ಫೈನಲ್‌ನಲ್ಲಿ ಭಾರತ vs ಪಾಕಿಸ್ತಾನ ನಡೆಯದಂತೆ ಮಾಡುತ್ತೇವೆ: ಜೋಸ್ ಬಟ್ಲರ್

ಟಿ20 ವಿಶ್ವಕಪ್‌ನಲ್ಲಿ ಯಾವ ಎರಡು ತಂಡಗಳು ಫೈನಲ್‌ಗೇರಲಿದೆ ಹಾಗೂ ಯಾವ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ನಾನಾ ರೀತಿಯ ಲೆಕ್ಕಾಚಾರಗಹಳು ವಿಶ್ಲೇಷಣೆಗಳು ನಡೆಯುತ್ತಿದೆ. ಸಾಕಷ್ಟು ಕ್ರಿಕೆಟ್ ಪ್ರೇಮಿಗಳು ಈ ಬಾರಿಯ ಫೈನಲ್ ಹಂತಕ್ಕೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಬಂದರೆ ಉತ್ತಮ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಕ್ರಿಕೆಟ್ ಪಂಡಿತರ ಅಭಿಪ್ರಾಯಗಳು ಕೂಡ ಹೀಗೆಯೇ ಇದೆ. ಆದರೆ ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗದಂತೆ ಮಾಡುತ್ತೇವೆ ಎಂಬ ಮಾತು ಹೇಳಿದ್ದಾರೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್.
ಕ್ರಿಕೆಟ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಬಡುವಿನ ಮುಖಾಮುಖಿಗೆ ವಿಶೇಷ ಮಹತ್ವವಿದೆ. ಅದರಲ್ಲೂ ವಿಶ್ವಕಪ್‌ನಂತಾ ಮಹತ್ವದ ಟೂರ್ನಿಯ ಫೈನಲ್ ಹಂತದಲ್ಲಿ ಈ ಎರಡು ತಮಡಗಳು ಎದುರಾಳಿಗಳಾಗಿ ಕಣಕ್ಕಿಳಿದರೆ ಅದು ಕ್ರಿಕೆಟ್ ಪ್ರೇನಿಗಳಿಗೆ ನಿಜಕ್ಕೂ ಅದ್ಭುತ ಅನುಭವ. ಹೀಗಾಗು ಈ ಎರಡು ತಂಡಗಳು ಫೈನಲ್ ಹಂತದಲ್ಲಿ ಮುಖಾಮುಖಿಯಾಗಲಿ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಆದರೆ ಅದನ್ನು ಸಾಧ್ಯವಾಗದಂತೆ ನಾವು ಮಾಡಲಿದ್ದೇವೆ ಎಂಬ ಜೋಸ್ ಬಟ್ಲರ್ ಹೇಳಿಕೆ ಈಗ ಕುತೂಹಲ ಕೆರಳಿಸಿದೆ.

ಅದು ಸಾಧ್ಯವಾಗದಂತೆ ಮಾಡುತ್ತೇವೆ
ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೈನಲ್ ಹಂತದಲ್ಲಿ ಮುಖಾಮುಖಿಯಾಗುವುದು ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್‌ಗೆ ಸಹಜವಾಗಿಯೇ ಇಷ್ಟವಿಲ್ಲ. ಯಾಕೆಂದರೆ ಅದು ಸಾಧ್ಯವಾಗಬೇಕಾದರೆ ಇಂಗ್ಲೆಂಡ್ ತಂಡ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಸೋಲಬೇಕಿದೆ. ಈ ಕಾರಣದಿಂದಾಗಿಯೇ 2007ರ ವಿಶ್ವಕಪ್‌ನಲ್ಲಿ ನಡೆದಂತೆ ಈ ಬಾರಿ ಖಂಡಿತವಾಗಿಯೂ ನಡೆಯಲು ಬಿಡುವುದಿಲ್ಲ ಎಂದಿದ್ದಾರೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್.

ಫೈನಲ್‌ನಲ್ಲಿ ಭಾರತ vs ಪಾಕಿಸ್ತಾನ ತಂಡಗಳನ್ನು ನೋಡಲು ಇಷ್ಟವಿಲ್ಲ
"ನಾವು ಸಹಜವಾಗಿಯೇ ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುವುದನ್ನು ನೋಡಲು ಇಷ್ಟವಿಲ್ಲ. ಈ ಎರಡು ತಂಡಗಳು ಮುಖಾಮುಖಿಯಾಗದಂತೆ ಮಾಡಲು ನಮ್ಮಿಂದ ಸಾಧ್ಯವಿರುವುದನ್ನು ನಾವು ಖಂಡಿತಾ ಮಾಡಲಿದ್ದೇವೆ"ಎಂದು ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ನೇರವಾಗಿಯೇ ಹೇಳಿಕೆ ನೀಡಿದ್ದಾರೆ.

ಭಾರತ ತಂಡ ಬಲಿಷ್ಠವಾಗಿದೆ ಎಂದ ಬಟ್ಲರ್
ಮುಂದುವರಿದು ಮಾತನಾಡಿದ ಅವರು ಭಾರತ ತಂಡ ಅತ್ಯಂತ ಬಲಿಷ್ಠವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ. "ಭಾರತ ತಂಡ ಅತ್ಯಂತ ಬಲಿಷ್ಠವಾದ ತಂಡವಾಗಿದೆ. ಸುದೀರ್ಘ ಕಾಲದಿಂದ ಉತ್ತಮ ಪ್ರದರ್ಶನ ನೀಡಿಕೊಂಡು ಬರುತ್ತಿದ್ದು ಬಲಿಷ್ಠ ತಂಡವಾಗಿ ಉಳಿದುಕೊಂಡಿದೆ. ಅವರಲ್ಲನ ಪ್ರತಿಭೆಗಳು ಹಾಗೂ ಸಾಮರ್ಥ್ಯವೇ ಇದಕ್ಕೆ ಕಾರಣ. ಅವರ ಲೈನ್‌ಅಪ್‌ನ್ಲಲಿ ಕೆಲ ಅದ್ಭುತ ಆಟಗಾರರು ಇದ್ದಾರೆ. ಯಾವುದೇ ಸ್ಪರ್ಧೆಯಲ್ಲಾದರೂ ಸೆಮಿಫೈನಲ್‌ಗೆ ತಲುಪಿದ್ದರೆ ಅಲ್ಲಿ ಬಲಿಷ್ಠ ತಂಡವೇ ಎದುರಾಗುತ್ತದೆ. ಹಾಗಿಯೇ ಭಾರತ ತಂಡ ಅತ್ಯಂತ ಬಲಿಷ್ಠ ತಂಡವಾಗಿದೆ"ಎಂದಿದ್ದಾರೆ ಜೋಸ್ ಬಟ್ಲರ್.

ಇತ್ತಂಡಗಳ ಸ್ಕ್ವಾಡ್ ಹೀಗಿದೆ
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ
ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಫಿಲಿಪ್ ಸಾಲ್ಟ್, ಬೆನ್ ಸ್ಟೋಕ್ಸ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಅಲೆಕ್ಸ್ ಹೇಲ್ಸ್, ಮಾರ್ಕ್ ವುಡ್, ಟೈಮಲ್ ಮಿಲ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications