T20 World Cup: ಜಿಂಬಾಬ್ವೆ ವಿರುದ್ಧ ವಿಂಡೀಸ್‌ಗೆ 107 ರನ್ ಭರ್ಜರಿ ಜಯ
ಮುಂಬೈ: ಭರವಸೆಯ ಬ್ಯಾಟರ್ ಶಿಮ್ರೋನ್ ಹೆಟ್ಮೆಯರ್ ಬಾರಿಸಿದ ಭರ್ಜರಿ ಅರ್ಧಶತಕ ಹಾಗೂ ಗುಡಕೇಶ್ ಮೋತಿ ಅವರ ಬಿಗುವಿನ ದಾಳಿಯ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಸೂಪರ್ 8 ಹಂತದ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 107 ರನ್‌ಗಳಿಂದ ಮಣಿಸಿ ಅಬ್ಬರಿಸಿದೆ. ಅಲ್ಲದೆ ಸೂಪರ್ 8ನ ಎ ಗುಂಪಿನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ವಿಂಡೀಸ್ ತಂಡದ ಆರಂಭ ಕಳಪೆಯಾಗಿತ್ತು. ವೆಸ್ಟ್ ಇಂಡೀಸ್ 5.4 ಓವರ್‌ಗಳಲ್ಲಿ 54 ರನ್ ಸೇರಿಸಿ 2 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ತಂಡಕ್ಕೆ ಆಧಾರವಾದರು ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ ಶ್ರಿಮೋನ್ ಹೆಟ್ಮೆಯರ್ ಹಾಗೂ ರೋವನ್ ಪಾವೆಲ್. ಈ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಸರೆಯಾಯಿತು. ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕಲು ಜಿಂಬಾಬ್ವೆ ಬೌಲರ್‌ಗಳು ವಿಫಲರಾದರು.

3ನೇ ವಿಕೆಟ್‌ಗೆ ಭರ್ಜರಿ ಜೊತೆಯಾಟ
ಮೂರನೇ ವಿಕೆಟ್‌ಗೆ ಶ್ರಿಮೋನ್ ಹೆಟ್ಮೆಯರ್ ಹಾಗೂ ರೋವನ್ ಪಾವೆಲ್ ಜೋಡಿ 52 ಎಸೆತಗಳಲ್ಲಿ 122 ರನ್ ಸೇರಿಸಿ ಆರ್ಭಟಿಸಿತು. ಈ ಹಂತದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಶಿಮ್ರೋನ್ ಪ್ರಸಕ್ತ ಟಿ20 ವಿಶ್ವಕಪ್‌ನ ಜಂಟಿ ವೇಗದ ಶತಕ ಬಾರಿಸಿದರು. ಇವರು ಕೇವಲ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇವರು 34 ಎಸೆತಗಳಲ್ಲಿ 7 ಬೌಂಡರಿ, 7 ಸಿಕ್ಸರ್ ಬಾರಿಸಿ ಸೇರಿದಂತೆ 85 ರನ್ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದ ಆಟಗಾರ ರೋವನ್ ಪಾವೆಲ್ 35 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 59 ರನ್ ಸಿಡಿಸಿದರು.
ಶೆರ್ಫೇನ್ ರುದರ್ಫೋರ್ಡ್ ತಂಡದ ಮೊತ್ತ ಹಿಗ್ಗಿಸಲು ಸಹಾಯಕಾರಿ ಆದರು. ಇವರು ಕೇವಲ 13 ಎಸೆತಗಳಲ್ಲಿ 3 ಬೌಂಡರಿ ಸೇರಿದಂತೆ 21 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ವಿಂಡೀಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 254 ರನ್ ಕಲೆ ಹಾಕಿತು.
ರನ್ ಕಲೆ ಹಾಕಲು ಬ್ಯಾಟರ್‌ಗಳ ಪರದಾಟ
ಸವಾಲಿನ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ ತಂಡದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ತಡಿವಾನಾಶೆ ಮರುಮಣಿ (14), ಡಿಯೋನ್ ಮೈಯರ್ಸ್ (28), ಸಿಕಂದರ್ ರಜಾ (27), ಟೋನಿ ಮುನ್ಯೊಂಗಾ (14) ಸೋಲಿನ ಅಂತರವನ್ನು ಕಡಿಮೆ ಮಾಡಲು ಶ್ರಮಿಸಿದರು. ಬ್ರಾಡ್ ಇವಾನ್ಸ್ 2 ಬೌಂಡರಿ, 5 ಸಿಕ್ಸರ್ ಸಹಾಯದಿಂದ 43 ರನ್ ಸಿಡಿಸಿ ಮಿಂಚಿದರು. ಅಂತಿಮವಾಗಿ ಜಿಂಬಾಬ್ವೆ 147 ರನ್‌ಗಳಿಗೆ ಆಲೌಟ್ ಆಯಿತು.
ವೆಸ್ಟ್ ಇಂಡೀಸ್ ತಂಡ ಪರ ಗುಡಕೇಶ್ ಮೋತಿ 28 ರನ್ ನೀಡಿ 4 ವಿಕೆಟ್ ಕಬಳಿಸಿದರು. ಅಕೇಲ್ ಹೊಸೈನ್ 28 ರನ್ ನೀಡಿ 3 ವಿಕೆಟ್ ಪಡೆದರು. ಭರ್ಜರಿ ಜಯದ ಮೂಲಕ ವಿಂಡೀಸ್ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications