For Quick Alerts
ALLOW NOTIFICATIONS  
For Daily Alerts
 

ಭಾರತ vs ಸ್ಕಾಟ್ಲೆಂಡ್: ಸೆಮಿಫೈನಲ್ ಹಾದಿ ಸುಲಭಗೊಳಿಸಲು ಭಾರತದ ಮತ್ತೊಂದು ಗೇಮ್‌ಪ್ಲಾನ್ ರೆಡಿ!

T20 world cup: Team India game plane ready for match against scotland

ಟಿ20 ವಿಶ್ವಕಪ್‌ನಲ್ಲಿ ಆರಂಭಿಕ ಎರಡು ಪಂದ್ಯಗಳನ್ನು ಸೋತಿರುವ ಟೀಮ್ ಇಂಡಿಯಾ ಅಫ್ಘಾನಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಆಡಿದ ಮೂರು ಪಂದ್ಯಗಳ ಪೈಕಿ ಟೀಮ್ ಇಂಡಿಯಾ ಸಾಧಿಸಿದ ಮೊದಲ ಗೆಲುವು ಇದಾಗಿದೆ. ಟೀಮ್ ಇಂಡಿಯಾ ಪಾಲಿಗೆ ಇನ್ನು ಎರಡು ಪಂದ್ಯಗಳು ಬಾಕಿಯಿದ್ದು ಈ ಎರಡು ಪಂದ್ಯಗಳನ್ನು ಕೂಡ ಭಾರತ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.

ಈ ಬಾರಿಯ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಸೋಲು ಕಂಡ ನಂತರ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿಯೂ ಭಾರತ 8 ವಿಕೆಟ್‌ಗಳ ಅಂತರದಿಂದ ಸೋಲು ಕಂಡ ನಂತರ ಭಾರತ ಸೆಮಿಫೈನಲ್‌ಗೇರುವ ಅವಕಾಶವನ್ನು ಬಹುತೇಕ ಕಳೆದುಕೊಂಡಂತಾಗಿದೆ. ಆದರೆ ಒಂದು ಸಣ್ಣ ಅವಕಾಶ ಇನ್ನು ಕೂಡ ಭಾರತೀಯ ತಂಡಕ್ಕಿದ್ದು ನ್ಯೂಜಿಲೆಂಡ್ ತಂಡದ ಒಂದು ಪಂದ್ಯದಲ್ಲಿ ಸೋತರೆ ಮಾತ್ರವೇ ಈ ಅವಕಾಶ ಭಾರತ ತಂಡಕ್ಕೆ ದೊರೆಯಲಿದೆ.

ಸ್ಕಾಟ್ಲೆಂಡ್ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾ ಸಿದ್ಧ

ಸ್ಕಾಟ್ಲೆಂಡ್ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾ ಸಿದ್ಧ

ಅಫ್ಘಾನಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ ಮತ್ತೊಂದು ಪಂದ್ಯಕ್ಕೆ ಸಜ್ಜಾಗುತ್ತಿದೆ. ಈ ಪಂದ್ಯದಲ್ಲಿ ಸ್ಲಾಟ್ಲೆಂಡ್ ಭಾರತ ತಂಡಕ್ಕೆ ಸವಾಲೊಡ್ಡುತ್ತಿದ್ದು ಶುಕ್ರವಾರವೇ ಈ ಪಂದ್ಯ ನಡೆಯಲಿದೆ. ಅಫ್ಘಾನಿಸ್ತಾನದ ವಿರುದ್ಧ ನೀಡಿದ ರೀತಿಯಲ್ಲೇ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ ವಿರಾಟ್ ಕೊಹ್ಲಿ ಪಡೆ. ಈ ಮೂಲಕ ಸೆಮಿಫೈನಲ್‌ಗೇರಲು ತನ್ನ ಎಲ್ಲಾ ಪ್ರಯತ್ನವನ್ನು ಕೂಡ ನಡೆಸಲಿದೆ ಟೀಮ್ ಇಂಡಿಯಾ.

ಸೆಮಿಫೈನಲ್‌ಗೇರಲು ಟೀಮ್ ಇಂಡಿಯಾ ಗೇಮ್‌ಪ್ಲಾನ್

ಸೆಮಿಫೈನಲ್‌ಗೇರಲು ಟೀಮ್ ಇಂಡಿಯಾ ಗೇಮ್‌ಪ್ಲಾನ್

ಟೀಮ್ ಇಂಡಿಯಾ ಸೆಮಿಫೈನಲ್ ಏರಬೇಕಾದರೆ ಮುಂದಿನ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರವೇ ಸಾಕಾಗುವುದಿಲ್ಲ. ಜೊತೆಗೆ ಉತ್ತಮ ರನ್‌ರೇಟ್ ಕೂಡ ಖಾತ್ರಿಪಡಿಸಬೇಕಿದೆ. ಹೀಗಾಗಿ ಟೀಮ್ ಇಂಡಿಯಾ ಭಿನ್ನ ರಣತಂತ್ರದೊಂದಿಗೆ ಕಣಕ್ಕಿಳಿಯಲಿದೆ. ಅಫ್ಘಾನಿಸ್ತಾನದ ವಿರುದ್ಧ ಈ ಗೇಮ್‌ಪ್ಲಾನ್ ಬಹುತೇಕ ಯಶಸ್ವಿಯಾಗಿದ್ದು ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಉಪಯೋಗಿಸಲು ಯೋಜನೆ ರೂಪಿಸಿದೆ ಟೀಮ್ ಇಂಡಿಯಾ

ನಿರ್ಭೀತ ಆಟಕ್ಕೆ ಒತ್ತು ನೀಡಲಿದೆ ಟೀಮ್ ಇಂಡಿಯಾ

ನಿರ್ಭೀತ ಆಟಕ್ಕೆ ಒತ್ತು ನೀಡಲಿದೆ ಟೀಮ್ ಇಂಡಿಯಾ

ಟೀಮ್ ಇಂಡಿಯಾ ಮುಂದಿನ ಎರಡು ಪಂದ್ಯಗಳಲ್ಲಿ ಗೆಲ್ಲುವುದು ಮಾತ್ರವಲ್ಲ ನೆಟ್ ರನ್‌ರೇಟ್‌ ಉತ್ತಮ ಪಡಿಸುವತ್ತ ಸಂಪೂರ್ಣ ಚಿತ್ತ ನೆಡಲಿದೆ. ಅದಕ್ಕಾಗಿ ಟೀಮ್ ಇಂಡಿಯಾ ನಿರ್ಭೀತ ಆಟಕ್ಕೆ ಮುಂದಾಗಲಿದೆ. ಅಫ್ಘಾನಿಸ್ತಾನದ ವಿರುದ್ಧವೂ ಈ ರಣತಂತ್ರದಲ್ಲಿ ಯಶಸ್ಸು ಸಾಧಿಸಿತ್ತು ಭಾರತ. ಆದರೆ ಗೆಲುವಿನ ಅಂತರವನ್ನು ಹೆಚ್ಚಿಸುವಲ್ಲಿ ಭಾರತ ವಿಫಲವಾಗಿತ್ತು. ಹೀಗಾಗಿ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಈ ನಿರ್ಭೀತ ಆಟವನ್ನು ಮುಂದುವರಿಸಲಿದೆ. ಈ ಬಗ್ಗೆ ಸ್ವತಃ ಉಪನಾಯಕ ರೋಹಿತ್ ಶರ್ಮಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಅಫ್ಘಾನಿಸ್ತಾನದ ವಿರುದ್ಧ ಇದರಲ್ಲಿ ಯಶಸ್ಸು ಸಾಧಿಸಿದ ಬಗ್ಗೆಯೂ ರೋಹಿತ್ ಹರ್ಷ ವ್ಯಕ್ತಪಡಿಸಿದ್ದಾರೆ. ಸ್ಕಾಟ್ಲೆಂಟ್ ತಂಡದ ವಿರುದ್ಧ ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವತ್ತ ಟೀಮ್ ಇಂಡಿಯಾ ಚಿತ್ತ ನೆಡಲಿದೆ.

ನ್ಯೂಜಿಲೆಂಡ್, ಅಫ್ಘಾನಿಸ್ತಾನ ಪಂದ್ಯದ ಮೇಲೆ ಭಾರತ ಕಣ್ಣು

ನ್ಯೂಜಿಲೆಂಡ್, ಅಫ್ಘಾನಿಸ್ತಾನ ಪಂದ್ಯದ ಮೇಲೆ ಭಾರತ ಕಣ್ಣು

ಟೀಮ್ ಇಂಡಿಯಾ ಸೆಮಿಫೈನಲ್‌ಗೇರುವ ಅವಕಾಶ ದೊರೆಯುವುದು ಸುಲಭವಿಲ್ಲ. ಅದಾಗಬೇಕಾದರೆ ನ್ಯೂಜಿಲೆಂಡ್ ಮುಂದಿನ ಎರಡು ಪಂದ್ಯಗಳ ಪೈಕಿ ಕನಿಷ್ಠ ಒಂದನ್ನು ಸೋಲಲೇಬೇಕಿದೆ. ಹಾಗಿದ್ದರೆ ಮಾತ್ರ ಭಾರತ ಸೆಮಿ ಫೈನಲ್‌ಗೇರುವ ಲೆಕ್ಕಾಚಾರಕ್ಕೆ ಬೆಲೆ ದೊರೆಯಲಿದೆ. ಅದರಲ್ಲಿ ನ್ಯೂಜಿಲೆಂಡ್ ಮೊದಲಿಗೆ ನಮೀಬಿಯಾ ತಂಡವನ್ನು ಎದುರಿಸಲಿದೆ. ನಮೀಬಿಯಾ ತಂಡ ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸುವುದು ಅಸಾಧ್ಯದ ಮಾತು. ಇದಕ್ಕಾಗಿ ಪವಾಡವೇ ನಡೆಯಬೇಕು. ಉಳಿದುರುವುದು ಅಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆದ್ದರೆ ಭಾರತ ತಂಡಕ್ಕೆ ಸೆಮಿಫೈನಲ್‌ಗೇರುವ ಅವಕಾಶ ದೊರೆಯಲಿದೆ. ಅದರಲ್ಲೂ ಅಫ್ಘಾನಿಸ್ತಾನ ಈಗಾಗಲೇ ನಾಲ್ಕು ಪಂದ್ಯಗಳಲ್ಲಿ 2 ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು ಸೆಮಿಫೈನಲ್‌ಗೇರುವ ಕನಸು ಕಾಣುತ್ತಿದೆ. ಅಫ್ಘಾನಿಸ್ತಾನದ ನೆಟ್‌ ರನ್ ರೇಟ್ ಸದ್ಯ ಭಾರತ ಹಾಗೂ ನ್ಯೂಜಿಲೆಂಡ್ ಎರಡು ತಂಡಗಳಿಗಿಂತಲೂ ಹೆಚ್ಚಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆಲುವು ಸಾಧಿಸಿದಲ್ಲಿ ಭಾರತದ ನೆಟ್‌ ರನ್‌ರೇಟ್‌ಗಿಂತ ಅಫ್ಘಾನಿಸ್ತಾನದ ನೆಟ್ ರನ್‌ರೇಟ್ ಹೆಚ್ಚಿದ್ದಲ್ಲಿ ಆಗ ಭಾರತದ ಸೆಮಿಫೈನಲ್ ಕನಸು ನನಸಾಗಲು ಸಾಧ್ಯವಿಲ್ಲ. ಹೀಗಾಗಿ ಭಾರತ ಪಾಲಿಗೆ ಸೆಮಿಫೈನಲ್ ಹಾದಿ ದುರ್ಗಮವಾಗಿದೆ. ಹೀಗಾಗಿ ಮುಂದಿನ ಎರಡು ಪಂದ್ಯಗಳಲ್ಲಿ ಭಾರತ ಸಾಧ್ಯವಾದಷ್ಟು ನೆಟ್‌ ರೇಟ್ ಹೆಚ್ಚು ಮಾಡಲೇಬೇಕಿದೆ.

Story first published: Thursday, November 4, 2021, 18:19 [IST]
Other articles published on Nov 4, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+