
ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ
"ನಾವು ಸಾಧ್ಯವಾದಷ್ಟು ಎದುರಾಳಿ ಮೇಲೆ ಒತ್ತಡವನ್ನು ಹೇರುವ ಪ್ರಯತ್ನ ನಡೆಸಬೇಕು. ಯಾವುದೇ ತಂಡವನ್ನು ಕೂಡ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದು ನಮಗೆ ತಿಳಿದಿದೆ. ಆದರೆ ಆರಂಭಿಕ ಹಂತದಲ್ಲಿ ಬ್ಯಾಟ್ ಮೂಲಕ ಉತ್ತಮ ಪ್ರದರ್ಶನ ನೀಡಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಉತ್ತಮ, ಎಸೆತಗಳನ್ನು ಎಸೆಯುವ ಮೂಲಕ ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸಬೇಕು. ಉತ್ತಮ ತಂಡಗಳು ಕೂಡ ಕೆಲ ಸಂದರ್ಭಗಳಲ್ಲಿ ಒತ್ತಡಕ್ಕೆ ಸಿಲುಕುತ್ತವೆ. ಜಿಂಬಾಬ್ವೆ ವಿರುದ್ಧದ ಪಂದ್ಯ ಗೆಲ್ಲಲೇಬೇಕಾದ ಪಂದ್ಯವಾಗಿದೆ ಎಂಬುದು ನಮಗೆ ಅರಿವಿದೆ" ಎಂದಿದ್ದಾರೆ ಆರ್ ಅಶ್ವಿನ್.

ಭಾನುವಾರ ನಡೆಯಲಿದೆ ಸೆಣೆಸಾಟ
ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ 5 ರನ್‌ಗಳ ಅಂತರದಿಂದ ರೋಚಕ ಗೆಲುವು ಸಾಧಿಸಿದ ಬಳಿಕ ಟೀಮ್ ಇಂಡಿಯಾ ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಸೂಪರ್ 12 ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. ಸೆಮಿಫೈನಲ್ ಹಂತಕ್ಕೇರುವ ದೃಷ್ಟಿಯಿಂದ ಈ ಪಂದ್ಯ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.
IPL 2023: ಆಟಗಾರರ ಹರಾಜಿಗೂ ಮುನ್ನ RCB ಕೈ ಬಿಡಲಿರುವ 3 ಆಟಗಾರರು!

ಜಿಂಬಾಬ್ವೆ ಪ್ರದರ್ಶನವನ್ನು ಹೊಗಳಿದ ಅಶ್ವಿನ್
"ಇದು ಟಿ20 ವಿಶ್ವಕಪ್‌ನ ಎಲ್ಲಾ ಪಂದ್ಯಗಳಂತೆಯೇ ಗೆಲ್ಲಲೇಬೇಕಾದ ಪಂದ್ಯವಾಗಿದೆ. ಈ ಮುಖಾಮುಖಿಗಾಗಿ ನಾವು ಎದುರು ನೋಡುತ್ತಿದ್ದೇವೆ. ಜಿಂಬಾಬ್ವೆ ಕೆಲ ಅದ್ಭುತ ಕ್ರಿಕೆಟ್ ಪಂದ್ಯಗಳನ್ನು ಈ ಟೂರ್ನಿಯಲ್ಲಿ ಆಡಿದೆ. ಅವರ ವಿರುದ್ಧ ಸುಲಭವಾಗಿ ಪಂದ್ಯವನ್ನು ಗೆಲ್ಲಬಹುದು ಎಂದು ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ಅವರು ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ನಾವು ಅದನ್ನು ಗೌರವಿಸುತ್ತೇವೆ" ಎಂದಿದ್ದಾರೆ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್.

ಪಾಕ್ ವಿರುದ್ಧದ ಗೆಲುವು ಜಿಂಬಾಬ್ವೆ ಆತ್ಮವಿಶ್ವಾಸ ಹೆಚ್ಚಿಸಿದೆ
ಇನ್ನು ಜಿಂಬಾಬ್ವೆ ತಂಡ ಸೆಮಿಫೈನಲ್ ಸ್ಪರ್ಧೆಯಿಂದ ಅಧಿಕೃತವಾಗಿ ಇನ್ನೂ ಹೊರಬೀಳದಿದ್ದರೂ ಆ ಅವಕಾಶ ತೀರಾ ಕಡಿಮೆಯಿದೆ. ಅದಕ್ಕಾಗಿ ಪವಾಡವನ್ನೇ ನಿರೀಕ್ಷಿಸಬೇಕಾಗುತ್ತದೆ. ಆದರೆ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ಅನುಭವಿಸಿದ ಗೆಲುವು ತಂಡದ ಆತ್ವಿಶ್ವಾಸವನ್ನು ಸಹಜವಾಗಿಯೇ ಹೆಚ್ಚಿಸುರುತ್ತದೆ ಹಾಗೂ ಭಾರತದ ವಿರುದ್ಧವೂ ಅಂಥಾದ್ಧೇ ಪ್ರದರ್ಶನದ ವಿಶ್ವಾಸ ಮೂಡಿಸಿರುತ್ತದೆ. ಈ ಬಗ್ಗೆ ಕೂಡ ಅಶ್ವಿನ್ ಮಾತನಾಡಿದ್ದಾರೆ. "ಪಾಕಿಸ್ತಾನದ ವಿರುದ್ಧದ ಗೆಲುವು ಅವರಿಗೆ ಸಜಜವಾಗಿಯೇ ದೊಡ್ಡ ಆತ್ಮವಿಶ್ವಾಸ ಮೂಡಿಸಿರುತ್ತದೆ. ನಾವು ಈ ಟೂರ್ನಿಯಲ್ಲಿ ಯಾವ ತಂಡವನ್ನಾದರೂ ಸೋಲಿಸಬಹುದು ಎಂಬ ವಿಶ್ವಾಸ ಬಂದಿರುತ್ತದೆ. ಆ ಆತ್ಮವಿಶ್ವಾಸದೊಂದಿಗೆ ಭಾರತದ ವಿರುದ್ಧವೂ ಅವರು ಕಣಕ್ಕಿಳಿಯಲಿದ್ದಾರೆ" ಎಂದಿದ್ದಾರೆ ಆರ್ ಅಶ್ವಿನ್.


Click it and Unblock the Notifications
