ಆ ಇಬ್ಬರ ಕೈಯಲ್ಲಿ ಭಾರತದ ಟಿ20 ವಿಶ್ವಕಪ್ ಭವಿಷ್ಯ ಎಂದ ಸಂಜಯ್ ಬಂಗಾರ್

ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಮೊದಲ ಪಂದ್ಯವನ್ನಾಡಲು ಸಜ್ಜಾಗಿದೆ. ಈಗಾಗಲೇ ಮೊದಲ ಅಭ್ಯಾಸ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ಎರಡನೇ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹೀಗಾಗಿ ಇನ್ನು ಮುಂದಿನ ನೇರವಾಗಿ ಮುಂದಿನ ಭಾನುವಾರ ಪಾಕಿಸ್ತಾನದ ವಿರುದ್ಧ ನಡೆಯಲಿರುವ ಸೂಪರ್ 12 ಹಂತದ ಪಂದ್ಯವನ್ನು ಭಾರತ ತಂಡ ಆಡಲಿದೆ.
ಇನ್ನು ಈ ವಿಶ್ವಕಪ್‌ನಲ್ಲಿ ಭಾಗವಹಿಸುವುದಕ್ಕೂ ಮುನ್ನ ಟೀಮ್ ಇಂಡಿಯಾ ತವರಿನಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಭಾಗವಹಿಸಿತ್ತು. ಈ ಎರಡು ಸರಣಿಯಲ್ಲಿಯೂ ಭಾರತ ಭರ್ಹರಿ ಗೆಲುವು ಸಾಧಿಸಿದ್ದು ವಿಶ್ವಕಪ್‌ಗೆ ಭರ್ಜರಿ ಸಿದ್ಧತೆ ನಡೆಸಿದೆ. ಆದರೆ ಈ ಬಾರಿಯ ವಿಶ್ವಕಪ್‌ನಲ್ಲಿ ಭಾಗವಹಿಸಿರುವ ಭಾರತ ತಂಡದ ಬಹುತೇಕ ಆಟಗಾರರು ಈ ಮುನ್ನ ಆಸ್ಟ್ರೇಲಿಯಾ ನೆಲದಲ್ಲಿ ಆಡಿದ ಅನುಭವ ಹೊಂದಿಲ್ಲ. ಆದರೆ ಆಸ್ಟ್ರೇಲಿಯಾ ವಿರುದ್ಧ ನಡೆದ ಅಬ್ಯಾಸ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡ ಮಿಂಚಿದೆ.
ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಟೀಮ್ ಇಂಡಿಯಾ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡದ ಭವಿಷ್ಯವನ್ನು ಈ ಇಬ್ಬರು ಆಟಗಾರರು ನಿರ್ಧರಿಸಲಿದ್ದಾರೆ ಎಂದಿದ್ದಾರೆ ಸಂಜಯ್ ಬಂಗಾರ್. ಹಾಗಾದರೆ ಆ ಆಟಗಾರರು ಯಾರು? ಮುಂದೆ ಓದಿ..

ಕನ್ನಡಿಗನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಸಂಜಯ್ ಬಂಗಾರ್
ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಆರಂಭಿಕ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಬಗ್ಗೆ ಭಾರೀ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. "ಕೆಎಲ್ ರಾಹುಲ್ ಅವರ ಇತ್ತೀಚಿನ ಪ್ರದರ್ಶನ ಅದ್ಭುತವಾಗಿದೆ. ಈ ಪ್ರವಾಸದಲ್ಲಿ ಅವರು ಒಂದಾದ ಬಳಿಕ ಮತ್ತೊಂದರಂತೆ ಅರ್ಧ ಶತಕ ಬಾರಿಸಿದ್ದಾರೆ. ಅದರಲ್ಲೂ ಉತ್ತಮ ಸಂಗತಿಯೆಂದರೆ ಅವರ ಬ್ಯಾಟ್‌ನಿಂದ ರನ್‌ಗಳುಅ ತ್ಯಂತ ಸರಾಗವಾಗಿ ಹರಿದುಬರುತ್ತಿದೆ" ಎಂದಿದ್ದಾರೆ ಸಂಜಯ್ ಬಂಗಾರ್.

ರಾಹುಲ್, ಸೂರ್ಯಕುಮಾರ್ ಪ್ರದರ್ಶನ ಭಾರತ ತಂಡಕ್ಕೆ ನಿರ್ಣಾಯಕ
ಈ ಬಾರಿಯ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಇಬ್ಬರು ಬ್ಯಾಟರ್‌ಗಳ ಪ್ರದರ್ಶನ ಬಹಳಷ್ಟು ನಿರ್ಣಾಯ ಪಾತ್ರವಹಿಸಲಿದೆ ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ. ಅದು ಬೇರೆ ಯಾರೂ ಅಲ್ಲ ಆರಂಭಿಕ ಆಟಗಾರ ಕೆಎಲ್ ರಾಹುಲ್ ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ಸೂರ್ಯಕುಮಾರ್ ಯಾದವ್. ಈ ಇಬ್ಬರು ಆಟಗಾರರು ಕೂಡ ಅಮೋಘ ಫಾರ್ಮ್‌ನಲ್ಲಿರುವ ಕಾರಣ ಭಾರತ ತಂಡ ಇವರಿಬ್ಬರ ಮೇಲೆ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದೆ ಎಂದಿದ್ದಾರೆ ಸಂಜಯ್ ಬಂಗಾರ್. ಈ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ಫಾರ್ಮ್ ಬಗ್ಗೆಯೂ ವಿಶೇಷ ಮಾತುಗಳನ್ನಾಡಿದ್ದಾರೆ.

ಮೊದಲ ಬಾರಿಗೆ ಸೂರ್ಯಕುಮಾರ್ ಯಾದವ್ ಆಸಿಸ್ ಪ್ರವಾಸ
ಸೂರ್ಯಕುಮಾರ್ ಯಾದವ್ ಬಗ್ಗೆ ಸಂಜಯ್ ಬಂಗಾರ್ ವಿಶ್ವಾಸದ ಮಾತುಗಳನ್ನಾಡಿದ್ದಾರೆ. "ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾಗೆ ಮೊದಲ ಬಾರಿಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಆಸ್ಟ್ರೇಲಿಯಾಗೆ ಮೊದಲ ಬಾರಿಗೆ ಪ್ರವಾಸ ಕೈಗೊಳ್ಳುವ ಯಾವುದೇ ಆಟಗಾರನಿಗೂ ಅಲ್ಲಿನ ಪಿಚ್‌ನ ವೇಗ ಮತ್ತು ಬೌನ್ಸ್ ದೊಡ್ಡ ಸವಾಲಾಗಿರುತ್ತದೆ. ಆದರೆ ಸೂರ್ಯಕುಮಾರ್ ಯಾದವ್‌ಗೆ ಇದು ಸವಾಲಾಗಲಿದೆ ಎನಿಸುತ್ತಿಲ್ಲ. ಸ್ಪಿನ್ ಅಥವಾ ವೇಗದ ಬೌಲರ್‌ಗಳನ್ನು ಅವರು ಅದ್ಭುತವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ಭಾರತ ತಂಡಕ್ಕೆ ಅದ್ಭುತವಾದ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದು ಸೂರ್ಯಕುಮಾರ್ ಯಾದವ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಸಂಜಯ್ ಬಂಗಾರ್.

ಭಾನುವಾರ ನಡೆಯಲಿದೆ ಭಾರತ ಪಾಕ್ ಪಂದ್ಯ
ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈ ಪಂದ್ಯದ ಮೇಲೆ ಕ್ರಿಕೆಟ್ ಅಭಿಮಾನಿಗಳೆಲ್ಲರ ಚಿತ್ತವೂ ನೆಟ್ಟಿದ್ದು ಯಾವ ತಂಡ ಮೇಲುಗೂ ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ಕಳೆದ ವಿಶ್ವಕಪ್‌ನಿಂದೀಚೆಗೆ ಭಾರತದ ವಿರುದ್ಧ ಪಾಕಿಸ್ತಾನ ಮೇಲುಗೈ ಸಾಧಿಸಿಕೊಂಡು ಬರುತ್ತಿದ್ದು ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಮುನ್ನಡೆ ಸಾಧಿಸಲೇಬೇಕು ಎಂದು ಭಾರತ ಹಠ ತೊಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications