For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ತಂಡಕ್ಕೆ ಈತನಿಂದ ಕಂಟಕ: ಭವಿಷ್ಯ ನುಡಿದ ಮಾಜಿ ನಾಯಕ ಮಾರ್ಗನ್

T20 World Cup: Rashid Khan crucial in England vs Afghanistan Match said Eoin Morgan

ಟಿ20 ವಿಶ್ವಕಪ್‌ನಲ್ಲಿ ಸೂಪರ್ 12 ಹಂತದ ಪಂದ್ಯಗಳು ಶನಿವಾರದಿಂದ ಆರಂಭವಾಗುತ್ತಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣೆಸಾಡುವ ಮೂಲಕ ಈ ಹಂತಕ್ಕೆ ಚಾಲನೆ ದೊರೆಯಲಿದೆ. ಶನಿವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಸೂಪರ್ 12 ಹಂತದಲ್ಲಿ ಬಲಿಷ್ಠ ತಂಡಗಳ ನಡುವಿನ ಕದನ ಅಭಿಮಾನಿಗಳಿಗೆ ರೋಚಕತೆ ಹೆಚ್ಚಿಸಲಿದ್ದು ಪ್ರತಿ ಪಂದ್ಯಕ್ಕೂ ಕುತೂಹಲದಿಂದ ಕಾಯುವಂತಾಗಿದೆ.

ಇನ್ನು ಸೂಪರ್ 12 ಹಂತದಲ್ಲಿ ಇಂಗ್ಲೆಂಡ್ ತಂಡದ ಮೊದಲ ಪಂದ್ಯವನ್ನಾಡುವುದಕ್ಕೂ ಮುನ್ನ ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಮಾರ್ಗನ್ ಸೂಪರ್ 12 ಹಂತದಲ್ಲಿ ಇಂಗ್ಲೆಂಡ್ ತಂಡಕ್ಕೆ ಕಂಟಕವಾಗಬಲ್ಲ ಓರ್ವ ಆಟಗಾರನ ಬಗ್ಗೆ ಹೇಳಿಕೆ ನೀಡಿದ್ದಾರೆ. ಅಫ್ಘಾನಿಸ್ತಾನ ತಂಡದ ಈ ಆಟಗಾರ ಇಂಗ್ಲೆಂಡ್‌ಗೆ ಪಾಲಿಗೆ ಅಪಾಯಕಾರಿಯಾಗಬಲ್ಲ ಎಂದಿದ್ದಾರೆ ಇಯಾನ್ ಮಾರ್ಗನ್.

ರಶೀದ್ ಖಾನ್ ಬಗ್ಗೆ ಮಾರ್ಗನ್ ಮಾತು

ರಶೀದ್ ಖಾನ್ ಬಗ್ಗೆ ಮಾರ್ಗನ್ ಮಾತು

ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್ ಹೇಳಿಕೆ ನೀಡಿದ್ದು ಬೇರೆ ಯಾರ ಬಗ್ಗೆಯೂ ಅಲ್ಲ. ಅಫ್ಘಾನಿಸ್ತಾನದ ಪ್ರಮುಖ ಸ್ಪಿನ್ನರ್ ರಶೀದ್ ಖಾನ್ ಬಗ್ಗೆ. ಇಂಗ್ಲೆಂಡ್ ಹಾಗೂ ಅಫ್ಘನ್ ತಂಡಗಳ ನಡುವಿನ ಕದದಲ್ಲಿ ಇಂಗ್ಲೆಂಡ್ ತಂಡದ ಸೋಲು ಹಾಗೂ ಗೆಲುವಿಗೆ ಈತನ ಪ್ರದರ್ಶನವೇ ನಿರ್ಣಾಯಕವಾಗಲಿದೆ ಎಂದಿದ್ದಾರೆ ಇಯಾನ್ ಮಾರ್ಗನ್.

ಗೆಲುವು ನಿರ್ಧರಿಸಲಿದೆ ಆ ಇಬ್ಬರ ಸೆಣೆಸಾಟ

ಗೆಲುವು ನಿರ್ಧರಿಸಲಿದೆ ಆ ಇಬ್ಬರ ಸೆಣೆಸಾಟ

ಇಂಗ್ಲೆಂಡ್ ಹಾಗೂ ಅಫ್ಘಾನಿಸ್ತಾನದ ನಡುವಿನ ಕದನದಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಹಾಗೂ ಅಫ್ಘಾನಿಸ್ತಾನದ ಬೌಲರ್ ರಶೀದ್ ಖಾನ್ ನಡುವಿನ ಕದನ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಿದೆ ಎಂದಿದ್ದಾರೆ ಇಯಾನ್ ಮಾರ್ಗನ್. ಈ ಬಲಾಢ್ಯ ಆಟಗಾರರ ಮುಖಾಮುಖಿಯಲ್ಲಿ ಯಾರಿಗೆ ಮೇಲುಗೈ ದೊರೆಯಲಿದೆ ಎಂಬುದು ಈ ಪಂದ್ಯದ ಕುತೂಹಲಕಾರಿ ಅಂಶವಾಗಲಿದೆ ಎಂದು ಮಾರ್ಗನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ ಆವೃತ್ತಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದ ಇಂಗ್ಲೆಂಡ್

ಕಳೆದ ಆವೃತ್ತಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದ ಇಂಗ್ಲೆಂಡ್

ಇನ್ನು ಕಳೆದ ವರ್ಷ ಯುಎಇನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿತ್ತು. ಆದರೆ ಈ ಹಂತದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣೆಸಾಟ ನಡೆಸಿ ಸೋಲು ಕಂಡು ಅಲ್ಲಿಗೆ ಹೋರಾಟವನ್ನು ಅಂತ್ಯಗೊಳಿಸಿತ್ತು. ಇಯಾನ್ ಮಾರ್ಗನ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಮಾರ್ಗನ್ ನಾಯಕತ್ವದಲ್ಲಿ ತಂಡ ನಿರೀಕ್ಷೆಯ ಫಲುತಾಂಶ ನೀಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಜೋಸ್ ಬಟ್ಲರ್ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿಕೊಂಡಿದ್ದು ತಂಡ ಸಾಕಷ್ಟು ಸಮತೋಲಿತವಾಗಿ ಕಂಡುಬರುತ್ತಿದೆ. ಹೀಗಾಗಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಈ ಬಾರಿಯ ವಿಶ್ವಕಪ್ ಮೇಲೆ ಇಂಗ್ಲೆಂಡ್ ತಂಡದ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಯಿದೆ.

ಇತ್ತಂಡಗಳ ಸಂಪೂರ್ಣ ಸ್ಕ್ವಾಡ್

ಇತ್ತಂಡಗಳ ಸಂಪೂರ್ಣ ಸ್ಕ್ವಾಡ್

ಅಫ್ಘಾನಿಸ್ತಾನ ಸಂಪೂರ್ಣ ಸ್ಕ್ವಾಡ್: ಅಜ್ರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ದರ್ವಿಶ್ ರಸೂಲಿ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ, ಫರೀದ್ ಅಹ್ಮದ್ ಮಲಿಕ್, ಉಸ್ಮಾನ್ ಘನಿ, ಖೈಸ್ ಅಹ್ಮದ್, ಮೊಹಮ್ಮದ್ ಸಲೀಮ್ ಸಫಿ
ಇಂಗ್ಲೆಂಡ್ ಸಂಪೂರ್ಣ ಸ್ಕ್ವಾಡ್: ಜೋಸ್ ಬಟ್ಲರ್(ವಿಕೆಟ್ ಕೀಪರ್/ ನಾಯಕ), ಅಲೆಕ್ಸ್ ಹೇಲ್ಸ್, ಡೇವಿಡ್ ಮಲಾನ್, ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ಮಾರ್ಕ್ ವುಡ್, ಟೈಮಲ್ ಮಿಲ್ಸ್, ಫಿಲಿಪ್ ಸಾಲ್ಟ್, ಹ್ಯಾರಿ ಬ್ರೂಕ್

Story first published: Saturday, October 22, 2022, 10:55 [IST]
Other articles published on Oct 22, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+