ಟಿ20 ವಿಶ್ವಕಪ್: ಈ 3 ಭಾವನಾತ್ಮಕ ಕಾರಣಗಳಿಗಾಗಿ ಭಾರತ vs ನಮೀಬಿಯಾ ಪಂದ್ಯ ನೋಡಲು ಮರೆಯದಿರಿ

ಭಾರತ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಸೂಪರ್ 12 ಹಂತದಿಂದಲೇ ನಿರ್ಗಮಿಸುತ್ತಿದೆ. ಸೆಮಿ ಫೈನಲ್ ಹಂತಕ್ಕೇರಲು ವಿಫಲವಾಗಿರುವ ಭಾರತ ಇಂದು ಸೂಪರ್ 12 ಹಂತದ ಕೊನೆಯ ಪಂದ್ಯವನ್ನಾಡಲು ಸಜ್ಜಾಗಿದೆ. ಭಾರತ ಹಾಗೂ ನಮೀಬಿಯಾ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಎರಡು ತಂಡಗಳು ಕೂಡ ಸೆಮಿ ಫೈನಲ್ ಹಂತಕ್ಕೇರಲು ವಿಫಲವಾಗಿದ್ದರು ಕೂಡ ಕೆಲ ಕಾರಣಗಳಿಂದಾಗಿ ಭಾರತೀಯ ಅಭಿಮಾನಿಗಳ ಪಾಲಿಗೆ ಭಾವನಾತ್ಮಕವಾಗಿ ಈ ಪಂದ್ಯ ವಿಶೇಷವಾಗಿರಲಿದೆ.
ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿತ್ತು. ಅದರಲ್ಲೂ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ನೀಡಿದ ಪ್ರದರ್ಶನ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಆದರೆ ಮುಖ್ಯ ಹಂತದಲ್ಲಿಯೇ ಭಾರತ ವೈಫಲ್ಯ ಅನುಭವಿಸಿದ ಕಾರಣದಿಂದಾಗಿ ಅನಿರೀಕ್ಷಿತವಾಗಿ ಈಗ ಸೂಪರ್ 12 ಹಂತದಿಂದಲೇ ಭಾರತ ನಿರ್ಗಮಿಸುತ್ತಿದೆ.
ಈಗಾಗಲೇ ಭಾರತ ತಂಡ ಸೆಮಿ ಫೈನಲ್‌ಗೆ ಪ್ರವೇಶಿಸಲು ವಿಫಲವಾಗಿದ್ದರೂ ಸೂಪರ್ 12 ಹಂತದ ಕೊನೆಯ ಪಂದ್ಯವನ್ನು ಇಂದು ಆಡಲಿದೆ. ಈ ಪಂದ್ಯ ಭಾರತ ಹಾಗೂ ನಮೀಬಿಯಾ ಎರಡು ಪಂದ್ಯಗಳಿಗೂ ಕೇವಲ ಔಪಚಾರಿಕ ಪಂದ್ಯ ಮಾತ್ರವೇ ಆಗಿದ್ದರೂ ಭಾರತೀಯ ಅಭಿಮಾನಿಗಳ ಪಾಲಿಗೆ ಇದು ಕೆಲ ಕಾರಣಗಳಿಂದಾಗಿ ಭಾವನಾತ್ಮಕವಾಗಿ ವಿಶೇಷ ಪಂದ್ಯವಾಗಿರಲಿದೆ. ಹಾಗಾಗಿ ಈ ಪಂದ್ಯವನ್ನು ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ನೋಡದೆ ಇರುವಂತಿಲ್ಲ!

ಟಿ20 ಮಾದರಿಯಲ್ಲಿ ನಾಯಕನಾಗಿ ವಿರಾಟ್ ಕೊಹ್ಲಿ ಅಂತಿಮ ಪಂದ್ಯ
ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ಮೂರು ಮಾದರಿಗಳಲ್ಲಿಯೂ ಮುನ್ನಡೆಸಿಕೊಂಡು ಬಂದಿದ್ದಾರೆ. ಆದರೆ ಈ ಬಾರಿಯ ಟಿ20 ವಿಶ್ವಕಪ್‌ನ ಆರಂಭಕ್ಕೂ ಮುನ್ನವೇ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನ ನಂತರ ತಾನು ಚುಟುಕು ಕ್ರಿಕೆಟ್ ಮಾದರಿಯ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದರು. ಇದೀಗ ಟೀಮ್ ಇಂಡಿಯಾದ ಹೋರಾಟ ಸೂಪರ್ 12 ಹಂತಕ್ಕೆ ಕೊನೆಯಾಗಿರುವ ಕಾರಣ ವಿರಾಟ್ ಕೊಹ್ಲಿ ನಾಯಕತ್ವದ ಕೊನೆಯ ಟಿ20 ಪಂದ್ಯ ಇದಾಗಿರಲಿದೆ. ಹೀಗಾಗಿ ಟೀಮ್ ಇಂಡಿಯಾ ಅಭಿಮಾನಿಗಳು ಶ್ರೇಷ್ಠ ಆಟಗಾರನ ನಾಯಕತ್ವದಲ್ಲಿ ಆಡುತ್ತಿರುವ ಅಂತಿಮ ಟಿ20 ಪಂದ್ಯವನ್ನು ಕಣ್ತುಂಬಿಕೊಳ್ಳಲು ಸಜ್ಜಾಗಿದ್ದಾರೆ.

ಕೋಚ್ ಆಗಿ ರವಿ ಶಾಸ್ತ್ರಿಗೆ ಅಂತಿಮ ಪಂದ್ಯ
2017ರ ಜುಲೈ ತಿಂಗಳಿನಿಂದ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಜವಾಬ್ಧಾರಿ ವಹಿಸಿಕೊಂಡಿರುವ ರವಿ ಶಾಸ್ತ್ರಿ ಭಾರತ ತಂಡದ ಅನೇಕ ಸಾಧನೆಗಳಿಗೆ ಮಾರ್ಗದರ್ಶಕರಾಗಿ ಮುನ್ನಡೆಸಿದ್ದಾರೆ. ಆದರೆ ರವಿ ಶಾಸ್ತ್ರಿ ಅವರ ಮುಖ್ಯ ಕೋಚ್ ಅವಧಿ ಈ ಟಿ20 ವಿಶ್ವಕಪ್‌ಗೆ ಕೊನೆಯಾಗುತ್ತಿದೆ. ಹೀಗಾಗಿ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿ ಜವಾಬ್ಧಾರಿ ವಹಿಸಿಕೊಳ್ಳುವ ರವಿ ಶಾಸ್ತ್ರಿ ಅವರ ಅಂತಿಮ ಪಂದ್ಯ ಇದಾಗಿರಲಿದೆ. ಹೀಗಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಈ ಪಂದ್ಯವು ಕೂಡ ಭಾವನಾತ್ಮಕವಾಗಿ ಮಹತ್ವ ಪಡೆದುಕೊಂಡಿದೆ. ರವಿ ಶಾಸ್ತ್ರಿ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಅನೇಕ ಶ್ರೇಷ್ಠ ಸಾಧನೆಗಳನ್ನು ಮಾಡುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಸಾಧಿಸಿದ ಅಮೋಘ ಜಯ, ಇಂಗ್ಲೆಂಡ್ ಪ್ರವಾಸದಲ್ಲಿ ಸಾಧಿಸಿದ ಯಶಸ್ಸು ಹಾಗು ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರಿದ ಸಾಧನೆ ಇದೆಲ್ಲದರಲ್ಲಿಯೂ ರವಿ ಶಾಸ್ತ್ರಿ ತಂಡಕ್ಕೆ ಮಾರ್ಗದರ್ಶಕರಾಗಿದ್ದರು ಎಂಬುದು ಗಮನಾರ್ಹ.

ಎಂಎಸ್ ಧೋನಿ ಮೆಂಟರ್
ಇನ್ನು 2019ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಘಾತಕಾರಿಯಾಗಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದ ನಂತರ ತಂಡದಿಂದ ಹೊರಗುಳಿದು ಬಳಿಕ ನಿವೃತ್ತಿ ಘೋಷಿಸಿದ್ದ ಎಂಎಸ್ ಧೋನಿ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಭಾಗವಾಗಿದ್ದರು. ಮೆಂಟರ್ ಆಗಿ ತಂಡದ ಜವಾಬ್ಧಾರಿ ವಹಿಸಿಕೊಂಡಿದ್ದ ಧೋನಿ ತಂಡದ ಆಟಗಾರರಿಗೆ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಮೊದಲೇ ಮಾತುಕತೆಯಂತೆ ಈ ಟಿ20 ವಿಶ್ವಕಪ್ ಅವಧಿಗೆ ಮಾತ್ರವೇ ಧೋನಿ ಮೆಂಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕಾರಣ ಅಭಿಮಾನಿಗಳು ಧೋನಿಯನ್ನು ಟೀಮ್ ಇಂಡಿಯಾ ಡಗೌಟ್‌ನಲ್ಲಿ ಮತ್ತೆ ಮಿಸ್ ಮಾಡಿಕೊಳ್ಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications