T20 World Cup: ವಿಶ್ವಕಪ್‌ನಲ್ಲಿ ಭಾರತ ತಂಡದ ಇತಿಹಾಸದ ಬಗೆಗಿನ ಸ್ವಾರಸ್ಯಕರ ಘಟನೆಗಳಿವು

ಬಹು ನಿರೀಕ್ಷಿತ ಟಿ20 ವಿಶ್ವಕಪ್ 2022 ಭಾನುವಾರ, ಅಕ್ಟೋಬರ್ 16 ರಂದು ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗಲಿದೆ. ಮೆಗಾ ಟೂರ್ನಿಯಲ್ಲಿ ಭಾರತ ಸೇರಿದಂತೆ 16 ತಂಡಗಳು ಭಾಗವಹಿಸಲಿವೆ. 2007 ರಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್‌ನ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಆಗಿತ್ತು.
ಅಂದಿನಿಂದ, ಇಂದಿನವರೆಗೆ 7 ಬಾರಿ ಟಿ20 ವಿಶ್ವಕಪ್ ಟೂರ್ನಿ ನಡೆದಿದೆ. 8ನೇ ಟಿ20 ವಿಶ್ಬಕಪ್‌ಗೆ ದಿನಗಣನೆ ಶುರುವಾಗಿದೆ. ಹಲವು ವರ್ಷಗಳಿಂದ ಭಾರತ ತಂಡವನ್ನು ಸುತ್ತುವರೆದಿರುವ ಸಾಕಷ್ಟು ವಿವಾದಗಳಿವೆ.
ಕಳೆದ ವರ್ಷ, ಟಿ20 ವಿಶ್ವಕಪ್ ತಂಡದಿಂದ ಯುಜುವೇಂದ್ರ ಚಹಾಲ್ ಅವರನ್ನು ಕೈಬಿಡುವ ಮೂಲಕ ಆಯ್ಕೆಗಾರರು ಅಚ್ಚರಿ ಮೂಡಿಸಿದ್ದರು. ಅನನುಭವಿ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ ಮತ್ತು ರಾಹುಲ್ ಚಹಾರ್ ಅವರನ್ನು ಆಯ್ಕೆ ಮಾಡಿದರು. ಗಾಳಿಯಲ್ಲಿ ವೇಗವಾಗಿ ಬೌಲಿಂಗ್ ಮಾಡುವ ಬೌಲರ್ ಗಳಿಗೆ ಮಣೆ ಹಾಕಿದ್ದರು.
ಈ ಹಿಂದೆಯೂ ಇಂತಹ ಘಟನೆಗಳು ನಡೆದಿದ್ದು, ಕೆಲವು ವಿಚಾರಗಳು ಅಭಿಮಾನಿಗಳ ಗಮನಕ್ಕೆ ಬಾರದೇ ಹೋಗಿರಬಹುದು. ಟಿ20 ವಿಶ್ವಕಪ್‌ನ ಹೊಸ ಆವೃತ್ತಿಯ ಮೊದಲು, ಭಾರತದ ಹಿಂದಿನ ಅಭಿಯಾನಗಳ ಐದು ಪ್ರಮುಖ ಘಟನೆಗಳು ಹೀಗಿವೆ.

ಸಚಿನ್, ಗಂಗೂಲಿ ಮೊದಲನೇ ಟಿ20 ವಿಶ್ವಕಪ್ ಆಡಲಿಲ್ಲ
2007 ರ ಟಿ20 ವಿಶ್ವಕಪ್‌ನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಯಾಕೆ ಆಡಲಿಲ್ಲ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಇದಕ್ಕೆ ಭಾರತದ ಮಾಜಿ ಕೋಚ್ ಮತ್ತು ಮ್ಯಾನೇಜರ್ ಲಾಲ್‌ಚಂದ್ ರಜಪೂತ್ ಉತ್ತರ ನೀಡಿದ್ದಾರೆ.
ರಾಹುಲ್ ದ್ರಾವಿಡ್ ತನ್ನ ಸಹ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿಯನ್ನು ಉದ್ಘಾಟನಾ ಟಿ20 ವಿಶ್ವಕಪ್‌ನಲ್ಲಿ ಆಡದಂತೆ ಕೇಳಿಕೊಂಡರು ಎಂದು ಬಹಿರಂಗಪಡಿಸಿದ್ದಾರೆ.
ಟಿ20 ವಿಶ್ವಕಪ್‌ನ ಉದ್ಘಾಟನಾ ಆವೃತ್ತಿಯಲ್ಲಿ ಭಾರತ ಯುವ ತಂಡವನ್ನು ಏಕೆ ಕಣಕ್ಕಿಳಿಸಿತು ಎಂಬುದನ್ನು ರಜಪೂತ್ ವಿವರಿಸಿದ್ದಾರೆ.
"ಹೌದು, ಇದು ನಿಜ. ರಾಹುಲ್ ದ್ರಾವಿಡ್ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿಯನ್ನು 2007 ರ ಟಿ 20 ವಿಶ್ವಕಪ್ ಆಡದಂತೆ ತಡೆದರು. ರಾಹುಲ್ ದ್ರಾವಿಡ್ ಇಂಗ್ಲೆಂಡ್‌ನಲ್ಲಿ ನಾಯಕರಾಗಿದ್ದರು ಮತ್ತು ಕೆಲವು ಆಟಗಾರರು ಇಂಗ್ಲೆಂಡ್‌ನಿಂದ ನೇರವಾಗಿ ಜೋಹಾನ್ಸ್‌ಬರ್ಗ್‌ಗೆ (ಟಿ 20 ವಿಶ್ವಕಪ್‌ಗಾಗಿ) ಬಂದರು, ಆದ್ದರಿಂದ ಅವರು ಯುವಕರಿಗೆ ಅವಕಾಶ ನೀಡೋಣ ಎಂದು ಹೇಳಿದರು." ಎಂದು ಹೇಳಿದ್ದಾರೆ.
ಟಿ20 ವಿಶ್ವಕಪ್ 2022: ಬುಮ್ರಾ ಸ್ಥಾನಕ್ಕೆ ಮೊಹಮ್ಮದ್ ಶಮಿ ಅಧಿಕೃತ ಆಯ್ಕೆ, ಅಂತಿಮ 15 ಆಟಗಾರರ ಸ್ಕ್ವಾಡ್ ಇಲ್ಲಿದೆ

ಬಿಡುಗಡೆ ಮಾಡಿದ್ದ ಜರ್ಸಿ ರದ್ದು ಮಾಡಿದ್ದ ಬಿಸಿಸಿಐ
ಐಸಿಸಿ ಟಿ20 ವಿಶ್ವಕಪ್ 2012ಕ್ಕೆ ಮುಂಚಿತವಾಗಿ, ಭಾರತ ತಂಡ ಒಂದು ಭುಜದ ಮೇಲೆ ತ್ರಿವರ್ಣವನ್ನು ಹೊಂದಿರುವ ಹೊಚ್ಚ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿತ್ತು.
ಬಿಡುಗಡೆ ಸಮಾರಂಭದಲ್ಲಿ ದೊಡ್ಡ ಆಟಗಾರರು ಭಾಗವಹಿಸಿದ್ದರು. ಆದಾಗ್ಯೂ, ಬಿಸಿಸಿಐ ವಿಶ್ವಕಪ್ ಆರಂಭವಾಗುವ ಮುನ್ನ 2011 ರ ವಿಶ್ವಕಪ್‌ನಲ್ಲಿ ಧರಿಸಿದ್ದ ಜರ್ಸಿಯನ್ನು ಧರಿಸಿ ಆಡಲು ನಿರ್ಧರಿಸಿತು.
2011 ರ ವಿಶ್ವಕಪ್‌ನಲ್ಲಿ ಆಟಗಾರರು ಬಳಸಿದ್ದ ಜರ್ಸಿಯನ್ನು ಧರಿಸಲು ಹೇಳಿದ್ದು, ನಮ್ಮ ನಿರ್ಧಾರವಾಗಿದೆ ಎಂದು ಬಿಸಿಸಿಐ ಅಧಿಕಾರಿ ರತ್ನಾಕರ್ ಶೆಟ್ಟಿ ಹೇಳಿದ್ದಾರೆ.

ಟೀಂ ಇಂಡಿಯಾ ಮೆಂಟರ್ ಆಗಿದ್ದ ಧೋನಿ
ಭಾರತದ ಮಾಜಿ ನಾಯಕ ಎಂಎಸ್ ಧೋನಿ 2007 ರಿಂದ 2016 ರವರೆಗಿನ ಎಲ್ಲಾ ಟಿ 20 ವಿಶ್ವಕಪ್‌ಗಳಲ್ಲಿ ತಂಡದ ನಾಯಕರಾಗಿದ್ದರು. 2021 ರಲ್ಲಿ ಧೋನಿ ನಿವೃತ್ತಿಯ ನಂತರ ತಂಡದ ಮಾರ್ಗದರ್ಶಕರಾದರು. ಧೋನಿ ತಮ್ಮ ಸೇವೆಗಾಗಿ ಒಂದು ರೂಪಾಯಿಯನ್ನು ಸಹ ಪಡೆದಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಹಿರಂಗಪಡಿಸಿದ್ದಾರೆ.

ಧೋನಿಗೆ ನಾಯಕನಾಗಿದ್ದು ಹೇಗೆ?
ಎಂಎಸ್ ಧೋನಿ 2007 ರಲ್ಲಿ ಮೆಗಾ ಈವೆಂಟ್‌ನ ಉದ್ಘಾಟನಾ ಆವೃತ್ತಿಗೆ ಭಾರತೀಯ ನಾಯಕನಾಗಿ ಆಯ್ಕೆಯಾಗಿದ್ದು ಅಚ್ಚರಿಗೆ ಕಾರಣವಾಗಿತ್ತು. ನಂತರದ ವರ್ಷಗಳಲ್ಲಿ ಎಂಎಸ್ ಧೋನಿ ರಾಷ್ಟ್ರವನ್ನು ವಿಶ್ವ ಕ್ರಿಕೆಟ್‌ನ ಉನ್ನತ ಸ್ಥಾನಕ್ಕೆ ಮುನ್ನಡೆಸಿದರು.
ಮಾಜಿ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಧೋನಿ ಭಾರತೀಯ ತಂಡದ ನಾಯಕರಾಗುವುದರ ಹಿಂದಿನ ಕಥೆಯನ್ನು ಬಹಿರಂಗಪಡಿಸಿದ್ದಾರೆ. ರಾಹುಲ್ ದ್ರಾವಿಡ್ ತಮ್ಮ ನಾಯಕತ್ವದ ಬಗ್ಗೆ ಸ್ವತಃ ತಾವೇ ತೃಪ್ತಿ ಹೊಂದಿರಲಿಲ್ಲ. ಸಚಿನ್ "ನಾನು ಕ್ಯಾಪ್ಟನ್ ಆಗುವುದಿಲ್ಲ" ಎಂದು ಹೇಳಿದರು. ನಂತರ ಆಗ, ಬಿಸಿಸಿಐ ಅಧ್ಯಕ್ಷರಾಗಿದ್ದ ಶರದ್ ಪವಾರ್, ಎಂಎಸ್ ಧೋನಿಯನ್ನು ನಾಯಕನನ್ನಾಗಿ ಆಯ್ಕೆ ಮಾಡಿದರು ಎಂದು ಹೇಳಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಭಾರತ ಪಾಕಿಸ್ತಾನ ಪಂದ್ಯ ಸ್ಥಳಾಂತರ
2016 ರಲ್ಲಿ ಭಾರತ ಮತ್ತು ಪಾಕಿಸ್ತಾನ ಕೊನೆಯ ಬಾರಿಗೆ ಭಾರತದಲ್ಲಿ ಪಂದ್ಯವನ್ನು ಆಡಿದ್ದವು. ಆರಂಭದಲ್ಲಿ ಧರ್ಮಶಾಲಾದ ಹೆಚ್‌ಪಿಸಿಎ (HPCA) ಸ್ಟೇಡಿಯಂನಲ್ಲಿ ಪಂದ್ಯವನ್ನು ಆಯೋಜಿಸಬೇಕಿತ್ತು, ಆದರೆ ನಂತರ ಭದ್ರತೆ ಮತ್ತು ರಾಜಕೀಯ ಕಾರಣಗಳಿಂದಾಗಿ ಪಂದ್ಯವನ್ನು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ಗೆ ಸ್ಥಳಾಂತರಿಸಲಾಯಿತು.
2023 ರ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆದರೆ ಭಾರತದ ಯಾವ ಸ್ಥಳವು ಆತಿಥ್ಯ ವಹಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications