IND vs PAK T20 World Cup: ಇಶಾನ್ ಕಿಶನ್ ಅರ್ಧಶತಕ: ಪಾಕ್‌ಗೆ 176 ರನ್ ಗುರಿ
ಕೊಲಂಬೊ: ಕೊಲಂಬೊ: ಆರಂಭಿಕ ಆಟಗಾರ ಇಶಾನ್ ಕಿಶನ್ ಅವರು ಬಾರಿಸಿದ ಅರ್ಧಶತಕದ ಬಲದಿಂದ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಲೀಗ್ ಹಂತದ ಪಂದ್ಯದಲ್ಲಿ ಪಾಕಿಸ್ತಾನಕ್ಕೆ 176 ರನ್ ಗುರಿಯನ್ನು ನೀಡಿದೆ.
ಭಾರತ ತಂಡ ಪಾಕಿಸ್ತಾನ ವಿರುದ್ಧ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆಯಿತು. ಇದನ್ನು ಸದುಪಯೋಗ ಪಡಿಸಿಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿದ್ದ ಭಾರತದ ಆಸೆಗೆ ಆರಂಭದಲ್ಲೆ ಪೆಟ್ಟು ಬಿದ್ದಿತು. ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಹೊಟ್ಟೆ ನೋವಿನ ಕಾರಣದಿಂದ ಅಂಗಳದಿಂದ ದೂರ ಉಳಿದಿದ್ದ ಅಭಿಷೇಕ್, ಪಾಕ್ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿದರು. ಆದರೆ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇವರು ಸಲ್ಮಾನ್ ಅಲಿ ಆಘಾತ ತೋಡಿದ ಖೆಡ್ಡಾಗೆ ಬಲಿಯಾದರು.

ಟೀಮ್ ಇಂಡಿಯಾ 1 ರನ್ ಆಗುವಷ್ಟರಲ್ಲಿ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ತಂಡಕ್ಕೆ ಆರಂಭಿಕ ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ ಜೋಡಿ ಆಧಾರವಾದರು. ಈ ಜೋಡಿ ಪವರ್ ಪ್ಲೇನಲ್ಲಿ ವಿಕೆಟ್ ಬೀಳದಂತೆ ನೋಡಿಕೊಂಡು ಬ್ಯಾಟ್ ಮಾಡಿತು. ಅಲ್ಲದೆ ರನ್ ವೇಗಕ್ಕೆ ಚುರುಕು ಮುಟ್ಟಿಸುವಲ್ಲಿ ಈ ಜೋಡಿ ಸಫಲವಾಯಿತು. ಪವರ್ ಪ್ಲೇ ಅಂತ್ಯದಲ್ಲಿ ಭಾರತ 1 ವಿಕೆಟ್ ನಷ್ಟಕ್ಕೆ 52 ರನ್ ಸೇರಿಸಿತು.
ಇಶಾನ್ ಅರ್ಧಶತಕ
ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಿದ್ದ ಇಶಾನ್ ಕಿಶನ್, ಪಾಕ್ ವಿರುದ್ದದ ಮಹತ್ವದ ಪಂದ್ಯದಲ್ಲೂ ಇದೇ ಲಯವನ್ನು ಮುಂದುವರೆಸಿದರು. ಪಾಕ್ ತಂಡದ ಸ್ಪಿನ್ ಬೌಲರ್‌ಗಳ ತಂತ್ರವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದರು. ಇವರು ಈ ಪಂದ್ಯದಲ್ಲಿ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ಇಶಾನ್ ಕಿಶನ್ 40 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಾಯದಿಂದ 77 ರನ್ ಬಾರಿಸಿದರು. ಇವರಿಗೆ ಸೈಮ್ ಅಯುಬ್ ಖೆಡ್ಡಾ ತೋಡಿದರು. ಇವರು ಔಟ್ ಆದಾಗ ಭಾರತ ತಂಡದ ಮೊತ್ತ 88 ಆಗಿತ್ತು.
ಮೂರನೇ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಜೋಡಿ 34 ಎಸೆತಗಳಲ್ಲಿ 38 ರನ್ ಸಿಡಿಸಿತು. ಈ ವೇಳೆ 25 ರನ್ ಬಾರಿಸಿದ್ದಾಗ ತಿಲಕ್ ವರ್ಮಾ ಔಟ್ ಆದರು. ಇವರು ಔಟ್ ಆಗುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ರನ್ ವೇಗಕ್ಕೆ ಚುರುಕು ಮುಟ್ಟಿಸಲ ಹೋಗಿ ಔಟ್ ಆದರು. ಭಾರತ 126 ರನ್‌ಗಳಿಗೆ ಸತತ ಎರಡು ವಿಕೆಟ್ ಕಳೆದುಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications