ಸಿದ್ಧತೆಯೇ ಮಾಡಿಕೊಳ್ಳದೆ ವಿಶ್ವಕಪ್‌ಗೆ ಬಂದ ತಂಡ ಅದು: ಮಾಜಿ ಕ್ರಿಕೆಟಿಗನ ಟೀಕೆ

ಟಿ20 ವಿಶ್ವಕಪ್‌ನ ಸೂಪರ್ 12 ಹಂತದಲ್ಲಿ ಸತತ ಎರಡನೇ ಪಂದ್ಯದಲ್ಲಿಯೂ ಸೋಲು ಅನುಭವಿಸುವ ಮೂಲಕ ಪಾಕಿಸ್ತಾನ ತಂಡ ಈ ಬಾರಿಯ ಟಿ20 ವಿಶ್ವಕಪ್‌ನಿಂದ ಶೀಘ್ರದಲ್ಲೇ ಹೊರಬೀಳುವ ಮುನ್ಸೂಚನೆ ನೀಡಿದೆ. ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದು ಭಾರತದ ವಿರುದ್ಧ ಸೋತ ಬಳಿಕ ಜಿಂಬಾಬ್ವೆ ವಿರುದ್ಧವೂ ಸೋತು ಸಂಕಷ್ಟದಲ್ಲಿದೆ.
ಇನ್ನು ಕಳೆದ ವರ್ಷ ನಡೆದ ವಿಶ್ವಕಪ್‌ನಲ್ಲಿ ಭಾರತ ತಂಡ ಕೂಡ ಇದೇ ಪರಿಸ್ಥಿತಿಯನ್ನು ಎದುರಿಸಿತ್ತು. ಮೊದಲ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳ ವಿರುದ್ಧ ಸೋಲು ಅನುಭವಿಸಿತ್ತು. ಇದು ಭಾರತ ತಂಡವನ್ನು ಲೀಗ್ ಹಂತದಿಂದಲೇ ಹೊರಬೀಳುವಂತೆ ಮಾಡಿತ್ತು. ಈ ಹಿನ್ನಲೆಯಲ್ಲಿ ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ಪ್ರತಿಕ್ರಿಯೆ ನೀಡಿದ್ದು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ವ್ಯತ್ಯಾಸವನ್ನು ಉಲ್ಲೇಖಿಸಿದ್ದಾರೆ. ಪಾಕಿಸ್ತಾನ ತಂಡ ಸಿದ್ಧತೆಯನ್ನೇ ಮಾಡಿಕೊಳ್ಳದೆ ಈ ವಿಶ್ವಕಪ್‌ಗೆ ಕಣಕ್ಕಿಳಿದೆ ಎಂದಿದ್ದಾರೆ ಓಜಾ.

ಉತ್ತರಗಳನ್ನು ಕಂಡುಕೊಂಡು ಕಣಕ್ಕಿಳಿಯಬೇಕು
"ಪಾಕಿಸ್ತಾನ ತಂಡ ಉತ್ತಮವಾಗಿರುವ ತಂಡ ಎಂದು ಸುನಿಲ್ ಗವಾಸ್ಕರ್ ಸರ್ ಹೇಳಿದ್ದಾರೆ. ಆದರೆ ಆ ತಂಡದಲ್ಲಿ ಸಮಸ್ಯೆಯಿರುವುದು ಮಧ್ಯಮ ಕ್ರಮಾಂಕದಲ್ಲಿ. ಈ ಪ್ರಶ್ನೆಗೆ ವಿಶ್ವಕಪ್‌ಗೆ ಮುನ್ನವೇ ಅವರು ಉತ್ತರವನ್ನು ಕಂಡುಕೊಳ್ಳಬೇಕಾಗಿತ್ತು. ಇಂಥಾ ಮಹತ್ವದ ಟೂರ್ನಿಗೂ ಮುನ್ನ ಎಲ್ಲಾ ಪ್ರಶ್ನೆಗಳಿಗೂ ಉತ್ತರಗಳನ್ನು ಕಂಡುಕೊಂಡೇ ಕಣಕ್ಕಿಳಿಯಬೇಕಾಗುತ್ತದೆ. ಹಾಗಾಗದಿದ್ದಾಗ ಇಂಥಾ ಪ್ರಶ್ನೆಗಳು ಮತ್ತೆ ಮತ್ತೆ ಎದುರಾಗುತ್ತದೆ" ಎಂದಿದ್ದಾರೆ ಪ್ರಗ್ಯಾನ್ ಓಜಾ.

2019 ಏಕದಿನ ವಿಶ್ವಕಪ್ ಉಲ್ಲೇಖಿಸಿದ ಓಜಾ
ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾ 2019ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತ ಎದುರಿಸಿದ ಸವಾಲನ್ನು ಉಲ್ಲೇಖಿಸಿದ್ದಾರೆ. "2019ರಲ್ಲಿ ಟೀಮ್ ಇಂಡಿಯಾದ 4ನೇ ಕ್ರಮಾಂಕದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ಆ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಭಾರತ ಸಾಕಷ್ಟು ಪ್ರಯತ್ನ ಪಟ್ಟಿದೆ. ಸದ್ಯ ಅದಕ್ಕೆ ಭಾರತ ಉತ್ತರವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ" ಎಂದಿದ್ದಾರೆ ಪ್ರಗ್ಯಾನ್ ಓಜಾ.

ಭಾರತ ಪ್ರಗತಿ ಸಾಧಿಸಲು ಕಾರಣ
ಮುಂದುವರಿದು ಮಾತನಾಡಿದ ಭಾರತದ ಮಾಜಿ ಸ್ಪಿನ್ನರ್, "ಚಾಂಪಿಯನ್ ಎನಿಸಿಕೊಳ್ಳಬೇಕಾದರೆ ತಂಡಗಳು ಮಾಡಬೇಕಿರುವುದು ಅದನ್ನೇ. ಸೂಕ್ತವೆನಿಸದ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತವೆ. ಭಾರತ ಪ್ರಗತಿ ಸಾಧಿಸಿದ್ದು ಈ ವಿಚಾರದಲ್ಲಿ. ಆದರೆ ಪಾಕಿಸ್ತಾನ ತಂಡ ಇನ್ನು ಕೂಡ ಉತ್ತಮ ತಂಡವನ್ನು ಕಟ್ಟುವ ಪ್ರಯತ್ನದಲ್ಲಿದೆ. ಭಾರತದ ವಿರುದ್ಧದ ಸೋಲು ಅವರಿಗೆ ಮಾನಸಿಕ ಒತ್ತಡವನ್ನುಂಟು ಮಾಡಿರುವ ಸಾಧ್ಯತೆಯಿದೆ. ಜಿಂಬಾಬ್ವೆ ವಿರುದ್ಧದ ಸೋಲಿಗೂ ಅದು ಕಾರಣವಾಗಿರಬಹುದು" ಎಂದಿದ್ದಾರೆ ಪ್ರಗ್ಯಾನ್ ಓಜಾ.

ಮುಂದಿನ ಕದನಕ್ಕೆ ಸಜ್ಜಾದ ಭಾರತ
ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದ್ದು ಟೂರ್ನಿಯಲ್ಲಿ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ಮೊದಲಿಗೆ ಪಾಕಿಸ್ತಾನದ ವಿರುದ್ಧ ರೋಚಕ ಗೆಲುವು ಸಾಧಿಸಿದ ಟೀಮ್ ಇಂಡಿಯಾ ಬಳಿಕ ನೆದರ್ಲೆಂಡ್ಸ್ ವಿರುದ್ಧ ಸುಲಭ ಗೆಲುವು ಸಾಧಿಸಲು ಯಶಸ್ವಿಯಾಗಿದೆ. ಇದೀಗ ಟೀಮ್ ಇಂಡಿಯಾ ಈ ವಿಶ್ವಕಪ್‌ನ ಮೂರನೇ ಕದನಕ್ಕೆ ಸಜ್ಜಾಗಿದ್ದು ಈ ಸಂದರ್ಭದಲ್ಲಿ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ತಂಡ ಎದುರಾಳಿಯಾಗಿದೆ.
ಭಾನುವಾರ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ತಮ್ಮ ಮೂರನೇ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು ಎರಡು ಬಲಿಷ್ಠ ತಂಡಗಳ ನಡುವಿನ ಈ ಕದನ ಸಾಕಷ್ಟು ಕುತೂಹಲ ಕೆರಳಿಸಿದೆ. ಆದರೆ ಈ ಪಂದ್ಯ ಟೀಮ್ ಇಂಡಿಯಾದ ಓವರ್ ಆಟಗಾರನ ಪಾಲಿಗೆ ನಿಜಕ್ಕೂ ಅಗ್ನಿ ಪರೀಕ್ಷೆಯಾಗಲಿದ್ದು ಈ ಪಂದ್ಯದಲ್ಲಿ ಆ ಆಟಗಾರ ಫಾರ್ಮ್ ಕಂಡುಕೊಳ್ಳಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications