ಟಿ20 ವಿಶ್ವಕಪ್: ಮ್ಯಾಚ್ ವಿನ್ನರ್‌ಗಳಿಂದಲೇ ತುಂಬಿಕೊಂಡಿದೆ ಈ ತಂಡ: ಸ್ಯಾಮ್ಯುಯೆಲ್ ಬದ್ರಿ

ಟಿ20 ವಿಶ್ವಕಪ್‌ನ ಸೂಪರ್ 12 ಹಂತದ ಪಂದ್ಯಗಳು ಶನಿವಾರ ಆರಂಭವಾಗಲಿದೆ. ಈಗಾಗಲೇ ಅರ್ಹತಾ ಸುತ್ತಿನ ಬಹುತೇಕ ಮುಕ್ತಾಯವಾಗಿದ್ದು ಎರಡು ಪಂದ್ಯಗಳು ಮಾತ್ರವೇ ಬಾಕಿಯಿದೆ. ಇಂತಾ ಸಂದರ್ಭದಲ್ಲಿ ಟೂರ್ನಿಯ ಕುರಿತಾಗಿ ನಾನಾ ವಿಶ್ಲೇಷಣೆಗಳು ಲೆಕ್ಕಾಚಾರಗಳು ನಡೆಯುತ್ತಿದೆ. ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಸ್ಯಾಮ್ಯುಯೆಲ್ ಬದ್ರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಯಾಮ್ಯುಯೆಲ್ ಬದ್ರಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಕ್ರಿಕೆಟ್ ತಮಡದ ಬಗ್ಗೆ ಭಾರೀ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್‌ಗೆ ಮುನ್ನ ವೆಸ್ಟ್ ಇಂಡೀಸ್ ತಂಡ ಆಡಿದ ಎರಡು ಅಭ್ಯಾಸ ಪಂದ್ಯಗಳಲ್ಲಿಯೂ ಸೋಲು ಕಂಡಿದೆ. ಹಾಗಿದ್ದರೂ ಕಿರಾನ್ ಪೊಲಾರ್ಡ್ ನೇತೃತ್ವದ ತಂಡ ಸಾಕಷ್ಟು ಬಲಿಷ್ಠವಾಗಿದ್ದು ಚಾಂಪಿಯನ್ ಟ್ರೋಫಿಯನ್ನು ತನ್ನ ಬಳಿಯಲ್ಲೇ ಉಳಿಸಿಕೊಳ್ಳಲಿದೆ ಎಂದಿದ್ದಾರೆ.
ವೆಸ್ಟ್ ಇಂಡೀಸ್ ತಂಡ ಸಂಪೂರ್ಣವಾಗಿ ಮ್ಯಾಚ್ ವಿನ್ನರ್‌ಗಳಿಂದ ತುಂಬಿಕೊಂಡಿದೆ. ತಂಡದಲ್ಲಿರುವ ಯಾವುದೇ ಆಟಗಾರ ಕೂಡ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಸ್ಯಾಮ್ಯುಯೆಲ್ ಬದ್ರಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ಸಾಕಷ್ಟು ಜನರು ವೆಸ್ಟ್ ಇಂಡೀಸ್ ತಂಡವನ್ನು ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎಂದು ಹೆಸರಿಸಿದ್ದಾರೆ. ಅದಕ್ಕೆ ಕಾರಣ ವೆಸ್ಟ್ ಇಂಡೀಸ್ ತಂಡ ಹೊಂದಿರುವ ಲೈನ್‌ಅಪ್. ಯಾವುದೇ ಆಟಗಾರ ಕೂಡ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಬಲ್ಲವರಾಗಿದ್ದಾರೆ. ಕ್ರಿಸ್ ಗೇಲ್, ಕಿರಾನ್ ಪೊಲಾರ್ಡ್ ಹಾಗೂ ಡ್ವೇಯ್ನ್ ಬ್ರಾವೋ ಅವರಂತಾ ಆಟಗಾರರ ಅನುಭವ ತಂಡಕ್ಕೆ ಹೆಚ್ಚು ಶಕ್ತಿಯನ್ನು ನೀಡಲಿದೆ. ಒತ್ತಡದ ಸಂದರ್ಭದಲ್ಲಿ ಅದ್ಭುತ ಪ್ರದರ್ಶನ ನಿಡುವ ಸಾಮರ್ಥ್ಯ ಈ ಆಟಗಾರರಲ್ಲಿದೆ" ಎಂದು ಸ್ಯಾಮ್ಯುಯೆಲ್ ಬದ್ರಿ 'ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್'ಗೆ ಬರೆದ ಅಂಕಣದಲ್ಲಿ ವಿವರಿಸಿದ್ದಾರೆ.
ಹಾಲಿ ಚಾಂಪಿಯನ್ ತಂಡವಾಗಿರುವ ವೆಸ್ಟ್ ಇಂಡೀಸ್ ಶನಿವಾರ ಇಂಗ್ಲೆಂಡ್ ತಂಡದ ವಿರುದ್ಧ ಸೆಣೆಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. "2021 ಟಿ20 ವಿಶ್ವಕಪ್‌ನ ಇಂಗ್ಲೆಂಡ್ ವಿರುದ್ಧ ನಡೆಯುವ ಮೊದಲ ಪಂದ್ಯಕ್ಕೆ ವೆಸ್ಟ್ ಇಂಡೀಸ್ ತಂಡ ಬಹಳ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತದೆ. ಈ ಕದನ ಸಾಕಷ್ಟು ಕುತೂಹಲಕಾರಿಯಾಗಿರಲಿದೆ. ವೆಸ್ಟ್ ಇಂಡೀಸ್ ಹಾಳಿ ಚಾಂಪಿಯನ್ ತಂಡವಾಗಿದ್ದು 2016ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧವೇ ಅಮೋಘವಾದ ಗೆಲುವು ಸಾಧಿಸಿತ್ತು. ಅದಕ್ಕೂ ಮೊದಲು ಸೂಪರ್ 10ರ ಮೊದಲ ಪಮದ್ಯದಲ್ಲಿಯೂ ವೆಸ್ಟ್ ಇಂಡೀಸ್ ಇಂಗ್ಲೆಂಡ್‌ಗೆ ಸೋಲುಣಿಸಿತ್ತು. ವಿಶ್ವಕಪ್ ಸೆಣೆಸಾಟಕ್ಕೆ ಬಂದಾಗ ವೆಸ್ಟ್ ಇಂಡೀಸ್ ತಂಡ ಯಾವಾಗಲೂ ಮೇಲುಗೈ ಹೊಂದಿರುತ್ತದೆ" ಎಂದಿದ್ದಾರೆ ಸ್ಯಾಮ್ಯುಯೆಲ್ ಬದ್ರಿ.
ಈ ಬಾರಿಯ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವನ್ನು ಕಿರಾನ್ ಪೊಲಾರ್ಡ್ ಮುನ್ನಡೆಸುತ್ತಿದ್ದು ಕ್ರಿಸ್ ಗೇಲ್, ನಿಕೋಲಸ್ ಪೂರನ್, ಡ್ವೇಯ್ನ್ ಬ್ರಾವೋ, ಆಂಡ್ರೆ ರಸೆಲ್, ಶಿಮ್ರಾನ್ ಹೆಟ್ಲೇಯರ್ ಅವರಂತಾ ಸ್ಪೋಟಕ ಆಟಗಾರರನ್ನು ಒಳಗೊಂಡಿದೆ. ಹೀಗಾಗಿ ಹಾಲಿ ಚಾಂಪಿಯನ್ ತಂಡ ವಿಶ್ವಕಪ್ ವೇದಿಕೆಯಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ವೆಸ್ಟ್ ಇಂಡಿಸ್ ಸಂಪೂರ್ಣ ಸ್ಕ್ವಾಡ್ ಹೀಗಿದೆ; ಕೀರನ್ ಪೊಲಾರ್ಡ್ (ಕ್ಯಾಪ್ಟನ್), ನಿಕೋಲಸ್ ಪೂರನ್ (ವೈಸ್ ಕ್ಯಾಪ್ಟನ್), ಡ್ವೇನ್ ಬ್ರಾವೊ, ರೋಸ್ಟನ್ ಚೇಸ್, ಆಂಡ್ರೆ ಫ್ಲೆಚರ್, ಕ್ರಿಸ್ ಗೇಲ್, ಶಿಮ್ರಾನ್ ಹೆಟ್ಮೀರ್, ಎವಿನ್ ಲೂಯಿಸ್, ಓಬೇಡ್ ಮೆಕಾಯ್, ಲೆಂಡಲ್ ಸಿಮನ್ಸ್, ರವಿ ರಾಂಪಾಲ್, ಆಂಡ್ರೆ ರಸೆಲ್, ಓಶನ್ ಥಾಮಸ್, ಹೇಡನ್ ವಾಲ್ಷ್ ಜೂನಿಯರ್, ಅಕೆಲ್ ಹೊಸೈನ್
ಮೀಸಲು ಆಟಗಾರರು: ಡ್ಯಾರೆನ್ ಬ್ರಾವೊ, ಶೆಲ್ಡನ್ ಕಾಟ್ರೆಲ್, ಜೇಸನ್ ಹೋಲ್ಡರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications