ಸೂಪರ್ 8 ಮೊದಲ ಪಂದ್ಯಕ್ಕೆ ಮಳೆಯ ಕಾಟ; ನಡೆಯದ ಆಟ
ಟಿ20 ವಿಶ್ವಕಪ್ ಸೂಪರ್ 8 ಹಂತದ ಪಂದ್ಯಗಳು ಶನಿವಾರದಿಂದ ಆರಂಭವಾಗಿವೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಬೇಕಿತ್ತು. ಆದರೆ ಬಿಟ್ಟು ಬಿಡದೇ ಸುರಿದ ಮಳೆಯಿಂದಾಗಿ ಸೂಪರ್ 8 ಹಂತದ ಮೊದಲ ಪಂದ್ಯ ಮಳೆಗೆ ಆಹುತಿಯಾಗಿದ್ದು, ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ನೀಡಲಾಗಿದೆ.
ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಪಾಕಿಸ್ತಾನ ಆಡಿದ 4 ಪಂದ್ಯಗಳಲ್ಲಿ 3 ರಲ್ಲಿ ಜಯ ಸಾಧಿಸಿ, 1ರಲ್ಲಿ ಸೋಲು ಕಂಡಿದೆ. ಅಲ್ಲದೆ 6 ಅಂಕವನ್ನು ಕಲೆ ಹಾಕಿ ಸೂಪರ್ 8 ಹಂತಕ್ಕೆ ಈ ಗುಂಪಿನ ಎರಡನೇ ತಂಡವಾಗಿ ಅರ್ಹತೆ ಪಡೆದಿತ್ತು. ಇದಕ್ಕೂ ಮೊದಲು ಈ ಗುಂಪಿನ ಅಗ್ರ ತಂಡವಾಗಿ ಭಾರತ ಸೂಪರ್ 8 ಹಂತವನ್ನು ಪ್ರವೇಶಿಸಿತ್ತು. ಇನ್ನು ನ್ಯೂಜಿಲೆಂಡ್ ಡಿ ಗುಂಪಿನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ 3 ಜಯ ದಾಖಲಿಸಿ, 6 ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದು ಸೂಪರ್ 8 ಹಂತಕ್ಕೆ ಪ್ರವೇಶ ಪಡೆದಿತ್ತು.

ಉಭಯ ತಂಡಗಳಲ್ಲಿ ಸ್ಪಿನ್ ಬೌಲರ್‌ಗಳು ಇದ್ದು ಎಲ್ಲರ ಚಿತ್ತ ಈ ಪಂದ್ಯದ ಮೇಲೆ ನೆಟ್ಟಿತ್ತು. ಸೂಪರ್-8 ರಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಕೊಲಂಬೊದಲ್ಲಿ ಕಾದಾಟ ನಡೆಸಬೇಕಿತ್ತು. ಟಾಸ್ ಆಯಿತು. ಪಾಕಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನವನ್ನು ಮಾಡಿತು. ನಂತರ ಮಳೆಯಿಂದಾಗಿ ಪಂದ್ಯವನ್ನು ಒಂದು ಚೆಂಡು ಕೂಡ ಬೌಲ್ ಮಾಡದೆ ರದ್ದುಗೊಳಿಸಲಾಯಿತು.
ಮುಂದಿನ ಹಾದಿ
ಪಾಕಿಸ್ತಾನ ತನ್ನ ಮುಂದಿನ ಸೂಪರ್-8 ಪಂದ್ಯವನ್ನು ಫೆಬ್ರವರಿ 24 ರಂದು ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದ್ದು, ಫೆಬ್ರವರಿ 28 ರಂದು ಆತಿಥೇಯ ಶ್ರೀಲಂಕಾ ವಿರುದ್ಧ ಆಡಲಿದೆ. ಇನ್ನು ನ್ಯೂಜಿಲೆಂಡ್ ಫೆ.24 ರಂದು ಶ್ರೀಲಂಕಾ ವಿರುದ್ಧ, ಫೆ.27 ರಂದು ಇಂಗ್ಲೆಂಡ್ ವಿರುದ್ಧ ಆಡಲಿದೆ. ಈ ಎರಡೂ ತಂಡಗಳು ಸೆಮಿಫೈನಲ್ ಪ್ರವೇಶಿಸಬೇಕಾದಲ್ಲಿ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿವೆ. ಈ ಎರಡೂ ತಂಡಗಳಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾದರೆ ಆ ತಂಡದ ಸೆಮಿಫೈನಲ್ ಆಸೆ ಕಮರುತ್ತದೆ. ಹೀಗಾಗಿ ಎರಡೂ ತಂಡಗಳು ಸಹ ಮುಂದಿನ ಎರಡೂ ಪಂದ್ಯ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications