನು ಗಾಯದಿಂದ ಚೇತರಿಸಿಕೊಂಡಿರುವ ಶಾಹೀನ್ ಅಫ್ರಿದಿ ಪಾಕಿಸ್ತಾನ ತಂಡವನ್ನು ಸೇರಿಕೊಂಡಿದ್ದಾರೆ. ಬಲಿಷ್ಠ ವೇಗದ ಬೌಲಿಂಗ್ ಪಡೆ ಹೊಂದಿರುವ ಪಾಕಿಸ್ತಾನ ಭಾರತದ ವಿರುದ್ಧದ ಜಯದ ಓಟವನ್ನು ಮುಂದುವರೆಸುವ ಉತ್ಸಾಹದಲ್ಲಿದೆ. ಭಾರತ ಕೂಡ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 6 ರನ್‌ಗಳ ಜಯ ಗಳಿಸಿದ್ದು ಸಾಕಷ್ಟು ಆತ್ಮವಿಶ್ವಾಸ ಪಡೆದುಕೊಂಡಿದೆ.

ಅಕ್ಟೋಬರ್ 23 ರಂದು ಐಕಾನಿಕ್ ಎಂಸಿಜಿ ಅಂಗಳದಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಈಗ ಮಳೆ ಅಡ್ಡಿಯಾಗುವ ಆತಂಕ ಎದುರಾಗಿದೆ. ಆಸ್ಟ್ರೇಲಿಯಾ ಹವಾಮಾನ ಇಲಾಖೆ ಪ್ರಕಾರ, ಅಕ್ಟೋಬರ್ 23 ರಂದು ಮೆಲ್ಬೋರ್ನ್‌ನಲ್ಲಿ ಸುಮಾರು 80 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ. ಪಂದ್ಯಕ್ಕೆ ಯಾವುದೇ ಮೀಸಲು ದಿನವಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಪಂದ್ಯ ರದ್ದಾದರೆ ಯಾವ ತಂಡಕ್ಕೆ ಲಾಭವಾಗುತ್ತದೆ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುವುದು ಸಹಜ.

ಪಂದ್ಯ ರದ್ದಾದರೆ ತಲಾ ಒಂದೊಂದು ಅಂಕ ಹಂಚಿಕೆ

ಪಂದ್ಯ ರದ್ದಾದರೆ ತಲಾ ಒಂದೊಂದು ಅಂಕ ಹಂಚಿಕೆ

ಒಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯದಿದ್ದರೆ ಎರಡೂ ತಂಡಗಳಿಗೆ ತಲಾ ಒಂದು ಅಂಕಗಳನ್ನು ಹಂಚಿಕೆ ಮಾಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯಾರಿಗೆ ಯಾವ ರೀತಿಯಲ್ಲಿ ಲಾಭ, ಇದರ ಬಗ್ಗೆ ವಿವರವಾಗಿ ತಿಳಿಯಬೇಕಾಗಿದೆ.

ಸೂಪರ್-12ರಲ್ಲಿ ಭಾರತ ಮತ್ತು ಪಾಕಿಸ್ತಾನ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಕೂಡ ಸ್ಥಾನ ಪಡೆದಿದೆ. ಉಳಿದ 2 ತಂಡಗಳು ಮೊದಲ ಸುತ್ತಿನಲ್ಲಿ ಗುಂಪಿಗೆ ಪ್ರವೇಶಿಸಲಿವೆ. ಎಲ್ಲಾ ಆರು ತಂಡಗಲು ತಲಾ 5 ಪಂದ್ಯಗಳನ್ನು ಆಡಲಿವೆ.

ಟಿ20 ವಿಶ್ವಕಪ್ 2022: ಟ್ರೋಫಿ ಗೆಲ್ಲುವ ರಹಸ್ಯವನ್ನು ಬಹಿರಂಗಪಡಿಸಿದ ರೋಹಿತ್ ಶರ್ಮಾ

ಪಂದ್ಯ ನಡೆಯದಿದ್ದರೆ, ಮುಂದಿನ ಲೆಕ್ಕಾಚಾರ

ಪಂದ್ಯ ನಡೆಯದಿದ್ದರೆ, ಮುಂದಿನ ಲೆಕ್ಕಾಚಾರ

ಸೂಪರ್-12ರಲ್ಲಿ ಭಾರತ ಮತ್ತು ಪಾಕಿಸ್ತಾನ 5-5 ಪಂದ್ಯಗಳನ್ನು ಆಡಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಪಂದ್ಯ ರದ್ದಾದರೆ ಉಳಿದ 4 ಪಂದ್ಯಗಳು ಎರಡೂ ತಂಡಗಳಿಗೆ ಬಹುಮುಖ್ಯವಾಗಲಿದೆ. ಉಳಿದ 4 ಪಂದ್ಯಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು 3-3 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ ಮತ್ತು ತಲಾ ಒಂದು ಪಂದ್ಯದಲ್ಲಿ ಸೋತರೆ, ಇಬ್ಬರೂ 7-7 ಅಂಕಗಳನ್ನು ಪಡೆಯಲಿದ್ದಾರೆ.

ಪ್ರತಿ ಗೆಲುವಿಗೆ 2 ಅಂಕ ಸಿಗಲಿದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ತಂಡವು 5 ಪಂದ್ಯಗಳಲ್ಲಿ 4 ಅನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ಅದು 8 ಅಂಕಗಳನ್ನು ಹೊಂದಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಎರಡಲ್ಲಿ ಒಂದು ತಂಡ ಮಾತ್ರ ಸೆಮಿಫೈನಲ್‌ಗೆ ಹೋಗಲು ಸಾಧ್ಯವಾಗುತ್ತದೆ.

ರನ್‌ ರೇಟ್ ಮುಖ್ಯ ಪಾತ್ರ ವಹಿಸುತ್ತದೆ

ರನ್‌ ರೇಟ್ ಮುಖ್ಯ ಪಾತ್ರ ವಹಿಸುತ್ತದೆ

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ರದ್ದಾದರೆ, ರನ್‌ ರೇಟ್ ಮುಖ್ಯ ಪಾತ್ರ ವಹಿಸುತ್ತದೆ. ದೊಡ್ಡ ಗೆಲುವು ಪಡೆಯುವ ತಂಡವು ಉತ್ತಮ ರನ್ ರೇಟ್‌ನ ಲಾಭವನ್ನು ಪಡೆಯುತ್ತದೆ. 2012 ರ ಟಿ20 ವಿಶ್ವಕಪ್‌ನಲ್ಲಿ, ಭಾರತ ತಂಡವು ಸೆಮಿಫೈನಲ್‌ನಿಂದ ಹೊರಗುಳಿಯಲು ರನ್‌ ರೇಟ್ ಕಾರಣವಾಗಿತ್ತು.

ಭಾರತದ ರನ್ ರೇಟ್ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾಕ್ಕಿಂತ ಕಡಿಮೆಯಾಗಿತ್ತು. ಟಿ20 ವಿಶ್ವಕಪ್‌ನ ಇತಿಹಾಸವನ್ನು ಗಮನಿಸಿದರೆ, ಪಾಕಿಸ್ತಾನ 5 ಬಾರಿ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ ಭಾರತ ತಂಡ 3 ಬಾರಿ ಮಾತ್ರ ಸೆಮಿಫೈನಲ್ ಪ್ರವೇಶಿಸಿದೆ. ದಕ್ಷಿಣ ಆಫ್ರಿಕಾ ತಂಡ ಎರಡು ಬಾರಿ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

ಟಿ20 ವಿಶ್ವಕಪ್‌ನ ದಾಖಲೆಯನ್ನು ನೋಡಿದರೆ ಇಲ್ಲಿಯವರೆಗೆ ಭಾರತ ಮತ್ತು ಪಾಕಿಸ್ತಾನ ನಡುವೆ 6 ಪಂದ್ಯಗಳು ನಡೆದಿವೆ. 5 ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ, ಒಂದು ಪಂದ್ಯದಲ್ಲಿ ಪಾಕಿಸ್ತಾನ ಗೆದ್ದಿತ್ತು. ಒಟ್ಟಾರೆ ಟಿ20 ದಾಖಲೆ ನೋಡಿದರೆ 11 ಪಂದ್ಯಗಳಲ್ಲಿ ಭಾರತ 8 ರಲ್ಲಿ ಗೆದ್ದಿದ್ದರೆ, 3 ರಲ್ಲಿ ಸೋತಿದೆ.

Story first published: Thursday, October 20, 2022, 15:04 [IST]
Other articles published on Oct 20, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+