T20 World Cup ಪಾಕಿಸ್ತಾನ ಸೆಮಿಫೈನಲ್ ಲೆಕ್ಕಾಚಾರ; ಎಷ್ಟು ರನ್, ಎಷ್ಟು ಓವರ್ ಒಳಗೆ ಗುರಿ ಮುಟ್ಟಬೇಕು? ಇಲ್ಲಿದೆ ಮಾಹಿತಿ
ಪಾಕಿಸ್ತಾನ ಆಸೆ ಫಲಿಸಿದೆ. ಇಂಗ್ಲೆಂಡ್ ನ್ಯೂಜಿಲೆಂಡ್ ತಂಡವನ್ನು ಮಣಿಸಿದೆ. ಈಗೇನ್ನಿದರೂ ಪಾಕಿಸ್ತಾನ ತನ್ನ ಸಾಮರ್ಥ್ಯವನ್ನು ತೋರಿಸಲು ಸಿದ್ಧವಾಗಿದೆ. ಶನಿವಾರ ಪಾಕಿಸ್ತಾನ ಟಿ20 ವಿಶ್ವಕಪ್ ಸೂಪರ್ 8 ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಈ ಪಂದ್ಯದ ಮೇಲೆ ಪಾಕ್ ಅಭಿಮಾನಿಗಳ ಕಣ್ಣು ನೆಟ್ಟಿದೆ. ಈಗಾಗಲೇ ಟೂರ್ನಿಯಿಂದ ಹೊರ ನಡೆದಿರುವ ಶ್ರೀಲಂಕಾಕ್ಕೆ ಇದು ಅನೌಪಚಾರಿಕ ಪಂದ್ಯವಾಗಿದೆ. ಇನ್ನು ಪಾಕಿಸ್ತಾನಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಆಗಿರಲಿದೆ. ಈ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿ ಸೆಮಿಫೈನಲ್ ಪ್ರವೇಶಿಸುವ ಆಸೆಯನ್ನು ಪಾಕಿಸ್ತಾನ ಹೊಂದಿದೆ.
ಶುಕ್ರವಾರ ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ 72 ರನ್ಗಳಿಂದ ಸೋಲುತ್ತಿದ್ದಂತೆ ಪಾಕಿಸ್ತಾನ ತಂಡ ಫುಲ್ ಆಕ್ಟಿವ್ ಆಗಿದೆ. ನ್ಯೂಜಿಲೆಂಡ್ಗಿಂತಲೂ ರನ್ ರೇಟ್ ಲೆಕ್ಕಾಚಾರದಲ್ಲಿ ತುಂಬ ಹಿಂದೆ ಇದ್ದರೂ ಸಹ ಪಾಕ್, ಸೂಪರ್ 8 ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸುವ ಕನಸು ಕಾಣುತ್ತಿದೆ. ಆದರೆ ಹಾದಿ ಮಾತ್ರ ಸುಗಮವಾಗಿಲ್ಲ. ಹಾಗಿದ್ದರೆ ಪಾಕ್ ತನ್ನ ರನ್ ರೇಟ್ ಸುಧಾರಿಸಿಕೊಳ್ಳಲು ಹೇಗೆ ಗೆಲ್ಲಬೇಕು ಎಂಬ ಬಗ್ಗೆ ವಿವರ ಇಲ್ಲಿದೆ.

ಪಾಕಿಸ್ತಾನ ಈಗಾಗಲೇ ಸೂಪರ್ 8 ಹಂತದಲ್ಲಿ 2 ಪಂದ್ಯಗಳನ್ನು ಆಡಿದೆ. ಫೆ.21 ರಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರಿಂದ ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗಿದೆ. ಇನ್ನು ಫೆ.24 ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 2 ವಿಕೆಟ್ಗಳಿಂದ ಸೋಲು ಕಂಡಿದೆ. ಸದ್ಯ ಪಾಕಿಸ್ತಾನ ಆಡಿರುವ ಎರಡು ಪಂದ್ಯಗಳಲ್ಲಿ 1 ಸೋಲು, 1 ಪಂದ್ಯ ರದ್ದಾಗಿದ್ದು, 1 ಅಂಕಗಳೊಂದಿಗೆ ಸೂಪರ್ 8 ಹಂತದ ಎರಡನೇ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಆಡಿರುವ ಮೂರು ಪಂದ್ಯಗಳನ್ನು ಗೆದ್ದಿದ್ದು ಸುಲಭವಾಗಿ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದೆ. ನ್ಯೂಜಿಲೆಂಡ್ 3 ಅಂಕಗಳೊಂದಿಗೆ ಸದ್ಯ ಎರಡನೇ ಸ್ಥಾನದಲ್ಲಿದೆ.
ಪಾಕಿಸ್ತಾನದ ರನ್ ರೇಟ್ ಹೇಗಿದೆ?
ಸೂಪರ್ 8 ಹಂತದಲ್ಲಿ ಪಾಕಿಸ್ತಾನ, ಶ್ರೀಲಂಕಾ ತಂಡವನ್ನು ಮಣಿಸಿದರೆ, ರನ್ ರೇಟ್ ಲೆಕ್ಕಾಚಾರ ಶುರುವಾಗುತ್ತದೆ. ಪಾಕಿಸ್ತಾನದ ರನ್ ರೇಟ್ ಈಗ -0.461 ಆಗಿದೆ. ತನ್ನ ಮೈನಸ್ ರನ್ ರೇಟ್ ಇಂಪ್ರೂ ಮಾಡಿಕೊಳ್ಳುವುದು ಪಾಕ್ಗೆ ಅನಿವಾರ್ಯವಾಗಿದೆ. ನ್ಯೂಜಿಲೆಂಡ್ ರನ್ ರೇಟ್ 1.390 ಆಗಿದೆ.
ಪಾಕ್ ಮೊದಲು ಬ್ಯಾಟ್ ಮಾಡಿದರೆ ಎಷ್ಟು ರನ್ ಗಳಿಂದ ಗೆಲ್ಲಬೇಕು?
ಪಾಕಿಸ್ತಾನ ಮೊದಲು ಬ್ಯಾಟ್ ಮಾಡಿ ಉತ್ತಮ ಮೊತ್ತವನ್ನು ಕಲೆ ಹಾಕಬೇಕಿದೆ. ಅಲ್ಲದೆ ಶ್ರೀಲಂಕಾ ವಿರುದ್ಧ 64 ರನ್ಗಳಿಂದ ಗೆದ್ದಾಗ ಮಾತ್ರ ಸೆಮಿಫೈನಲ್ ಆಸೆ ಫಲಿಸುತ್ತದೆ. ಉದಾಹರಣೆಗೆ ಪಾಕ್ ಮೊದಲು ಬ್ಯಾಟ್ ಮಾಡಿ 163 ರನ್ಗಳನ್ನು ಬಾರಿಸಿದಲ್ಲಿ, ಶ್ರೀಲಂಕಾ ತಂಡವನ್ನು 99 ರನ್ಗಳಿಗೆ ಕಟ್ಟಿ ಹಾಕುವ ಅನಿವಾರ್ಯತೆ ಇದೆ.
ಪಾಕ್ ಎರಡನೇ ಬಾರಿ ಬ್ಯಾಟ್ ಮಾಡಿದರೆ ಎಷ್ಟು ಓವರ್‌ನಲ್ಲಿ ಪಂದ್ಯ ಗೆಲ್ಲಬೇಕು?
ಶನಿವಾರ ನಡೆಯಲಿರುವ ಸೂಪರ್ 8 ಹಂತದ ಕೊನೆಯ ಪಂದ್ಯ ಪಾಕಿಸ್ತಾನಕ್ಕೆ ಕಬ್ಬಿಣದ ಕಡಲೆಯಂತೆ ಕಾಣುತ್ತಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಶ್ರೀಲಂಕಾ ನೀಡುವ ಯಾವುದೇ ಮೊತ್ತದ ಗುರಿಯನ್ನು 13.1 ಓವರ್ಗಳಲ್ಲಿ ಚೇಸ್ ಮಾಡಬೇಕಾಗುತ್ತದೆ. ಉದಾಹರಣೆಗೆ ಪಾಕ್, ಶ್ರೀಲಂಕಾ ತಂಡವನ್ನು 120 ರನ್ಗಳಿಗೆ ಕಟ್ಟಿ ಹಾಕಿದರೆ, ಈ ಮೊತ್ತವನ್ನು 13.1 ಓವರ್ಗಳಲ್ಲಿ ಚೇಸ್ ಮಾಡಬೇಕಾಗುತ್ತದೆ.
ಆತಿಥೇಯ ಶ್ರೀಲಂಕಾ ಈಗಾಗಲೇ ಸೂಪರ್ 8 ಹಂತದಲ್ಲಿ ಆಡಿದ ಎರಡೂ ಪಂದ್ಯಗಳನ್ನು ಸೋತಿದ್ದರಿಂದ ಶನಿವಾರ ನಡೆಯುವ ಪಂದ್ಯ ಅನೌಪಚಾರಿಕವಾಗಿದೆ. ಈ ಪಂದ್ಯದಲ್ಲಿ ಲಂಕಾ ಗೆದ್ದು ಟೂರ್ನಿಗೆ ಗುಡ್ ಬಾಯ್ ಹೇಳಲು ಪ್ಲ್ಯಾನ್ ಮಾಡಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications