ಕೊಹ್ಲಿ ಅಲ್ಲ, ಟಿ20 ವಿಶ್ವಕಪ್‌ಗೆ ಈತನನ್ನು ಆಯ್ಕೆ ಮಾಡಿದರೆ ಭಾರತಕ್ಕೆ ಸಂಕಷ್ಟ: ಇಲ್ಲಿದೆ 4 ಕಾರಣಗಳು

ಟಿ20 ವಿಶ್ವಕಪ್‌ಗೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಈಗಾಗಲೇ ದಿನಗಣನೆ ಆರಂಭವಾಗಿದ್ದು ಟೂರ್ನಿಗೆ ಎಲ್ಲಾ ತಂಡಗಳು ಕೂಡ ಸಿದ್ಧತೆ ನಡೆಸುತ್ತಿದೆ. ಕಳೆದ ವರ್ಷದ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿರುವ ಭಾರತ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡಲು ಹವಣಿಸುತ್ತಿದ್ದು ಅದಕ್ಕಾಗಿ ಅತ್ಯುತ್ತಮ ಆಟಗಾರರ ಪಡೆಯನ್ನು ಸಿದ್ಧಗೊಳಿಸಲಾಗುತ್ತಿದೆ.
ಈ ತಂಡದಲ್ಲಿ ಯಾವೆಲ್ಲಾ ಆಟಗಾರರು ಅವಕಾಶ ಪಡೆಯಬಹುದು ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ. ಸಾಕಷ್ಟು ಯುವ ಆಟಗಾರರು ಅತ್ಯುತ್ತಮ ಫಾರ್ಮ್‌ನಲ್ಲಿದ್ದು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ. ಈಗಾಗಲೇ ಕೆಲ ಆಟಗಾರರು ತಾವು ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ ಎಂಬಂಥಾ ಪ್ರದರ್ಶನ ನೀಡುತ್ತಿದ್ದಾರೆ.
ಆದರೆ ಇತ್ತೀಚೆಗೆ ಮೂರು ಮಾದರಿಯಲ್ಲಿಯೂ ಸ್ಥಾನ ಪಡೆಯುತ್ತಿರುವ ಶ್ರೇಯಸ್ ಐಯ್ಯರ್ ಈ ಬಾರಿಯ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವುದು ತಂಡದ ದೃಷ್ಟಿಯಿಂದ ಉತ್ತಮವಲ್ಲ. ಅದಕ್ಕೆ ಕಾರಣಗಳೂ ಇದೆ. ಯಾವುದು ಆ ಕಾರಣಗಳು? ಮುಂದೆ ಓದಿ..

ಅಸ್ಥಿರ ಪ್ರದರ್ಶನ
ಶ್ರೇಯಸ್ ಐಯ್ಯರ್ ಭಾರತ ಕ್ರಿಕೆಟ್‌ನ ಅದ್ಭುತ ಪ್ರತಿಭೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಮುಂಬೈ ಮೂಲದ ಈ ಆಟಗಾರ ಸ್ಥಿರ ಪ್ರದರ್ಶನ ನಿಡಲು ವಿಫಲವಾಗುತ್ತಿದ್ದಾರೆ. ಐಪಿಎಲ್‌ಗೂ ಮೊದಲು ನಡೆದ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಅರ್ಥ ಶತಕ ಬಾರಿಸಿದ್ದರು ಐಯ್ಯರ್. ಆದರೆ ಅದಾದ ಬಳಿಕ ಅವರ ಬ್ಯಾಟ್‌ನಿಂದ ಉತ್ತಮ ಪ್ರದರ್ಶನ ಬಂದಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ವಿಫಲವಾಗಿದ್ದ ಐಯ್ಯರ್ ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಅದ್ಭುತ ಅವಕಾಶವಿದ್ದರೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ವಿಫಲವಾಗಿದ್ದಾರೆ. ಹೀಗಾಗಿ ಸಾಕಷ್ಟು ಆಟಗಾರರು ಅವಕಾಶಕ್ಕಾಗಿ ಕಾಯುತ್ತಿರುವಾಗ ಶ್ರೇಯಸ್ ಐಯ್ಯರ್‌ಗಿಂತ ಉತ್ತಮ ಆಯ್ಕೆಯನ್ನು ಆಯ್ಕೆಗಾರರು ಪರಿಗಣಿಸುವ ಸಾಧ್ಯತೆಯಿದೆ.

ಶಾರ್ಟ್ ಎಸೆತಗಳಿಗೆ ಸುಲಭವಾಗಿ ಔಟಾಗುತ್ತಿದ್ದಾರೆ ಐಯ್ಯರ್
ಶ್ರೇಯಸ್ ಐಯ್ಯರ್ ಶಾರ್ಟ್ ಎಸೆತಗಳನ್ನು ಎದುರಿಸಲು ವಿಫಲವಾಗುತ್ತಿದ್ದಾರೆ. ಸತತವಾಗಿ ಶಾರ್ಟ್ ಎಸೆತಗಳಿಗೆ ಔಟಾಗುವ ಮೂಲಕ ಎದುರ್ಆಳಿ ತಂಡಗಳಿಗೆ ಸುಲಭ ತುತ್ತಾಗುತ್ತಿದ್ದಾರೆ ಐಯ್ಯರ್. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಇದು ಮತ್ತಷ್ಟು ಸ್ಪಷ್ಟವಾಗಿದೆ. ಇನ್ನು ಈ ಬಾರಿಯ ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡಯಲಿರುವ ಕಾರಣ ಶಾರ್ಟ್ ಎಸೆತಗಳು ಸಾಮಾನ್ಯವಾಗಿರಲಿದೆ. ಹೀಗಾಗಿ ಆಸ್ಟ್ರೇಲುಯಾದಲ್ಲಿ ಶ್ರೇಯಸ್ ಐಯ್ಯರ್ ಉತ್ತಮ ಆಯ್ಕೆಯಾಗಲಾರರು.

ಶ್ರೇಯಸ್ ಐಯ್ಯರ್ ಆಲ್‌ರೌಂಡರ್ ಅಲ್ಲ
ಇನ್ನು ಚುಟುಕು ಕ್ರಿಕೆಟ್ ಮಾದರಿಯಲ್ಲಿ ಆಲ್‌ರೌಂಡರ್ ಆಟಗಾರರ ಅಗತ್ಯ ತಂಡಗಳಿಗೆ ಹೆಚ್ಚಾಗಿದೆ. ಭಾರತ ತಮಡದಲ್ಲಿ ಕೂಡ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಬೌಲಿಂಗ್ ಮಾಡಬಲ್ಲ ಆಟಗಾರರ ಮೇಲೆ ಸಹಜವಾಗಿಯೇ ಕಣ್ಣಿಟ್ಟಿರುತ್ತಾರೆ. ಆದರೆ ಶ್ರೇಯಸ್ ಐಯ್ಯರ್ ಬ್ಯಾಟಿಂಗ್ ಮಾತ್ರವೇ ಮಾಡಬಲ್ಲ ಆಟಗಾರನಾಗಿರುವ ಕಾರಣ ಅದು ಕೂಡ ಹಿನ್ನಡೆಯಾಗಿದೆ. ಶ್ರೇಯಸ್ ಐಯ್ಯರ್ ಬದಲಿಗೆ ದೀಪಕ್ ಹೂಡಾ ಅವರಂತಾ ಆಟಗಾರರ ಮೇಲೆ ಮ್ಯಾನೇಜ್‌ಮೆಂಟ್ ಹೆಚ್ಚಿನ ಒಲವು ತೋರುವ ನಿರೀಕ್ಷೆಯಿದೆ. ಹೂಡಾ ಅಗತ್ಯವಿದ್ದಾಗ ಬೌಲಿಂಗ್ ಮೂಲಕವೂ ತಂಡಕ್ಕೆ ನೆರವು ನೀಡಬಲ್ಲರು.

ಐಯ್ಯರ್‌ಗಿಂತ ಉತ್ತಮ ಆಯ್ಕೆ
ಶ್ರೇಯಸ್ ಐಯ್ಯರ್ ಕಳೆದ ಎರಡ್ಮೂರು ವರ್ಷಗಳಿಮದ ಭಾರತ ಸೀಮಿತ ಓವರ್‌ಗಳ ತಂಡದ ಭಾಗವಾಗಿದ್ದಾರೆ. ಆದರೆ ವಿಶ್ವಕಪ್ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಸದ್ಯ ಭಾರತ ತಂಡದಲ್ಲಿ ಅವಕಾಶ ಪಡೆಯಲು ಹವಣಿಸುತ್ತಿರುವ ಆಟಗಾರರ ಪಟ್ಟಿಯನ್ನು ನೊಡಿದರೆ ಶ್ರೇಯಸ್ ಐಯ್ಯರ್‌ಗಿಂತ ಉತ್ತಮವಾಗಿ ಕೆಲ ಉತ್ತಮ ಆಟಗಾರರು ಇದ್ದಾರೆ. ಹೀಗಾಗಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಐಯ್ಯರ್ ಉತ್ತಮ ಆಯ್ಕೆಯಾಗಲಾರರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications