For Quick Alerts
ALLOW NOTIFICATIONS  
For Daily Alerts
 

T20 World Cup: ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ, ಆತಿಥೇಯ ತಂಡದಲ್ಲಿ ಬದಲಾವಣೆಯ ಗಾಳಿ

ಟಿ20 ವಿಶ್ವಕಪ್ನಲ್ಲಿ ಭಾರತ, ಜಿಂಬಾಬ್ವೆ ತಂಡಗಳು ಗುರುವಾರ ಸೂಪರ್ 8 ಹಂತದ ಪಂದ್ಯದಲ್ಲಿ ಅಂಗಳಕ್ಕೆ ಇಳಿಯಲಿವೆ. ಈ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‌ ಪ್ರವೇಶಿಸುವ ಹಾದಿಯನ್ನು ಹಸಿರಾಗಿರಿಸಿಕೊಳ್ಳುವ ಆಸೆಯನ್ನು ಭಾರತ ಹೊಂದಿದೆ. ಟೀಮ್ ಇಂಡಿಯಾ ಮಹತ್ವದ ಪಂದ್ಯದಲ್ಲಿ ಬದಲಾವಣೆಗಳೊಂದಿಗೆ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾ ಬಲಿಷ್ಠವಾಗಿದೆ.

ಜಿಂಬಾಬ್ವೆ ತಂಡ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾವನ್ನು ತವರಿನಲ್ಲಿ ಎದುರಿಸಲಿದೆ. ಇದಕ್ಕೂ ಮೊದಲು ಉಭಯ ತಂಡಗಳು ಮೆಲ್ಬೋರ್ನ್‌ನಲ್ಲಿ 2022ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದ್ದವು. ಈಗ ಎರಡನೇ ಬಾರಿಗೆ ಎರಡೂ ತಂಡಗಳು ಕಾದಾಟ ನಡೆಸಲಿವೆ. ಈ ಹಿಂದೆ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅಬ್ಬರಿಸಿದ್ದರು.

T20 World Cup

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಭಾರತ, ತನ್ನ ನೆಟ್‌ ರನ್‌ ರೇಟ್‌ ಸುಧಾರಿಸಿಕೊಳ್ಳುವ ಕನಸು ಕಾಣುತ್ತಿದೆ. ಈ ಪಂದ್ಯದಲ್ಲಿ ದೊಡ್ಡ ಅಂತರದಿಂದ ಗೆಲುವು ದಾಖಲಿಸಿ ಸೆಮಿಫೈನಲ್‌ಗೆ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಇರಾದೆಯನ್ನು ಹೊಂದಿದೆ. ಆದರೆ ಟೀಮ್ ಇಂಡಿಯಾದ ಟಾಪ್‌ ಆರ್ಡರ್ ಬ್ಯಾಟರ್‌ಗಳು ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್‌ 8 ಹಂತದ ಪಂದ್ಯದಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ.

ಅಭಿಷೇಕ್‌ ಶರ್ಮಾ ಮೇಲೆ ಒತ್ತಡ

ಟೀಮ್ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗುತ್ತಿದ್ದು, ಒತ್ತಡದಲ್ಲಿದ್ದಾರೆ. ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್‌ ಕಟ್ಟುವ ಕನಸು ಹೊಂದಿದ್ದಾರೆ. ಸೂಪರ್ 8 ಹಂತದ ಎರಡನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಆದರೆ ಇವರು ಯಾರ ಸ್ಥಾನದಲ್ಲಿ ಕಣಕ್ಕೆ ಇಳಿಯಲಿದ್ದಾರೆ ಎಂಬ ಪ್ರಶ್ನೆಗಳು ಎದ್ದಿವೆ. ಒಂದು ವೇಳೆ ಸಂಜು ಸ್ಯಾಮ್ಸನ್‌ ತಂಡದಲ್ಲಿ ಸ್ಥಾನ ಪಡೆದರೆ, ಇವರು ಓಪನರ್ ಆಗಿ ಕಾಣಿಸಿಕೊಳ್ಳಬಹುದು. ಇಶಾನ್‌ ಕಿಶನ್‌ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು.

T20 World Cup: ಭಾರತದ ಸೆಮಿಫೈನಲ್‌ ಆಸೆಗೆ ಚೆನ್ನೈ ಪಿಚ್‌ ನೆರವು ನೀಡುತ್ತದಾ? T20 World Cup: ಭಾರತದ ಸೆಮಿಫೈನಲ್‌ ಆಸೆಗೆ ಚೆನ್ನೈ ಪಿಚ್‌ ನೆರವು ನೀಡುತ್ತದಾ?

ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಜವಾಬ್ದಾರಿಯನ್ನು ಅರಿತು ಬ್ಯಾಟ್ ಮಾಡುತ್ತಿದ್ದಾರೆ. ಆದರೆ ದೊಡ್ಡ ಇನಿಂಗ್ಸ್‌ ಕಟ್ಟಬೇಕಿದೆ. ಅಂದಾಗ ಮಾತ್ರ ಭಾರತದ ಗೆಲುವಿನ ಆಸೆ ಫಲಿಸುತ್ತದೆ. ತಿಲಕ್ ವರ್ಮಾ ರನ್‌ ವೇಗಕ್ಕೆ ಚುರುಕು ಮುಟ್ಟಿಸುವ ಅನಿವಾರ್ಯತೆ ಇದೆ.

ಆಲ್‌ರೌಂಡರ್‌ ಮೇಲೆ ಕಣ್ಣು

ಟೀಮ್ ಇಂಡಿಯಾದ ಭರವಸೆಯ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ತಂಡದಲ್ಲಿ ಸ್ಥಾನ ಪಡೆಯಬಹುದು. ಇನ್ನು ಅಕ್ಷರ್ ಪಟೇಲ್‌ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಈ ಆಟಗಾರರು ತಮ್ಮ ಕ್ಷಮತೆಯನ್ನು ಅರಿತು ಬ್ಯಾಟ್ ಹಾಗೂ ಬೌಲಿಂಗ್ ಮಾಡಬೇಕಿದೆ.

T20 World Cup

ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗವನ್ನು ಯಾರ್ಕರ್ ಸ್ಪೇಷಲಿಸ್ಟ್‌ ಜಸ್ಪ್ರೀತ್ ಬುಮ್ರಾ ಮುನ್ನಡೆಸಲಿದ್ದಾರೆ. ಇವರಿಗೆ ಎಡಗೈ ವೇಗದ ಬೌಲರ್‌ ಅರ್ಶದೀಪ್ ಸಿಂಗ್ ಸಾಥ್ ನೀಡಲಿದ್ದಾರೆ. ಇನ್ನು ಚೆನ್ನೈ ಮೂಲದವರೇ ಆದ ವರುಣ್‌ ಚಕ್ರವರ್ತಿ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಿಚ್‌ ಸ್ಪಿನ್ ಬೌಲರ್‌ಗಳಿಗೆ ಅನುಕೂಲಕಾರಿಯಾಗಿದ್ದರೆ, ಕುಲ್‌ದೀಪ್‌ ಯಾದವ್‌ಗೂ ಚಾನ್ಸ್‌ ಸಿಗುವ ಸಾಧ್ಯತೆ ಇದೆ.

ICC T20 Rankings: ಬುಮ್ರಾ, ಶಿವಂ ದುಬೆ, ಇಶಾನ್‌ ಕಿಶನ್‌ಗೆ ಬಡ್ತಿಜಿಂಬಾಬ್ವೆ ತಂಡದಲ್ಲೂ ಭರವಸೆಯ ಆಟಗಾರರು ಇದ್ದಾರೆ. ಇವರು ಎದುರಾಳಿ ಆಟಗಾರರನ್ನು ಕಾಡಬಲ್ಲರು. ಜಿಂಬಾಬ್ವೆ ತಂಡದ ಪರ ಬ್ರಿಯಾನ್ ಬೆನೆಟ್ (180 ರನ್) ರನ್‌ ಕಲೆ ಹಾಕಿ ಭರವಸೆ ಮೂಡಿಸಿದ್ದಾರೆ. ಇನ್ನು ತಂಡದ ನಾಯಕ ಸಿಕಂದರ್ ರಾಜ್‌ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಆಧಾರವಾಗಬಲ್ಲರು.

Story first published: Wednesday, February 25, 2026, 19:37 [IST]
Other articles published on Feb 25, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+