ಟಿ20 ವಿಶ್ವಕಪ್ ಚಿತ್ರಮಂದಿರಗಳಲ್ಲಿ ನೇರಪ್ರಸಾರಕ್ಕೆ ಐಸಿಸಿ ಜೊತೆ ಒಪ್ಪಂದ ಮಾಡಿಕೊಂಡ INOX

ಟಿ20 ವಿಶ್ವಕಪ್ ಸನಿಹದಲ್ಲಿರುವಾಗಲೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹರ್ಷವನ್ನುಂಟು ಮಾಡುವ ಸುದ್ದಿ ಹೊರಬಿದ್ದಿದೆ. ಭಾರತದ ಪ್ರಮುಖ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಸಂಸ್ಥೆಯಾದ ಐನಾಕ್ಸ್ ಲೈಶರ್ ಲಿಮಿಟೆಡ್ ಐಸಿಸಿ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದೆ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್‌ನ ಪಂದ್ಯಗಳನ್ನು ಭಾರತದಾದ್ಯಂತ ಐನಾಕ್ಸ್ ಚಿತ್ಮಂದಿರಗಳಲ್ಲಿ ಅಭಿಮಾನಿಗಳು ವೀಕ್ಷಿಸಬಹುದಾಗಿದೆ.
ಈ ವಿಚಾರವಾಗಿ ಐನಾಕ್ಸ್ ಲೈಶರ್ ಲಿಮಿಟೆಡ್ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದೆ. ಈ ವಿಚಾರವಾಗಿ ಐಸಿಸಿ ಜೊತೆಗೆ ತಾವು ಒಪ್ಪಂದ ಮಾಡಿಕೊಂಡಿರುವುದಾಗಿ ಐನಾಕ್ಸ್ ಅಧಿಕೃತವಾಗಿ ಹೇಳಿಕೊಂಡಿದೆ. ಭಾರತದಲ್ಲಿ 25ಕ್ಕೂ ಹೆಚ್ಚಿ ನಗರಗಳಲ್ಲಿ ಟಿ20 ವಿಶ್ವಕಪ್‌ನ ಪಂದ್ಯಗಳು ಐನಾಕ್ಸ್ ಮಲ್ಟಿಪ್ಲೆಕ್ಸ್‌ಗಳಲ್ಲಿ ನೇರಪ್ರಸಾರವಾಗಲಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಭಾರತದ ಪಂದ್ಯಗಳ ನೇರಪ್ರಸಾರ
ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಆಡುವ ಎಲ್ಲಾ ಗ್ರೂಪ್ ಪಂದ್ಯಗಳ ನೇರಪ್ರಸಾರವನ್ನು ಐನಾಕ್ಸ್ ಮಾಡಲಿದ್ದು ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 23ರಂದು ನಡೆಯುವ ಭಾರತ vs ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಆರಂಭಗೊಳ್ಳಲಿದೆ. ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಕೂಡ ನೇರಪ್ರಸಾರವಾಗಲಿದೆ.
ಟಿ20I ಡೆತ್ ಓವರ್‌ನಲ್ಲಿ ಅತಿ ಹೆಚ್ಚು ರನ್ ಕೊಳ್ಳೆ ಹೊಡೆದ 6 ಆಟಗಾರರು: ಪಟ್ಟಿಯಲ್ಲಿ ಇಬ್ಬರು ಭಾರತೀಯರು!

ಅಕ್ಟೋಬರ್ 16ರಿಂದ ಆರಂಭವಾಗಲಿದೆ ವಿಶ್ವಕಪ್
8ನೇ ಆವೃತ್ತಿಯ ಟಿ20 ವಿಶ್ವಕಪ್ ಅಕ್ಟೋಬರ್ 16ರಿಂದ ಆರಂಭವಾಗಲಿದ್ದು ಮೊದಲಿಗೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದೆ. ಸೂಪರ್ 12 ಹಂತದ ಪಂದ್ಯಗಳು ಅಕ್ಟೋಬರ್ 22ರಂದು ಆರಂಬವಾಗಲಿದೆ. ಈ ಟೂರ್ನಿಯ ಫೈನಲ್ ಪಂದ್ಯ ಮೆಲ್ಬರ್ನ್‌ನಲ್ಲಿ ನವೆಂಬರ್ 13ರಿಂದ ಆರಂಭವಾಗಲಿದೆ.

ರೋಮಾಂಚನಕಾರಿ ಅನುಭವ
"ಚಿತ್ರಮಂದಿರಗಳಲ್ಲಿ ಕ್ರಿಕೆಟ್ ಪಂದ್ಯಗಳನ್ನು ನೇರಪ್ರಸಾರ ಮಾಡುವುದರಿಂದ ದೊಡ್ಡ ಪರದೆಯಲ್ಲಿ ಪಂದ್ಯಗಳನ್ನು ವೀಕ್ಷಿಸುವ ರೋಮಾಂಚನಕಾರಿ ಅನುಭವ ಹಾಗೂ ಶಬ್ದಗಳ ಅದ್ಭುತ ಅನುಭವವನ್ನು ದೇಶದಲ್ಲಿ ಅತ್ಯಂತ ಹೆಚ್ಚು ಪ್ರೀತಿಸುವ ಕ್ರಿಕೆಟ್‌ನಿಂದ ದೊರೆಯಲಿದೆ. ಟಿ20 ವಿಶ್ವಕಪ್ ಈ ಉತ್ಸಾಹ ಹಾಗೂ ಭಾವನಾತ್ಮಕತೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಕ್ರಿಕೆಟ್ ಪ್ರೇಮಿಗಳಿಗೆ ಇದು ವಿಶೇಷ ಅನುಭವವಾಗಿರಲಿದೆ" ಎಂದಿದ್ದಾರೆ ಐನಾಕ್ಸ್ ಲೈಶರ್‌ನ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ವಿಶಾಲ್.
ಐನಾಕ್ಸ್ ಭಾರತದ 74 ನಗರಗಳಲ್ಲಿ 165 ಮಲ್ಟಿಪ್ಲೆಕ್ಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. 705 ಸ್ಕ್ರೀನ್‌ಗಳನ್ನು ಹೊಂದಿದ್ದು 1.57 ಲಕ್ಷ ಜನರ ಸಾಮರ್ಥ್ಯವನ್ನು ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications