IPL 2023: ಆಟಗಾರರ ಹರಾಜಿಗೂ ಮುನ್ನ RCB ಕೈ ಬಿಡಲಿರುವ 3 ಆಟಗಾರರು!

ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಇದೇ ವರ್ಷ ಡಿಸೆಂಬರ್‌ನಲ್ಲಿ ನಡೆಸಲು ಬಿಸಿಸಿಐ ಯೋಜಿಸಿದ್ದು, ಎಲ್ಲವೂ ಅಂದುಕೊಂಡಂತೆ ಆದಲ್ಲಿ ಟರ್ಕಿಯ ಇಸ್ತಾನ್‌ಬುಲ್ ಇಲ್ಲವೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟಗಾರರ ಹರಾಜು ನಡೆಯಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 15 ಸೀಸನ್ ಯಶಸ್ವಿಯಾಗಿ ಮುಗಿದಿದ್ದು 16ನೇ ಸೀಸನ್‌ಗೆ ಈಗಾಗಲೇ ತಂಡಗಳು ತೆರೆಮರೆಯ ತಯಾರಿ ನಡೆಸಿದ್ದು, ಆಟಗಾರರ ಹರಾಜಿಗೂ ಮುನ್ನ ರಿಲೀಸ್ ಮಾಡಲಿರುವ ಆಟಗಾರರ ಹೆಸರನ್ನು ಮತ್ತು ರೀಟೈನ್ ಮಾಡಿಕೊಂಡವರನ್ನ ಪಟ್ಟಿ ಮಾಡಬೇಕಿದೆ. ಇತ್ತೀಚೆಗಷ್ಟೇ ಐಪಿಎಲ್ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವವನ್ನು ಬದಲಾವಣೆ ಮಾಡಿದ್ದು ಮಯಾಂಕ್ ಬದಲು ಶಿಖರ್ ಧವನ್‌ಗೆ ಪಟ್ಟ ಕಟ್ಟಿದೆ.
ಇತರೆ ತಂಡಗಳಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಮೆಗಾ ಹರಾಜಿಗೆ ತಯಾರಿ ನಡೆಸುತ್ತಿದ್ದು, ಯಾವ ಆಟಗಾರನನ್ನು ಕೈ ಬಿಡಬೇಕು ಎಂದು ಲೆಕ್ಕಾಚಾರ ಹಾಕಿದೆ. ಕಳೆದ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಫಾಪ್ ಡುಪ್ಲೆಸಿಸ್ ಆರ್‌ಸಿಬಿ ತಂಡವನ್ನ ಮುನ್ನಡೆಸಿದ್ದರು.
ಐಪಿಎಲ್ 2023ರ ಆಟಗಾರರ ಹರಾಜಿಗೂ ಮುನ್ನ ಆರ್‌ಸಿಬಿ ತಂಡದಿಂದ ಹೊರಬೀಳಬಲ್ಲ ಮೂವರು ಆಟಗಾರರು ಯಾರು? ಎಂಬುದನ್ನ ಈ ಕೆಳಗೆ ಕಾಣಬಹುದು.

ಲವನೀತ್ ಸಿಸೋಡಿಯಾ
ಕಳೆದ ಸೀಸನ್‌ನಲ್ಲಿ ಆರ್‌ಸಿಬಿ ಸ್ಕ್ವಾಡ್‌ಗೆ ಹರಾಜಾಗಿದ್ದ ಕರ್ನಾಟಕದ ಆಟಗಾರ ಲವನೀತ್ ಸಿಸೋಡಿಯಾ ಸೀಸನ್ ಆರಂಭಕ್ಕೂ ಮುನ್ನವೇ ಇಂಜ್ಯುರಿಗೆ ಒಳಗಾದರು. ಪರಿಣಾಮ ಲವನೀತ್ ಇಡೀ ಸೀಸನ್‌ನಿಂದ ಹೊರಬಿದ್ದರು. ಕರ್ನಾಟಕ ಪರ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸಿಸೋಡಿಯಾ ದುರಾದೃಷ್ಟವಶಾತ್ ಆರ್‌ಸಿಬಿ ತಂಡದಲ್ಲಿ ಆಡುವ ಅವಕಾಶ ಕಳೆದುಕೊಂಡರು.
ಈತನ ಇಂಜ್ಯುರಿಯಿಂದಾಗಿ ಆರ್‌ಸಿಬಿ ರಜತ್ ಪಾಟೀದಾರ್ ಅನ್ನು ತಂಡದಲ್ಲಿ ಆಯ್ಕೆ ಮಾಡಿಕೊಂಡಿತು. ಮಧ್ಯ ಪ್ರದೇಶದ ಬ್ಯಾಟರ್ ಇಡೀ ಟೂರ್ನಮೆಂಟ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಸಿಕ್ಕ ಅವಕಾಶವನ್ ಎರಡೂ ಕೈನಲ್ಲಿ ಬಾಚಿಕೊಂಡ ರಜತ್ ಪಾಟೀದಾರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಎಲಿಮಿನೇಟರ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.
ಹೀಗಾಗಿ ಈ ಸೀಸನ್‌ನಲ್ಲಿ ಆರ್‌ಸಿಬಿ ಕೈ ಬಿಡುವ ಮೊದಲ ಆಟಗಾರ ಲವನೀತ್ ಸಿಸೋಡಿಯಾ ಆಗಿರಬಹುದು.
ಕಿಂಗ್ ಕೊಹ್ಲಿಯ 34ನೇ ಬರ್ತ್‌ಡೇ: ವಿಭಿನ್ನ ಫೋಟೋಗಳನ್ನ ಪೋಸ್ಟ್ ಮಾಡಿದ ಅನುಷ್ಕಾ ಶರ್ಮಾ

ಶೆರ್ಫೆನ್ ರುದರ್ಫೋಡ್
ವೆಸ್ಟ್ ಇಂಡೀಸ್‌ನ ಬೆಸ್ಟ್ ಟಿ20 ಬ್ಯಾಟರ್‌ಗಳಲ್ಲಿ ಶೆರ್ಫೆನ್ ರುದರ್ಫೋಡ್ ಕೂಡ ಒಬ್ಬರಾಗಿದ್ದಾರೆ. ತನ್ನ ದೊಡ್ಡ ಹೊಡೆತಗಳಿಗೆ ಹೆಚ್ಚು ಹೆಸರಾಗಿರುವ ಈ ಕೆರಿಬಿಯನ್ ಕ್ರಿಕೆಟರ್ ಕೆರಿಬಿಯನ್ ಪ್ರೀಮಿಯರ್ ಲೀಗ್ 2021ರ ಸೀಸನ್‌ನಲ್ಲಿ ಮಿಂಚಿದರು. 127.18ರ ಸ್ಟ್ರೈಕ್‌ರೇಟ್‌ನಲ್ಲಿ 262ರನ್ ಸಿಡಿಸಿದ ರುದರ್ಫೋಡ್ ಆರ್‌ಸಿಬಿ ತೆಕ್ಕೆಗೆ ಬಿದ್ದಿದ್ದರು.
ಆದ್ರೆ ಐಪಿಎಲ್ 2022ರ ಸೀಸನ್‌ನಲ್ಲಿ ರುದರ್ಫೋಡ್ ಆರ್‌ಸಿಬಿ ಮಧ್ಯಮ ಕ್ರಮಾಂಕ ಬಲಪಡಿಸಬಹುದೆಂದು ಭಾವಿಸಲಾಗಿತ್ತು. ಕೆಲವೊಂದು ಪಂದ್ಯಗಳಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅನುಪಸ್ಥಿತಿಯಲ್ಲಿ ತಂಡದಲ್ಲಿ ಅವಕಾಶ ಪಡೆದ ಈತನು ಉತ್ತಮವಾಗಿ ಬಳಸಿಕೊಳ್ಳಲಿಲ್ಲ. 66ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿ ೩೩ ರನ್‌ಗಳಿಸಲಷ್ಟೇ ಶಕ್ತಗೊಂಡರು.
ಗ್ಲೆನ್ ಮ್ಯಾಕ್‌ವೆಲ್ ತಂಡಕ್ಕೆ ಮರಳಿದ ಬಳಿಕ ರುದರ್ಫೋಡ್‌ಗೆ ಒಂದು ಅವಕಾಶವೂ ಸಿಗಲಿಲ್ಲ. ತನ್ನ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಈತ ಆರ್‌ಸಿಬಿ ಪರ ಅಂತಹ ಒಂದು ಇನ್ನಿಂಗ್ಸ್ ಆಡಲಿಲ್ಲ. ಹೀಗಾಗಿ ಆರ್‌ಸಿಬಿ ಆಟಗಾರರ ಹರಾಜಿಗೂ ಮುನ್ನ ಈತನನ್ನು ತಂಡದಿಂದ ಕೈ ಬಿಡುವ ಸಾಧ್ಯತೆಯಿನ್ನು ಕಾಣಬಹುದು.
ಟಿ20 ವಿಶ್ವಕಪ್: ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ ಪಂದ್ಯದಲ್ಲಿ ಅಂಪೈರ್ಸ್ ಎಡವಟ್ಟು, ಓವರ್‌ನಲ್ಲಿ 5 ಎಸೆತ

ಡೇವಿಡ್ ವಿಲ್ಲಿ
ಇಂಗ್ಲೆಂಡ್ ಪರ ಟಿ20 ಫಾರ್ಮೆಟ್‌ನಲ್ಲಿ ಅದ್ಭುತ ಪ್ರದರ್ಶನವನ್ನ ಡೇವಿಡ್ ವಿಲ್ಲಿ ನೀಡಿದ್ದರು. ಚುಟುಕು ಫಾರ್ಮೆಟ್‌ನಲ್ಲಿ ೨೪೧ ಪಂದ್ಯಗಳನ್ನು ಆಡಿದ ಅನುಭವವುಳ್ಳ ಈತ ಅಷ್ಟೇ ನಂಬರ್ ವಿಕೆಟ್ ಪಡೆದಿದ್ದು, 7.94 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. 137.96 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಈತ 3369 ರನ್ ಕಲೆಹಾಕಿದ್ದಾರೆ.
ಐಪಿಎಲ್ 15ನೇ ಸೀನಸ್‌ನಲ್ಲಿ ಆರ್‌ಸಿಬಿ ಡೇವಿಡ್ ವಿಲ್ಲಿಯನ್ನು ಹರಾಜಿನಲ್ಲಿ ಗೆದ್ದು ತಂಡಕ್ಕೆ ಸೇರಿಸಿಕೊಂಡಿತು. ಜೋಶ್ ಹೇಜಲ್‌ವುಡ್ ಅನುಪಸ್ಥಿತಿಯಲ್ಲಿ ಡೇವಿಡ್ ವಿಲ್ಲ ಆರಂಭಿಕ ಕೆಲವು ಪಂದ್ಯಗಳನ್ನಷ್ಟೇ ಆಡಿದರು. ಆದ್ರೆ ತಂಡದ ಪರ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲಗೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications