ಆ ಇಬ್ಬರ ಮೇಲೆ ಪಾಕಿಸ್ತಾನ ಅವಲಂಬಿತವಾಗಿರುವುದು ನಿಜ: ಒಪ್ಪಿಕೊಂಡ ಪಾಕ್ ಉಪ ನಾಯಕ

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿ ಹಿನ್ನಡೆ ಕಂಡಿರುವ ಪಾಕಿಸ್ತಾನ ತಂಡ ಮುಖಭಂಗಕ್ಕೆ ಒಳಗಾಗಿದೆ. ಈ ಹಿನ್ನಲೆಯಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಈ ಎರಡು ಸೋಲುಗಳು ಪಾಕಿಸ್ತಾನ ಸೆಮಿಫೈಲ್‌ಗೇರುವ ಸಾಧ್ಯತೆಯನ್ನು ಕ್ಷೀಣಿಸಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನ ತಂಡದ ಉಪ ನಾಯಕ ಶದಬ್ ಖಾನ್ ಪ್ರತಿಕ್ರಿಯೆ ನೀಡಿದ್ದು ತಂಡ ಎಡವಿದ್ದೆಲ್ಲಿ ಎಂಬುದನ್ನು ಹೇಳಿಕೊಂಡಿದ್ದಾರೆ.
ಈ ಬಾರಿಯ ವಿಶ್ವಕಪ್‌ನ ಆರಂಭಿಕ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ತಂಡದ ಆರಂಭಿಕರಿಬ್ಬರು ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲವಾದರು. ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಆಟಗಾರರು ತಂಡವನ್ನು ಗೆಲ್ಲಿಸುವಂಥಾ ಪ್ರದರ್ಶನ ನೀಡಲು ವಿಫಲವಾದರು. ಹೀಗಾಗಿ ತಂಡ ಇಬ್ಬರು ಆಟಗಾರರ ಮೇಲೆ ಹೆಚ್ಚು ಅವಲಂಬಿತವಾಗಿರುವುದು ನಿಜ ಎಂದಿದ್ದಾರೆ ಪಾಕಿಸ್ತಾನ ತಂಡದ ಉಪ ನಾಯಕ ಶದಬ್ ಖಾನ್.

ಬಾಬರ್ ರಿಜ್ವಾನ್ ಮೇಲೆ ಪಾಕ್ ಅವಲಂಬಿತವಾಗಿದೆ ಎಂದ ಶದಬ್
ಟಿ20 ವಿಶ್ವಕಪ್ ಸನಿಹದಲ್ಲಿದ್ದಾಗಲೇ ಪಾಕಿಸ್ತಾನದ ಪ್ರಮುಖ ಆಟಗಾರರಾದ ನಾಯಕ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ಇಬ್ಬರು ಕೂಡ ತಮ್ಮ ಲಯವನ್ನು ಕಳೆದುಕೊಂಡಿದ್ದರು. ಅದರಲ್ಲೂ ಮೊದಲ ಎರಡು ಪಂದ್ಯಗಳಲ್ಲಿ ಈ ಇಬ್ಬರು ಕೂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಇದಾದ ಬಳಿಕ ಇತರ ಆಟಗಾರರಿಂದ ಕೂಡ ನಿರೀಕ್ಷಿತ ಪ್ರದರ್ಶನ ಬಾರಲಿಲ್ಲ. ಹೀಗಾಗಿ ಪಾಕಿಸ್ತಾನ ತಂಡ ಸೋಲು ಅನುಭವಿಸುವಂತಾಯಿತು. ಈ ಹಿನ್ನಲೆಯಲ್ಲಿ ಶದಬ್ ಖಾನ್ ಮಾತನಾಡಿದ್ದು ಪಾಕ್ ನಾಯಕ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂಬುದನ್ನು ನಿಜ ಎಂದು ಹೇಳಿದ್ದಾರೆ.

ನೆದರ್ಲೆಂಡ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಶದಬ್ ಮಾತು
ಪಾಕಿಸ್ತಾನ ತಂಡ ಭಾನುವಾರ ನೆದರ್ಲೆಂಡ್ಸ್ ತಂಡದ ವಿರುದ್ಧ ಈ ಬಾರಿಯ ಟೂರ್ನಿಯ ಮೂರನೇ ಪಂದ್ಯದಲ್ಲ ಮುಖಾಮುಖಿಯಾಗಿದೆ. ಈ ಪಂದ್ಯದ ಆರಂಭಕ್ಕೂ ಮುನ್ನ ಶದಬ್ ಖಾನ್ ಮಾತನಾಡಿದ್ದು "ನೆದರ್ಲೆಂಡ್ಸ್ ವಿರುದ್ಧದ ಪಂದ್ಯ ನಮಗೆ ಅತ್ಯಂತ ನಿರ್ಣಾಯಕವಾಗಿದೆ. ಕಳೆದ ಎರಡು ಪಂದ್ಯಗಳಲ್ಲಿ ನಾವು ಉತ್ತಮ ರೀತಿಯಲ್ಲಿ ಪಂದ್ಯವನ್ನು ಮುಗಿಸಲು ಸಾಧ್ಯವಾಗಿರಲಿಲ್ಲ. ಈ ಪಂದ್ಯದಲ್ಲಿ ನಾವು ಉತ್ತಮವಾಗಿ ಪಂದ್ಯವನ್ನು ಮುಗಿಸಬೇಕಿದೆ. ವೃತ್ತಿಪರ ಆಟಗಾರರಾಗಿ ನಾವು ಪರಿಸ್ಥಿತಿಗೆ ಹೊಂದಾಣಿಕೆ ಮಾಡಿಕೊಳ್ಳಲೇಬೇಕಿದೆ" ಎಂದಿದ್ದಾರೆ ಶದಬ್ ಖಾನ್.

ನೆದರ್ಲೆಂಡ್ಸ್ ವಿರುದ್ಧದ ಪಂದ್ಯದ ಮೇಲೆ ಶದಬ್‌ಗೆ ವಿಶ್ವಾಸ
"ಅವರು ಹೋದಲ್ಲೆಲ್ಲಾ ಸಾಕಷ್ಟು ರನ್‌ಗಳನ್ನು ಗಳಿಸಿದ್ದಾರೆ. ನೆದರ್ಲ್ಯಾಂಡ್ಸ್ ವಿರುದ್ಧ ಕೂಡ ಅವರ ಬ್ಯಾಟ್‌ನಿಮದ ಉತ್ಮವಾಗಿ ರನ್ ಹರಿದು ಬರಲಿದೆ ಎಂಬ ಆಶಾಭಾವನೆಯಿದೆ. ತಂಡ ಅವರ ಮೇಲೆ ಸಾಖಷ್ಟು ಅವಲಂಬಿತವಾಗಿದೆ. ಇತ್ತೀಚಿನ ದಿನಗಳಲ್ಲಿ ವಿಕೆಟ್‌ಗೆ ಗುರಿಯಾಗಿರಿಸಿ ಬೌಲಿಂಗ್ ಮಾಡುವ ಮೂಲಕ ಬ್ಯಾಟರ್‌ಗಳಿಗೆ ಅವಕಾಶ ನೀದಂತೆ ಮಾಡುವುದು ಯೋಜನೆಯಾಗಿದೆ. ಇಲ್ಲಿ ಹಾರ್ಡ್ ಲೆಂತ್‌ನಲ್ಲಿ ಬೌಲಿಂಗ್ ನಡೆಸುವುದು ಬಹಳ ಕಠಿಣವಾಗಿದೆ" ಎಂದು ಶದಬ್ ಖಾನ್ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಇತ್ತಂಡಗಳ ಸ್ಕ್ವಾಡ್ ಹೀಗಿದೆ
ಪಾಕಿಸ್ತಾನ ಸಂಭಾವ್ಯ ಆಡುವ ಬಳಗ: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಹೈದರ್ ಅಲಿ, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೇನ್
ನೆದರ್ಲೆಂಡ್ಸ್ ಸಂಭಾವ್ಯ ಆಡುವ ಬಳಗ: ಸ್ಟೀಫನ್ ಮೈಬರ್ಗ್, ಮ್ಯಾಕ್ಸ್ ಓಡೌಡ್, ಬಾಸ್ ಡಿ ಲೀಡ್, ಕಾಲಿನ್ ಅಕರ್ಮನ್, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್ಸ್ (ನಾಯಕ & ವಿಕೆಟ್ ಕೀಪರ್), ಟಿಮ್ ಪ್ರಿಂಗಲ್, ಲೋಗನ್ ವ್ಯಾನ್ ಬೀಕ್, ಶರೀಜ್ ಅಹ್ಮದ್, ಫ್ರೆಡ್ ಕ್ಲಾಸೆನ್, ಪಾಲ್ ವ್ಯಾನ್ ಮೀಕೆರೆನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications