ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌: ಭಾರತ vs ಪಾಕಿಸ್ತಾನ ಸೆಣೆಸಾಟದ ದಿನಾಂಕ ಬಹಿರಂಗ

T20 World Cup: India will face Pakistan on October 24, full schedule in within a week

ಬೆಂಗಳೂರು, ಆಗಸ್ಟ್ 4: ಟಿ20 ವಿಶ್ವಕಪ್‌ನ ಆರಂಭಕ್ಕೆ ಈಗಾಲೇ ದಿನಗಣನೆ ಆರಂಭವಾಗಿದೆ. ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್‌ಅನ್ನು ಈ ಬಾರಿ ಕೊರೊನಾವೈರಸ್‌ನ ಕಾರಣದಿಂದಾಗಿ ಯುಎಇನಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಈಗ ಈ ವಿಶ್ವಕಪ್‌ನಲ್ಲಿ ನಡೆಯಲಿರುವ ಕುತೂಹಲಕಾರಿ ಪಂದ್ಯವಾಗಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ದಿನಾಂಕ ಬಹಿರಂಗವಾಗಿದೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳು ನಾನಾ ಕಾರಣದಿಂದಾಗಿ ದ್ವಿಪಕ್ಷೀಯ ಸರಣಿಯಲ್ಲಿ ಭಾಗಿಯಾಗುತ್ತಿಲ್ಲ. ದ್ವಿಪಕ್ಷೀಯ ಸರಣಿಯಲ್ಲಿ ಭಾಗಿಯಾಗಿ ಸುಮಾರು ಒಂದು ದಶಕವಾಗುತ್ತಾ ಬಂದಿದೆ. ಈಗ ಈ ಎರಡು ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರವೇ ಮುಖಾಮುಖಿಯಾಗುತ್ತಿದ್ದು ಕ್ರಿಕೆಟ್ ಪ್ರೇಮಿಗಳಲ್ಲಿ ಈ ಕದನ ಸಾಕಷ್ಟು ನಿರೀಕ್ಷೆಯನ್ನು ಮೂಡಿಸುತ್ತದೆ. ಇದೇ ಹಿನ್ನೆಲೆಯಲ್ಲಿ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿಯೂ ಭಾರತ ಹಾಗೂ ಪಾಕಿಸ್ಥಾನ ನಡುವಿನ ಸೆಣೆಸಾಟದ ಮೇಲೆ ಕ್ರಿಕೆಟ್ ಪ್ರೇಮಿಗಳ ಚಿತ್ತ ನೆಟ್ಟಿದೆ.

ಭಾರತ vs ಇಂಗ್ಲೆಂಡ್: ಯಾವ ತಂಡ ಸರಣಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ಹರ್ಭಜನ್ ಸಿಂಗ್ಭಾರತ vs ಇಂಗ್ಲೆಂಡ್: ಯಾವ ತಂಡ ಸರಣಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ಹರ್ಭಜನ್ ಸಿಂಗ್

ಅಕ್ಟೋಬರ್ 24ರಂದು ಭಾರತ vs ಪಾಕಿಸ್ತಾನ

ಅಕ್ಟೋಬರ್ 24ರಂದು ಭಾರತ vs ಪಾಕಿಸ್ತಾನ

ಟಿ20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಈ ಬಾರಿ ಗ್ರೂಪ್‌ ಹಂತದಲ್ಲಿ ಮುಖಾಮುಖಿಯಾಗಲಿದೆ. ಇದರ ದಿನಾಂಕ ಮತ್ತು ಸ್ಥಳ ಈಗ ಬಹಿರಂಗವಾಗಿದೆ. ಅಕ್ಟೋಬರ್ 24ರಂದು ಈ ಭಾರೀ ನಿರೀಕ್ಷೆ ಹುಟ್ಟಿಸಿರುವ ಪಂದ್ಯ ನಡೆಯಲಿದೆ. ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಅಕ್ಟೋಬರ್ 17ರಿಂದ ವಿಶ್ವಕಪ್ ಆರಂಭ

ಅಕ್ಟೋಬರ್ 17ರಿಂದ ವಿಶ್ವಕಪ್ ಆರಂಭ

ಈ ಬಾರಿಯ ಟಿ20 ವಿಶ್ವಕಪ್ ಭಾರತದಲ್ಲಿ ಆಯೋಜನೆಯಾಗಬೇಕಾಗಿತ್ತು. ಆದರೆ ಭಾರತದಲ್ಲಿ ಕೊರೊನಾವೈರಸ್‌ನ ಹಾವಳಿ ನಿಯಂತ್ರಣಕ್ಕೆ ಬಾರದ ಕಾರಣದಿಂದಾಗಿ ಈ ಟೂರ್ನಿಯನ್ನು ಭಾರತದಿಂದ ಸ್ಥಳಾಂತರಿಸಲಾಗಿದೆ. ಯುಎಇನಲ್ಲಿರುವ ಮೂರು ಕ್ರೀಡಾಂಗಣ ಹಾಗೂ ಒಮಾನ್‌ನಲ್ಲಿ ಈ ಪಂದ್ಯಗಳು ನಡೆಯಲಿದೆ. ಅಕ್ಟೋಬರ್ 17ರಿಂದ ಟಿ20 ವಿಶ್ವಕಪ್‌ನ ಪಂದ್ಯಗಳು ಆರಂಭವಾಗಲಿದ್ದು ನವೆಂಬರ್ 14ರಂದು ಫೈನಲ್ ಹಣಾಹಣಿ ನಡೆಯಲಿದೆ.

ಒಂದೇ ಗುಂಪಿನಲ್ಲಿದೆ ಭಾರತ ಪಾಕಿಸ್ತಾನ

ಒಂದೇ ಗುಂಪಿನಲ್ಲಿದೆ ಭಾರತ ಪಾಕಿಸ್ತಾನ

ಇನ್ನು ಈ ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಒಟ್ಟು 12 ತಂಡಗಳು ಭಾಗವಹಿಸುವ ಈ ಟೂರ್ನಿಯಲ್ಲಿ ತಲಾ 6 ತಂಡಗಳ ಗುಂಪು ಇದಾಗಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಮೊದಲ ಗುಂಪಿನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ತಂಡಗಳು ಹಾಗೂ ಎರಡನೇ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಹಾಗೂ ಅಪ್ಘಾನಿಸ್ತಾನ ತಂಡಗಳು ಇವೆ. ಈ ಗುಂಪಿಗೆ ರೌಂಡ್ 1 ಹಂತದಲ್ಲಿರುವ ತಂಡಗಳ ಪೈಕಿ ತಲಾ ಎರಡು ತಂಡಗಳು ಎರಡು ಗುಂಪುಗಳಿಗೂ ಸೇರ್ಪಡೆಯಾಗಲಿದೆ.

ಆಟಗಾರರ ಆಯ್ಕೆ ಯಲ್ಲಿ ಸೋತ ವಿರಾಟ್ ಕೊಹ್ಲಿ | Oneindia Kannada
ಕೊನೆಯ ಟಿ20 ಮುಖಾಮುಖಿ ಹೇಗಿತ್ತು

ಕೊನೆಯ ಟಿ20 ಮುಖಾಮುಖಿ ಹೇಗಿತ್ತು

ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಕೊನೆಯ ಬಾರಿಗೆ ಟಿ20 ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗಿದ್ದು 2016ರರಲ್ಲಿ ನಡೆದ ವಿಶ್ವಕಪ್‌ನಲ್ಲಿ. ಅಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೂಪರ್ 10 ಹಂತದಲ್ಲಿ ಮುಖಾಮುಖಿಯಾಗಿದ್ದವು. ಮಳೆಯಿಂದಾಗಿ 18 ಓವರ್‌ಗಳಿಗೆ ನಿಗದಿಯಾಗಿದ್ದ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 118ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಪಾಕಿಸ್ತಾನದ ಪರವಾಗಿ ಅಂದು ಯಾವ ಬ್ಯಾಟ್ಸ್‌ಮನ್‌ ಕೂಡ 30ರ ಗಡಿಯನ್ನು ಕೂಡ ದಾಟಿರಲಿಲ್ಲ. 26 ರನ್‌ಗಳಿಸಿದ್ದ ಶೋಯೆಬ್ ಮಲಿಕ್ ಹೈಯೆಸ್ಟ್ ಸ್ಕೋರರ್ ಎನಿಸಿದ್ದರು. ಪಾಕಿಸ್ತಾನ ನೀಡಿದ ಈ ಗುರಿಯನ್ನು ಭಾರತ ಇನ್ನೂ 13 ಎಸೆತಗಳು ಬಾಕಿಯಿರುವಂತೆ 4 ವಿಕೆಟ್‌ಗಳನ್ನು ಕಳೆದುಕೊಂಡು ಗೆದ್ದು ಬೀಗಿತ್ತು. ಭಾರತದ ಪರವಾಗಿ ವಿರಾಟ್ ಕೊಹ್ಲಿ 55 ರನ್ ಬಾರಿಸಿ ಮಿಂಚಿದ್ದರು. ಅದಾದ ಬಳಿಕ ನಡೆಯುತ್ತಿರುವ ಮೊದಲ ಟಿ20 ವಿಶ್ವಕಪ್ ಇದಾಗಿದೆ.

Story first published: Wednesday, August 4, 2021, 16:28 [IST]
Other articles published on Aug 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X