ಟಿ20 ವಿಶ್ವಕಪ್‌ನಲ್ಲಿ ಮಿಂಚಬಲ್ಲ 5 ಬ್ಯಾಟರ್‌ಗಳು ಇವರು: ಭವಿಷ್ಯ ನುಡಿದ ನ್ಯೂಜಿಲೆಂಡ್ ದಿಗ್ಗಜ

ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯಗಳು ಈಗಾಗಲೇ ನಡೆಯುತ್ತಿದ್ದು ಪ್ರಮುಖ ಘಟ್ಟವಾದ ಅರ್ಹತಾ ಸುತ್ತಿನ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಭ್ಯಾಸ ಪಂದ್ಯಗಳು ಈಗಾಗಲೇ ನಡೆಯುತ್ತಿದ್ದು ಮುಖ್ಯ ಹಂತದ ಪಂದ್ಯಗಳು ಶನಿವಾರದಿಂದ ಆರಂಭವಾಗಲಿದೆ. ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದ್ದು ಕುತೂಹಲ ಮೂಡಿಸಿದೆ.
ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡದ ದಿಗ್ಗಜ ಆಟಗಾರ ಮಾಜಿ ಕ್ರಿಕೆಟಿಗ ರಾಸ್ ಟೇಲರ್ ಪ್ರತಿಕ್ರಿಯೆ ನೀಡಿದ್ದು ವಿಶ್ವಕಪ್ ವಿಚಾರವಾಗಿ ಕುತೂಹಲಕಾರಿ ಭವಿಷ್ಯ ನುಡಿದಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಮಿಂಚುಹರಿಸಲಿರುವ ಯುವ ಆಟಗಾರರನ್ನು ರಾಸ್ ಟೇಲರ್ ಹೆಸರಿಸಿದ್ದಾರೆ. ರಾಸ್ ಟೇಲರ್ ಹೆರಿಸಿರುವ ಐವರು ಕ್ರಿಕೆಟಿಗರ ಪೈಕಿ ಓರ್ವ ಭಾರತೀಯ ಆಟಗಾರ ಕೂಡ ಇದ್ದಾರೆ.

ಟೀಮ್ ಇಂಡಿಯಾ ದಾಂಡಿಗ ಸೂರ್ಯಕುಮಾರ್ ಯಾದವ್
ರಾಸ್ ಟೇಲರ್ ಹೆಸರಿಸಿರುವ ಮೊದಲ ಆಟಗಾರ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಪ್ರಮುಖ ಅಸ್ತ್ರ ಸೂರ್ಯಕುಮಾರ್ ಯಾದವ್. ಚುಟುಕು ಮಾದರಿಯಲ್ಲಿ ಸ್ಥಿರವಾಘಿ ಅದ್ಭುತ ಪ್ರದರ್ಶನ ನಿಡಿಕೊಂಡು ಬಂದಿರುವ ಸೂರ್ಯಕುಮಾರ್ ಯಾದವ್ ಚುಟುಕು ಮಾದರಿಯಲ್ಲಿ ನಂಬರ್ 2 ಆಟಗಾರ ಎನಿಸಿಕೊಂಡಿದ್ದಾರೆ. ಕೆಎಲ್ ರಾಹುಲ್ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬಳಿಕ ಬ್ಯಾಟಿಂಗ್‌ಗೆ ಇಳಿಯುವ ಸೂರ್ಯ ಕ್ರಮಾಂಕದಲ್ಲಿ ಅಮೋಘ ಪ್ರದರ್ಶನ ನೀಡಿ ಮಿಂಚುತ್ತಿದ್ದಾರೆ. ಈ ಫಾರ್ಮ್‌ಅನ್ನು ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್‌ನಲ್ಲಿಯೂ ಮುಂದುವರಿಸುವ ವಿಶ್ವಾಸ ಮೂಡಿಸಿದ್ದಾರೆ ಸೂರ್ಯಕುಮಾರ್ ಯಾದವ್.

ಪಾಕಿಸ್ತಾನ ಬ್ಯಾಟರ್ ಹೈದರ್ ಅಲಿ
ಪಾಕಿಸ್ತಾನ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಭರವಸೆ ಮೂಡಿಸಿರುವ ಆಟಗಾರ ಹೈದರ್ ಅಲಿ. ತಮ್ಮ ಕ್ರಮಾಂಕದಲ್ಲಿ ಬದಲಾವಣೆಯಾಗುತ್ತಿದ್ದರೂ ಸಿಕ್ಕ ಅವಕಾಶದಲ್ಲಿ ಕೆಲ ಪರಿಣಾಮಕಾರಿ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ಭರವಸೆ ಮೂಡಿಸಿದ್ದಾರೆ. ಈ ಯುವ ಸ್ಪೋಟಕ ಆಟಗಾರನ ಮೇಲೆ ಕೂಡ ರಾಸ್ ಟೇಲರ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದು ವಿಶ್ವಕಪ್ ಟೂರ್ನಿಯಲ್ಲಿ ಮಿಂಚುವ ಆಟಗಾರ ಎಂದು ರಾಸ್ ಟೇಲರ್ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಆಸಿಸ್ ಸ್ಪೋಟಕ ಆಟಗಾರ ಟಿಮ್ ಡೇವಿಡ್
ಸಿಂಗಾಪೂರ್ ತಂಡದ ಪರವಾಗಿ ಆಡುತ್ತಿದ್ದ ಟಿಮ್ ಡೇವಿಡ್ ಈಗ ಆಸ್ಟ್ರೇಲಿಯಾ ತಂಡಕ್ಕೆ ಸೇರ್ಪಡೆಯಾಗುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಆರಂಭ ಪಡೆದುಕೊಂಡಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ಪರವಾಗಿ ಕೆಲ ಉತ್ತಮ ಇನ್ನಿಂಗ್ಸ್‌ಗಳನ್ನು ನೀಡಿರುವ ಟಿಮ್ ಡೇವಿಡ್ ವಿಶ್ವಕಪ್ ಟೂರ್ನಿಯಲ್ಲಿಯೂ ಭರ್ಜರಿ ಆಟವನ್ನು ಪ್ರದರ್ಶಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ನ್ಯೂಜಿಲೆಂಡ್‌ನ ದಿಗ್ಗಜ ಆಟಗಾರ ಟಿಮ್ ಡೇವಿಡ್.

ಇಂಗ್ಲೆಂಡ್ ಯುವ ಬ್ಯಾಟರ್ ಹ್ಯಾರಿ ಬ್ರೂಕ್
ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡ್ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿರುವ ಆಟಗಾರ ಹ್ಯಾರಿ ಬ್ರೂಕ್. ಚುಟುಕು ಮಾದರಿಯ ಕ್ರಿಕೆಟ್‌ಗೆ ಹೇಳಿ ಮಾಡಿಸಿದಂತಿರುವ ಹ್ಯಾರಿ ಬ್ರೂಕ್ ಇಂಗ್ಲೆಂಡ್ ಪರವಾಗಿ ವಿಶ್ವಕಪ್‌ನಲ್ಲಿ ಮಿಂಚುವ ವಿಶ್ವಾಸ ಮೂಡಿಸಿದ್ದಾರೆ. ರಾಸ್ ಟೇಲರ್ ಕೂಡ ಇದೇ ಅಂಶವನ್ನು ಉಲ್ಲೇಖಿಸಿದ್ದು ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಪರವಾಗಿ ಬ್ರೂಕ್ ನಿರ್ಣಾಯಕ ಪಾತ್ರವಹಿಸಲಿದ್ದಾರೆ ಎಂದಿದ್ದಾರೆ.

ಕಿವೀಸ್ ಬ್ಯಾಟರ್ ಫಿನ್ ಆಲೆನ್
ನ್ಯೂಜಿಲೆಂಡ್ ತಂಡದಲ್ಲಿರುವ ಕಿರಿಯ ಆಟಗಾರ ಫಿನ್ ಅಲೆನ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ವಿಶೇಷ ಬಲ ನೀಡಿರುವ ಆಟಗಾರ ಎನಿಸಿಕೊಂಡಿದ್ದಾರೆ. ಅಗ್ರ ಕ್ರಮಾಂಕದಲ್ಲಿ ಆಡುವ ಫಿನ್ ಅಲೆನ್ ಭರ್ಜರಿ ಭರ್ಜರಿ ಆಟವನ್ನು ಪ್ರದರ್ಶಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಾಗಿ ಈ ಬಾರಿಯ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡದ ಈ ಆಟಗಾರ ತಂಡದ ಪರವಾಗಿ ಮಿಂಚುವ ಯುವ ಆಟಗಾರ ಎಂದು ವಿಶೇಷ ಭರವಸೆ ವ್ಯಕ್ತಪಡಿಸಿದ್ದಾರೆ ನ್ಯೂಜಿಲೆಂಡ್‌ನ ದಿಗ್ಗಜ ಆಟಗಾರ ರಾಸ್ ಟೇಲರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications