T20 World Cup Super 8: ಪಾಕ್, ನ್ಯೂಜಿಲೆಂಡ್ ಹೋರಾಟ: ಸ್ಪಿನ್ ಬೌಲರ್‌ಗಳೇ ಆಕರ್ಷಣೆ
ಕೊಲಂಬೊ: ಟಿ20 ವಿಶ್ವಕಪ್‌ನ ಲೀಗ್ ಹಂತದ ಪಂದ್ಯಗಳು ಮುಗಿದಿವೆ. ಶನಿವಾರದಿಂದ ಸೂಪರ್ 8 ಹಂತದ ಫೈಟ್ ಆರಂಭವಾಗಲಿದೆ. ಸೂಪರ್ 8 ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಲು ಎರಡೂ ತಂಡಗಳು ಯೋಜನೆ ರೂಪಿಸಿಕೊಂಡಿವೆ. ಎರಡೂ ತಂಡದಲ್ಲೂ ಸ್ಟಾರ್ ಸ್ಪಿನ್ ಬೌಲರ್‌ಗಳ ದಂಡೇ ಇದ್ದು, ಪಂದ್ಯ ರೋಚಕತೆ ಹೆಚ್ಚಿಸಿದೆ.
ಪಾಕಿಸ್ತಾನ ಎ ಗುಂಪಿನ ಮೂಲಕ ಸೂಪರ್ 8 ಹಂತವನ್ನು ತಲುಪಿದೆ. ಲೀಗ್ ಹಂತದಲ್ಲಿ ಪಾಕ್ ಆಡಿದ 4 ಪಂದ್ಯಗಳಲ್ಲಿ 3 ಜಯ, 1 ಸೋಲು ಕಂಡಿದ್ದು 6 ಅಂಕಗಳನ್ನು ಕಲೆ ಹಾಕಿದ್ದು, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ನ್ಯೂಜಿಲೆಂಡ್ ಸಹ ಡಿ ಗುಂಪಿನಲ್ಲಿ ಆಡಿದ 4 ಪಂದ್ಯಗಳಲ್ಲಿ 3 ಜಯ ದಾಖಲಿಸಿದ್ದು, 6 ಅಂಕಗಳೊಂದೊಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಿಷ್ಠವಾಗಿವೆ. ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ಎರಡೂ ತಂಡಗಳು 49 ಬಾರಿ ಮುಖಾಮುಖಿಯಾಗಿದ್ದು, ಈ ವೇಳೆ ಕಿವಿಸ್ 23 ಹಾಗೂ ಪಾಕ್ 24 ಪಂದ್ಯಗಳನ್ನು ಗೆದ್ದಿದೆ. ಇನ್ನು ಟಿ20 ವಿಶ್ವಕಪ್‌ನಲ್ಲಿ ಎರಡೂ ತಂಡಗಳು 7 ಬಾರಿ ಮುಖಾಮುಖಿಯಾಗಿದ್ದು ನ್ಯೂಜಿಲೆಂಡ್ 2 ಪಂದ್ಯ ಗೆದ್ದರೆ, ಪಾಕ್ 5 ಪಂದ್ಯದಲ್ಲಿ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ಸ್ಪಿನ್ ಬೌಲಿಂಗ್‌ನ್ನು ಸಮರ್ಥವಾಗಿ ಎದುರಿಸುವ ತಂಡ ಗೆಲ್ಲುತ್ತದೆ. ಪಾಕ್ ತಂಡದಲ್ಲಿ ನಾಲ್ವರು ಸ್ಪಿನ್ ಬೌಲರ್‌ಗಳು ಇದ್ದಾರೆ. ಉಸ್ಮಾನ್ ತಾರಿಕ್, ಅಬ್ರಾರ್ ಅಹ್ಮದ್, ಸಲ್ಮಾನ್ ಅಲಿ ಆಘಾ, ಸೈಮ್ ಆಯುಬ್ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲರು. ಕಿವೀಸ್ ತಂಡದಲ್ಲೂ ಸ್ಟಾರ್ ಸ್ಪಿನ್ ಬೌಲರ್‌ಗಳ ದಂಡೇ ಇದೆ. ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಸದ್ದು ಮಾಡಿರುವ ಮಿಚೆಲ್ ಸ್ಯಾಂಟ್ನರ್ ಹಾಗೂ ಇಶ್ ಸೋಧಿ ಪಾಕ್ ಬ್ಯಾಟರ್‌ಗಳ ರನ್ ದಾಹಕ್ಕೆ ಕಡಿವಾಣ ಹಾಕಬಲ್ಲರು.

ಹೇಗಿರಲಿದೆ ಪಾಕ್ ಪ್ಲೇಯಿಂಗ್ ಇಲೆವೆನ್?
ಸಾಹಿಬ್‌ಜಾದ ಫರ್ಹಾನ್, ಸೈಮ್ ಅಯೂಬ್, ಸಲ್ಮಾನ್ ಅಲಿ ಆಗಾ (ನಾಯಕ), ಬಾಬರ್ ಅಜಮ್, ಖವಾಜಾ ನಾಫೆ, ಶಾದಾಬ್ ಖಾನ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್/ಫಹೀಮ್ ಅಶ್ರಫ್, ಸಲ್ಮಾನ್ ಮಿರ್ಜಾ, ಉಸ್ಮಾನ್ ತಾರಿಕ್, ಅಬ್ರಾರ್ ಅಹ್ಮದ್.
ನ್ಯೂಜಿಲೆಂಡ್ ತಂಡದಲ್ಲಿ ಯಾರಿಗೆಲ್ಲಾ ಅವಕಾಶ ನೀಡಬಹುದು?
ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಫಿನ್ ಅಲೆನ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಡೇರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಜಿಮ್ಮಿ ನೀಶಮ್, ಮ್ಯಾಟ್ ಹೆನ್ರಿ, ಇಶ್ ಸೋಧಿ, ಜಾಕೋಬ್ ಡಫಿ.
ಪಿಚ್ ಯಾರಿಗೆ ಸಹಾಯ ನೀಡಲಿದೆ?
ಪ್ರೇಮದಾಸ ಕ್ರೀಡಾಂಗಣದ ಪಿಚ್ ಸ್ಪಿನ್ ಬೌಲಿಂಗ್‌ಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆಯಿದೆ. ಇಲ್ಲಿನ ಬೌಂಡರಿಗಳು ದೊಡ್ಡದಾಗಿರುವುದರಿಂದ ರನ್ ಬಾರಿಸುವುದು ಕಷ್ಟ. ಎರಡೂ ತಂಡಗಳಲ್ಲಿ ಸ್ಟಾರ್ ಸ್ಪಿನ್ ಬೌಲರ್‌ಗಳು ಇದ್ದು ಪಂದ್ಯ ರೋಚಕತೆ ಹೆಚ್ಚಿಸಿದೆ.
ಪಂದ್ಯವನ್ನು ನೋಡುವುದು ಎಲ್ಲಿ?
ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಣ ಸೂಪರ್ 8 ಹಂತದ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಅಲ್ಲದೆ ಈ ಪಂದ್ಯವನ್ನು ಆನ್‌ಲೈನ್‌ನಲ್ಲಿ ಜಿಯೋಹಾಟ್‌ಸ್ಟಾರ್‌ನಲ್ಲಿ ನೋಡಬಹುದಾಗಿದೆ.
ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯ ನಡೆಯುವುದು ಯಾವಾಗ?
ಸೂಪರ್ 8 ಹಂತದ ಪಂದ್ಯಗಳು 7 ಗಂಟೆಗೆ ನಡೆಯಲಿದ್ದು, ಟಾಸ್ ಪಂದ್ಯಕ್ಕೂ ಅರ್ಧಗಂಟೆ ಮುನ್ನ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications