ಟಿ20 ವಿಶ್ವಕಪ್ 2022: ಬುಮ್ರಾ ಸ್ಥಾನಕ್ಕೆ ಮೊಹಮ್ಮದ್ ಶಮಿ ಅಧಿಕೃತ ಆಯ್ಕೆ, ಅಂತಿಮ 15 ಆಟಗಾರರ ಸ್ಕ್ವಾಡ್ ಇಲ್ಲಿದೆ

ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ 2022 ರ ಟಿ20 ವಿಶ್ವಕಪ್‌ನಲ್ಲಿ ಗಾಯಾಳು ಜಸ್ಪ್ರೀತ್ ಬುಮ್ರಾ ಸ್ಥಾನಕ್ಕೆ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾಗೆ ತೆರಳಿರುವ ಶಮಿ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ.
ಈ ಮೊದಲೇ ಬುಮ್ರಾಗೆ ಬದಲಿ ಆಟಗಾರನಾಗಿ ಶಮಿ ಹೆಸರು ಮುಂಚೂಣಿಯಲ್ಲಿತ್ತು. ಆದ್ರೆ ಎನ್‌ಸಿಎನಲ್ಲಿ ಅಭ್ಯಾಸ ಮಾಡುತ್ತಿದ್ದ ಮೊಹಮ್ಮದ್ ಶಮಿ ಫಿಟ್ನೆಸ್ ಪರೀಕ್ಷೆಗಾಗಿ ಬಿಸಿಸಿಐ ಎದುರು ನೋಡುತ್ತಿದ್ದು, ಅಂತಿಮವಾಗಿ ಶಮಿಗೆ ಟೀಂ ಇಂಡಿಯಾ ವಿಶ್ವಕಪ್ ಸ್ಕ್ವಾಡ್‌ನಲ್ಲಿ ಸ್ಥಾನ ನೀಡಲಾಗಿದೆ. ಈ ಕುರಿತಾಗಿ ಅಧಿಕೃತವಾಗಿ ಐಸಿಸಿ ಟ್ವೀಟ್ ಮಾಡಿದ್ದು, ಭಾರತದ ಅಂತಿಮ 15 ಆಟಗಾರರ ಸ್ಕ್ವಾಡ್ ಅನ್ನು ಕೂಡ ತನ್ನ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ.

ಕಳೆದ ಟಿ20 ವಿಶ್ವಕಪ್‌ನಿಂದ ಟಿ20 ಸರಣಿಯಲ್ಲಿ ಕಾಣಿಸಿಕೊಳ್ಳದ ಶಮಿ
ಇಂಟ್ರೆಸ್ಟಿಂಗ್ ವಿಷಯ ಏನಂದ್ರೆ ಮೊಹಮ್ಮದ್ ಶಮಿ 2021ರ ಟಿ20 ವಿಶ್ವಕಪ್‌ನ ಈಚೆಗೆ ಯಾವುದೇ ಭಾರತದ ಟಿ20 ಟೂರ್ನಿಗಳಲ್ಲಿ ಭಾಗಿಯಾಗಿಲ್ಲ. ಆದ್ರೆ ಐಪಿಎಲ್ 2022ರ ಸೀಸನ್‌ನಲ್ಲಿ ಗುಜರಾತ್ ಟೈಟನ್ಸ್ ಪರ ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದ್ದರು. ಆತ ಸೀಸನ್‌ನಲ್ಲಿ ಆರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. 16 ಪಂದ್ಯಗಳಿಂದ ಮೊಹಮ್ಮದ್ ಶಮಿ 8ರ ಎಕಾನಮಿಯಲ್ಲಿ 20 ವಿಕೆಟ್ ಕಬಳಿಸಿದ್ದಾರೆ.

ಕೊರೊನಾದಿಂದಾಗಿ ದಕ್ಷಿಣ ಆಫ್ರಿಕಾ ಸರಣಿ ಕಳೆದುಕೊಂಡಿದ್ದ ಶಮಿ
ಮೊಹಮ್ಮದ್ ಶಮಿಯನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಗೆ ಸಹ ಆಯ್ಕೆ ಮಾಡಲಾಗಿತ್ತು. ಆದ್ರೆ ಸರಣಿಯ ಪ್ರಾರಂಭದ ಮೊದಲು, ಶಮಿ ಕೊರೋನಾ ಪಾಸಿಟಿವ್ ಆದರು, ಇದರಿಂದಾಗಿ ಅವರು ತಂಡದಿಂದ ಹೊರಗುಳಿಯಬೇಕಾಯಿತು. ಇದರ ನಂತರ, ಅವರ ಫಿಟ್ನೆಸ್ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಯಿತು, ಆದರೆ ಶಮಿ ಕೊರೊನಾವನ್ನ ಮಣಿಸಿ ನೆಗೆಟಿವ್ ವರದಿ ಸಲ್ಲಿಸಿದ್ರು. ಅದರ ನಂತರ, ಬೆಂಗಳೂರಿನ ಎನ್‌ಸಿಎನಲ್ಲಿ ಫಿಟ್ನೆಸ್ ಪಡೆದ ನಂತರ, ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದು, ವಿಶ್ವಕಪ್‌ನಲ್ಲಿ ಆಡಲು ಎದುರು ನೋಡುತ್ತಿದ್ದಾರೆ.
ಮಹಿಳಾ ಐಪಿಎಲ್‌ಗೆ ವೇದಿಕೆ ಸಜ್ಜು: ಮಾರ್ಚ್ 2023ಕ್ಕೆ ಟಿ20 ಟೂರ್ನಮೆಂಟ್, 5 ತಂಡಗಳು ಭಾಗಿ

ದೀಪಕ್ ಚಹಾರ್ ಹೆಸರು ಮೊದಲು ಕೇಳಿ ಬಂದಿತ್ತು!
ಆರಂಭದಲ್ಲಿ ಮೀಸಲು ಪಟ್ಟಿಯಲ್ಲಿ ಹೆಸರಿಸಲ್ಪಟ್ಟಿದ್ದ ದೀಪಕ್ ಚಹಾರ್ ಆಸ್ಟ್ರೇಲಿಯಾಗೆ ವಿಮಾನ ಹತ್ತಬಹುದು ಎನ್ನಲಾಗಿತ್ತು. ಆದ್ರೆ ಚಹಾರ್ ಬೆನ್ನುನೋವಿನ ಕಾರಣ ಆಸ್ಟ್ರೇಲಿಯಾಗೆ ಹೋಗುವ ಅವಕಾಶ ಕಳೆದುಕೊಂಡರು. ಭಾರತವು ಶ್ರೇಯಸ್ ಅಯ್ಯರ್ ಮತ್ತು ರವಿ ಬಿಷ್ಣೋಯ್ ಅವರೊಂದಿಗೆ ಇಬ್ಬರು ಆಟಗಾರರನ್ನು - ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಮೀಸಲು ಆಟಗಾರರಾಗಿ ಹೆಸರಿಸಿದೆ. ಮೂವರು ಆಟಗಾರರು ಈಗಾಗಲೇ ಆಸ್ಟ್ರೇಲಿಯಾಕ್ಕೆ ತೆರಳಿದ್ದು, ತಂಡದೊಂದಿಗೆ ಸಂಪರ್ಕ ಸಾಧಿಸಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಈತ ಭಾರತದ ಟಾಪ್ ಸ್ಕೋರರ್ ಆಗಬಹುದು: ಆಕಾಶ್ ಚೋಪ್ರಾ

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಅಂತಿಮ 15 ಆಟಗಾರರ ಸ್ಕ್ವಾಡ್
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.
ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ಶಾರ್ದೂಲ್ ಠಾಕೂರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications