Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್‌ಗೆ ಭರ್ಜರಿ ಸಿದ್ಧತೆ: ನೆಟ್‌ನಲ್ಲಿ ಬೆವರಿಳಿಸುತ್ತಿದ್ದಾರೆ ಟೀಮ್ ಇಂಡಿಯಾ ವೇಗಿ ಬೂಮ್ರಾ

T20 world cup: Indian pacer Jasprit Bumrah sweats hard in nets ahead of world cup

ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಭಾರತ ತಂಡ ಈ ಚುಟುಕು ಮಹಾ ಸಮರಕ್ಕೆ ಭರ್ಜರಿಯಾಗಿ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಟೀಮ್ ಇಂಡಿಯಾ ಸ್ಕ್ವಾಡ್ ಘೋಷಣೆಯಾಗಿದ್ದು ಅನುಭವಿ ವೇಗಿ ಜಸ್ಪ್ರೀತ್ ಬೂಮ್ರಾ ತಂಡಕ್ಕೆ ಮರಳಿದ್ದಾರೆ. ಗಾಯದಿಂದಾಗಿ ಏಷ್ಯಾ ಕಪ್‌ನಿಂದ ಹೊರಗುಳಿದಿದ್ದ ಬೂಮ್ರಾ ಈ ಟೂರ್ನಿಗೂ ಮುನ್ನ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಆಸ್‌ಟರೇಲಿಯಾ ವಿರುದ್ಧದ ಸರಣಿಯಲ್ಲಿ ಆಡಲು ಸಜ್ಜಾಗುತ್ತಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಜಸ್ಪ್ರೀತ್ ಬೂಮ್ರಾ ಭರ್ಜರಿ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ನೆಟ್‌ನಲ್ಲಿ ಭರ್ಜರಿ ಬೌಲಿಂಗ್ ದಾಳಿ ನಡೆಸುತ್ತಿರುವ ಬೂಮ್ರಾ ಮಹಾ ಕದನಕ್ಕೆ ಸಜ್ಜಾಗಿದ್ದಾರೆ. ದೈಹಿತವಾಗಿ ಮತ್ತಷ್ಟು ಫಿಟ್ ಆಗಿರುವ ನಿಟ್ಟಿನಲ್ಲಿ ಬೂಮ್ರಾ ಕಠಿಣ ಪರಿಶ್ರಮ ಪಡುತ್ತಿದ್ದು ಜಿಮ್‌ನಲ್ಲಿಯೂ ಬೆವರಿಳಿಸುತ್ತಿದ್ದಾರೆ.

ಗಾಯದ ಕಾರಣದಿಂದ ಏಷ್ಯಾ ಕಪ್‌ನಿಂದ ಹೊರಗುಳಿದಿದ್ದ ಜಸ್ಪ್ರೀತ್ ಬೂಮ್ರಾ ವಿಶ್ವಕಪ್‌ನಲ್ಲಿಯೂ ಆಡುವ ಬಗ್ಗೆ ಅನುಮಾನಗಳು ಮೂಡಿದ್ದವು. ಆದರೆ ನಂತರ ಬೂಮ್ರಾ ಈ ಮಹತ್ವದ ಟೂರ್ನಿಗೆ ಸಜ್ಜಾಗಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದ್ದು ವಿಶ್ವಕಪ್‌ನ ತಂಡಕ್ಕೂ ಆಯ್ಕೆ ಮಾಡಲಾಗಿದೆ. ಹಾಗಿದ್ದರೂ ಕ್ರಿಕೆಟ್ ಅಭಿಮಾನಿಗಳಲ್ಲಿ ಬೂಮ್ರಾ ಫಿಟ್‌ನೆಸ್ ಬಗ್ಗೆ ಒಂದಷ್ಟು ಅನುಮಾನಗಳು ಉಳಿದುಕೊಂಡಿದ್ದವು. ಆದರೆ ಬೂಮ್ರಾ ಇಂದು ತಮ್ಮ ತರಬೇತಿಯ ವಿಡಿಯೋವನ್ನು ಹಂಚಿಕೊಂಡ ಬಳಿಕ ಆ ಅನುಮಾನಗಳಿಗೆ ತೆರೆ ಬಿದ್ದಂತಾಗಿದೆ.

ಇನ್ನು ಭಾರತದ ಮತ್ತೋರ್ವ ವೇಗದ ಬೌಲಲ್ ಹರ್ಷಕ್ ಪಟೇಲ್ ಕೂಡ ಗಾಯದ ಕಾರಣದಿಂದಾಗಿ ಏಷ್ಯಾ ಕಪ್ ಟೂರ್ನಿಯಿಂದ ಹೊರಗುಳಿದಿದ್ದರು. ಅವರು ಕೂಡ ವಿಶ್ವಕಪ್‌ನ ತಂಡಕ್ಕೆ ಮರಳಿದ್ದು ಕಣಕ್ಕಿಳಿಯಲು ಸಜ್ಜಾಗಿದೆ. ಈ ಇಬ್ಬರು ಭಾರತದ ವೇಗಿಗಳಿಗೂ ವಿಶ್ವಕಪ್‌ಗೂ ಮುನ್ನ ಒಟ್ಟು ಆರು ಪಂದ್ಯಗಳಲ್ಲಿ ಆಡುವ ಅವಕಾಶವಿದ್ದು ಅದರಲ್ಲಿ ತಮ್ಮ ಫಿಟ್‌ನೆಸ್‌ಅನ್ನು ಸಂಪೂರ್ಣವಾಗಿ ಸಾಬಿತುಪಡಿಸುವ ಅವಕಾಶವಿದೆ. ಟೂರ್ನಿಗೂ ಮುನ್ನ ತಮ್ಮ ಲಯವನ್ನು ಕಂಡುಕೊಳ್ಳುವ ಅವಕಾಶವೂ ದೊರೆಯಲಿದೆ.

ಏಷ್ಯಾ ಕಪ್‌ಗೆ ಕಾಡಿತ್ತು ಅನುಭವಿಗಳ ಕೊರತೆ

ಏಷ್ಯಾ ಕಪ್‌ಗೆ ಕಾಡಿತ್ತು ಅನುಭವಿಗಳ ಕೊರತೆ

ಇನ್ನು ಟೀಮ್ ಇಂಡಿಯಾ ಏಷ್ಯಾ ಕಪ್‌ಗೆ ಕೇವಲ ಮೂವರು ಸ್ಪೆಶಲಿಸ್ಟ್ ವೇಗಿಗಳೊಂದಿಗೆ ಕಣಕ್ಕಿಳಿದಿತ್ತು. ಅನುಭವಿ ಭುವನೇಶ್ವರ್ ಕುಮಾರ್‌ಗೆ ಯುವ ವೇಗಿಗಳಾದ ಅರ್ಷದೀಪ್ ಸಿಂಗ್ ಹಾಗೂ ಆವೇಶ್ ಖಾನ್ ಸಾಥ್ ನಿಡಿದ್ದರು. ಈ ಪೈಕಿ ಅರ್ಷ್‌ದೀಪ್ ಸಿಂಗ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರೂ ಆವೇಶ್ ಖಾನ್ ಅವರಿಂದ ನಿರೀಕ್ಷಿತ ಪ್ರದರ್ಶನ ಬಾರಲಿಲ್ಲ. ಈ ಮೂಲಕ ಭಾರತ ತಂಡ ಏಷ್ಯಾ ಕಪ್‌ನಲ್ಲಿ ಅನುಭವಿಗಳ ಕೊರತೆಯನ್ನು ಎದುರಿಸಿದ್ದ ಸ್ಪಷ್ಟವಾಗಿತ್ತು. ಇದೀಗ ವಿಶ್ವಕಪ್‌ಗೆ ಬೂಮ್ರಾ ಹಾಗೂ ಹರ್ಷಲ್ ಕಮ್‌ಬ್ಯಾಕ್ ಮಾಡಿರುವುದು ತಂಡದ ಬಲ ಹೆಚ್ಚಿಸಿರುವುದರಲ್ಲಿ ಅನುಮಾನವಿಲ್ಲ.

ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ

ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ

ಇನ್ನು ವಿಶ್ವಕಪ್‌ಗೆ ಮುನ್ನ ಭಾರತ ತವರಿನಲ್ಲಿ ಎರಡು ಬಲಿಷ್ಠ ತಂಡಗಳ ವಿರುದ್ಧ ಸೆಣೆಸಾಟ ನಡೆಸುವ ಮೂಲಕ ಈ ವಿಶ್ವಕಪ್‌ಗೆ ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ಳಲಿದೆ. ಮೊದಲಿಗೆ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ಭಾಗಿಯಾಗಲಿದ್ದು ಬಳಿಕ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೆಣೆಸಾಟ ನಡೆಸಲಿದೆ. ನಂತರ ಆಸ್ಟ್ರೇಲಿಯಾಗೆ ವಿಶ್ವಕಪ್‌ನಲ್ಲಿ ಆಡುವ ಹಿನ್ನಲೆಯಲ್ಲಿ ಪ್ರಯಾಣ ಬೆಳೆಸಲಿದೆ.

ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡ

ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್

Story first published: Thursday, September 15, 2022, 10:53 [IST]
Other articles published on Sep 15, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+