ಟಿ20 ವಿಶ್ವಕಪ್: ಈ ಐವರು ವೇಗದ ಬೌಲರ್‌ಗಳು ಭಾರತ ತಂಡದಲ್ಲಿರಬೇಕು: ರಾಬಿನ್ ಉತ್ತಪ್ಪ

ಏಷ್ಯಾ ಕಪ್‌ನಲ್ಲಿ ಭಾರತದ ಹೋರಾಟ ಸೂಪರ್ 4 ಹಂತಕ್ಕೆ ಅಂತ್ಯವಾಗಿರುವ ಕಾರಣ ಟೂರ್ನಿಯಿಂದ ಅದಾಗಲೇ ಹೊರಬಿದ್ದಿದೆ. ಇದೀಗ ಮುಂದಿನ ಟಿ20 ವಿಶ್ವಕಪ್‌ಗೆ ಭಾರತದ ತಂಡದಲ್ಲಿ ಯಾವೆಲ್ಲಾ ಬದಲಾವಣೆಗಳನ್ನು ಮಾಡಿಕೊಳ್ಳಬೇಕು? ಯಾವ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ವಿಚಾರವಾಗಿ ಸಾಕಷ್ಟು ಕ್ರಿಕೆಟ್ ಪಂಡಿತರು, ವಿಶ್ಲೇಷಕರು, ಹಿರಿಯ ಕ್ರಿಕೆಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದ ಅನುಭವಿ ಆಟಗಾ ರಾಬಿನ್ ಉತ್ತಪ್ಪ ಕೂಡ ಪ್ರತಿಕ್ರಿಯೆ ನೀಡಿದ್ದು ಟಿ20 ವಿಶ್ವಕಪ್‌ನಲ್ಲಿ ಭಾರತದ ಪರವಾಗಿ ಈ ಇಬ್ಬರು ಆಟಗಾರರಿಗೆ ಅವಕಾಶ ದೊರೆಯಲೇ ಬೇಕು ಎಂಬ ಅಭಿಪ್ರಾಯಪಟ್ಟಿದ್ದಾರೆ.
ಏಷ್ಯಾ ಕಪ್‌ನಲ್ಲಿ ಅನುಭವಿಸಿದ ಹಿನ್ನಡೆಯನ್ನು ಗಮನಸಿಕೊಂಡು ರಾಬಿನ್ ಉತ್ತಪ್ಪ ಭಾರತದ ಬೌಲಿಂಗ್ ವಿಭಾಗದಲ್ಲಿ ಯಾವೆಲ್ಲಾ ಅಂಶಗಳನ್ನು ಪರಿಗಣಿಸಬೇಕು ಎಂದಿದ್ದಾರೆ. ಮುಂಬರುವ ಮಹತ್ವದ ಟೂರ್ನಬಿಗೆ ಭಾರತ ಐವರು ಬೌಲರ್‌ಗಳನ್ನು ತಂಡದಲ್ಲಿ ಸೇರಿಸಿಕೊಳ್ಳಲೇಬೇಕೆಂದು ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

ಈ ಐವರನ್ನು ಆಯ್ಕೆ ಮಾಡಲಿ ಎಂದ ಉತ್ತಪ್ಪ
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾಗಿಯಾಗುವ ಭಾರತದ ಸ್ಕ್ವಾಡ್‌ನಲ್ಲಿ ಐವರು ಬೌಲರ್‌ಗಳು ಇರಬೇಕು ಎಂದಿದ್ದಾರೆ ರಾಬಿನ್ ಉತ್ತಪ್ಪ. ಅನುಭವಿ ಬೌಲರ್‌ಗಳಾದ ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್ ಹಾಗೂ ಹರ್ಷಲ್ ಪಟೇಲ್ ಜೊತೆಗೆ ಹರ್ಷ್‌ದೀಪ್ ಸಿಂಗ್ ಹಾಗೂ ದೀಪಕ್ ಚಾಹರ್ ಅವರನ್ನು ತಂಡ ಆಯ್ಕೆ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ ಅನುಭವಿ ಆಟಗಾರ ರಾಬಿನ್ ಉತ್ತಪ್ಪ. ಅರ್ಷ್‌ದೀಪ್ ಸಿಂಗ್ ಹಾಗೂ ದೀಪಕ್ ಚಾಹರ್ ಇಬ್ಬರು ಕೂಡ ಉತ್ತಮ ಫಾರ್ಮ್‌ನಲ್ಲಿದ್ದು ಅವರನ್ನು ಈ ಮಹತ್ವದ ಟೂರ್ನಿಗೆ ಆಯ್ಕೆ ಮಾಡುವುದು ಅಗತ್ಯವಿದೆ ಎಂದಿದ್ದಾರೆ ಉತ್ತಪ್ಪ.

ಬೂಮ್ರಾ, ಹರ್ಷಲ್ ಕಮ್‌ಬ್ಯಾಕ್!
ಟೀಮ್ ಇಂಡಿಯಾದ ಪ್ರಮುಖ ಬೌಲರ್ ಜಸ್ಪ್ರೀತ್ ಬೂಮ್ರಾ ಹಾಗೂ ಹರ್ಷಲ್ ಪಟೇಲ್ ಇಬ್ಬರು ಕೂಡ ಗಾಯದ ಕಾಣದಿಂದಾಗಿ ತಂಡದಿಂದ ಹೊರಗುಳಿದಿದ್ದರು. ಎನ್‌ಸಿಎನಲ್ಲಿ ರಿಹ್ಯಾಬ್‌ನ್ಲಲಿ ಭಾಗಿಯಾಗಿದ್ದ ಇವರಿಬ್ಬರು ನಂತರ ಸಂಪೂರ್ಣವಾಗಿ ಫಿಟ್‌ನೆಸ್ ಗಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಪೂರ್ಣಸಾಮರ್ಥ್ಯದೊಂದಿಗೆ ಎನ್‌ಸಿಎನಲ್ಲಿ ಈ ಇಬ್ಬರು ಕೂಡ ಬೌಲಿಂಗ್ ನಡೆಸಿದ್ದು ಮುಂಬರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಆಯ್ಕೆಗೆ ಲಭ್ಯವಾಗಲಿದ್ದಾರೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ.

ಆಯ್ಕೆ ಸಮಿತಿ ಸಭೆ ಮೇಲೆ ಕುತೂಹಲ
ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದ್ದು ಟೂರ್ನಿಗೆ ಶೀಘ್ರದಲ್ಲಿಯೇ ತಂಡವನ್ನು ಘೋಷಣೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15ರಂದು ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕೆಲ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿದೆ. ಬೌಲಿಂಗ್ ವಿಭಾಗದ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ ಅಥೌಆ ದಿನೇಶ್ ಕಾರ್ತಿಕ್ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದ್ದು ಇಬ್ಬರಿಗೂ ಅವಕಾಶ ನೀಡಬೇಕಾ ಎಂಬುದು ಕೂಡ ನಿರ್ಧಾರವಾಗಲಿದೆ. ಇನ್ನು ಮತ್ತೋರ್ವ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಸೇರ್ಪಡೆ ಬಗ್ಗೆಯೂ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವುದು ಕುತೂಹಲ ಮೂಡಿಸಿದೆ. ಏಷ್ಯಾ ಕಪ್‌ನಲ್ಲಿ ಭಾರತ ಹಿನ್ನಡೆ ಅನುಭವಿಸಿರುವ ಕಾರಣದಿಮದಾಗಿ ಆಯ್ಕೆ ಸಮಿತಿಯ ಮುಂದಿನ ನಿರ್ಧಾರಗಳು ಅತ್ಯಂತ ಮಹತ್ವ ಪಡೆದುಕೊಳ್ಳಲಿದೆ ಎಂಬುದು ನಿಜ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications