ಟಿ20 ವಿಶ್ವಕಪ್ 2022: ನೆದರ್ಲ್ಯಾಂಡ್ಸ್ ತಂಡಕ್ಕೆ ಸ್ಕಾಟ್ ಎಡ್ವರ್ಡ್ಸ್ ನಾಯಕ
ಟಿ20 ವಿಶ್ವಕಪ್ ಟೂರ್ನಿ ಸಮೀಪವಾಗುತ್ತಿದ್ದಂತೆ ಟೂರ್ನಿಯಲ್ಲಿ ಭಾಗವಹಿಸುವ ದೇಶಗಳು ತಮ್ಮ ತಂಡಗಳನ್ನು ಹೆಸರಿಸುತ್ತಿವೆ. ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದಿರುವ ನೆದರ್ಲ್ಯಾಂಡ್ಸ್ ಪ್ರಮುಖ ಆಟಗಾರರನ್ನು ಒಳಗೊಂಡ ತಂಡವನ್ನು ಪ್ರಕಟಿಸಿದೆ.
ನೆದರ್ಲ್ಯಾಂಡ್ಸ್ ತಂಡಕ್ಕೆ ಸ್ಕಾಟ್ ಎಡ್ವರ್ಡ್ಸ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಪ್ರಮುಖ ಆಟಗಾರರಾದ ರೋಲೋಫ್ ವ್ಯಾನ್ ಡೆರ್ ಮೆರ್ವೆ ಮತ್ತು ಕಾಲಿನ್ ಅಕರ್‌ಮ್ಯಾನ್ ತಂಡಕ್ಕೆ ವಾಪಸ್ ಆಗಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ರೋಲೋಫ್ ವ್ಯಾನ್ ಡೆರ್ ಮೆರ್ವೆ ಮತ್ತು ಕಾಲಿನ್ ಅಕರ್ಮನ್ ಗಮನಾರ್ಹ ಪ್ರದರ್ಶನ ನೀಡಿದ್ದರು.
ಬ್ರಾಂಡನ್ ಗ್ಲೋವರ್, ಟಿಮ್ ವ್ಯಾನ್ ಡೆರ್ ಗುಗ್ಟನ್, ಲೋಗನ್ ವ್ಯಾನ್ ಬೀಕ್ ಮತ್ತು ಪಾಲ್ ವ್ಯಾನ್ ಮೀಕೆರೆನ್ ಪ್ರಮುಖ ವೇಗದ ಬೌಲರ್ ತಂಡವನ್ನು ಸ್ಕಾಟ್ ಎಡ್ವರ್ಡ್ಸ್ ಮುನ್ನಡೆಸಲಿದ್ದಾರೆ. ಅಕರ್ಮನ್ ಮಧ್ಯಮ ವೇಗದ ಬೌಲಿಂಗ್ ಮಾಡುವ ಸಮರ್ಥ ಆಲ್ ರೌಂಡರ್ ಕೂಡ ಆಗಿದ್ದಾರೆ.
ಮುಂಬರುವ ಟಿ20 ವಿಶ್ವಕಪ್‌ಗಾಗಿ ನಾವು ಯುವ ಮತ್ತು ಅನುಭವ ಆಟಗಾರರ ಮಿಶ್ರಣದೊಂದಿಗೆ ಸಮತೋಲಿತ ತಂಡವನ್ನು ಒಟ್ಟುಗೂಡಿಸಿದ್ದೇವೆ ಎಂದು ಮುಖ್ಯ ಕೋಚ್ ರಯಾನ್ ಕುಕ್ ಹೇಳಿದ್ದಾರೆ.

ವಿಶ್ವಕಪ್‌ಗಾಗಿ ಸಿದ್ಧತೆ ಆರಂಭಿಸಿದ್ದೇವೆ
ಸೂಪರ್ ಲೀಗ್‌ನಲ್ಲಿ ಆಡಿದ ಅನುಭವವು ತಂಡಕ್ಕೆ ಬಹಳಷ್ಟು ಸಹಕಾರಿಯಾಗಲಿದೆ. ನಾವು ಮತ್ತಷ್ಟು ಉತ್ತಮ ಪ್ರದರ್ಶನ ನೀಡಲು ವಿಶ್ವಾಸ ಬಂದದೆ ಎಂದು ಕೋಚ್ ರಯಾನ್ ಕುಕ್ ಹೇಳಿದ್ದಾರೆ. "ನಾವು ಪಂದ್ಯಾವಳಿಯಲ್ಲಿ ಸ್ಪಷ್ಟವಾದ ಪ್ರಗತಿಯನ್ನು ಮುಂದುವರಿಸಲು ನೋಡುತ್ತೇವೆ ಮತ್ತು ವಿಶ್ವಕಪ್ ಆರಂಭಕ್ಕೆ ಮುಂಚಿತವಾಗಿ ಕೆಲವು ಗುಣಮಟ್ಟದ ಸಿದ್ಧತೆಯನ್ನು ಯೋಜಿಸಿದ್ದೇವೆ ಅದು ಕೌಶಲ್ಯ ಮತ್ತು ಒಗ್ಗಟ್ಟು ಎರಡರಲ್ಲೂ ಗುಂಪಿನ ಸಿದ್ಧತೆಗೆ ಸಹಾಯ ಮಾಡುತ್ತದೆ." ಎಂದು ಹೇಳಿದ್ದಾರೆ.
ಏಷ್ಯಾಕಪ್ ಆಡುತ್ತಿರುವ ತಂಡವೇ ಟಿ20 ವಿಶ್ವಕಪ್‌ಗೆ?: ನಾಯಕ ರೋಹಿತ್ ಶರ್ಮಾ ಹೇಳಿದ್ದೇನು?

ಜಿಂಬಾಬ್ವೆ ವಿರುದ್ಧ ಸೋತಿದ್ದ ನೆದರ್‌ಲ್ಯಾಂಡ್ಸ್
ಬುಲವಾಯೊದಲ್ಲಿ ನಡೆದ ಟಿ20 ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದ ಮೂಲಕ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ನೆದರ್‌ಲ್ಯಾಂಡ್ಸ್ ಪ್ರವೇಶ ಪಡೆದಿತ್ತು. ಕ್ವಾಲಿಫೈಯರ್‌ನ ಫೈನಲ್‌ನಲ್ಲಿ ಜಿಂಬಾಬ್ವೆ ವಿರುದ್ಧ ಸೋತಿದ್ದ ನೆದರ್ಲ್ಯಾಂಡ್ಸ್, ಎರಡನೇ ಸ್ಥಾನ ಪಡೆಯುವ ಮೂಲಕ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಜಿಂಬಾಬ್ವೆ ಕೂಡ ಈ ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ.

ವಿಶ್ವಕಪ್‌ಗೆ ಆಯ್ಕೆಯಾದ ನೆದರ್‌ಲ್ಯಾಂಡ್ಸ್ ಟೀಂ
ತಂಡ: ಸ್ಕಾಟ್ ಎಡ್ವರ್ಡ್ಸ್ (c, wk), ಕಾಲಿನ್ ಅಕರ್‌ಮನ್, ಶರೀಜ್ ಅಹ್ಮದ್, ಲೋಗನ್ ವ್ಯಾನ್ ಬೀಕ್, ಟಾಮ್ ಕೂಪರ್, ಬ್ರಾಂಡನ್ ಗ್ಲೋವರ್, ಟಿಮ್ ವ್ಯಾನ್ ಡೆರ್ ಗುಗ್ಟನ್, ಫ್ರೆಡ್ ಕ್ಲಾಸೆನ್, ಬಾಸ್ ಡಿ ಲೀಡೆ, ಪಾಲ್ ವ್ಯಾನ್ ಮೀಕೆರೆನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಸ್ಟೀಫನ್ ಮೈಬರ್ಗ್ ತೇಜ ನಿಡಮನೂರು, ಮ್ಯಾಕ್ಸ್ ಒ'ಡೌಡ್, ಟಿಮ್ ಪ್ರಿಂಗಲ್, ವಿಕ್ರಮ್ ಸಿಂಗ್
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ನೆದರ್ಲೆಂಡ್ಸ್, ನಮೀಬಿಯಾ, ಶ್ರೀಲಂಕಾ ಮತ್ತು ಯುಎಇ ಜೊತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನ ಹಂತದ ಪಂದ್ಯಗಳಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications