T20 World Cup: ಟೀಂ ಇಂಡಿಯಾ ಆಟಗಾರರ ಕೋಪಕ್ಕೆ ಕಾರಣವಾದ ವಿರುದ್ಧ ಐಸಿಸಿ, ಕ್ರಿಕೆಟ್ ಆಸ್ಟ್ರೇಲಿಯಾ ತಾರತಮ್ಯ

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನ ಅಭ್ಯಾಸ ಪಂದ್ಯಗಳನ್ನು ಆಡಲು ಬ್ರಿಸ್ಬೇನ್‌ಗೆ ತಲುಪಿದೆ. ಪರ್ತ್‌ನಲ್ಲಿ ಅಭ್ಯಾಸ ಪಂದ್ಯಗಳನ್ನು ಮುಗಿಸಿದ ಭಾರತ ತಂಡ ಶನಿವಾರ ಬ್ರೀಸ್ಬೇನ್‌ಗೆ ಆಗಮಿಸಿದೆ. ಅಕ್ಟೋಬರ್ 17 ರಂದು ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಗಬ್ಬಾದಲ್ಲಿ ಮೊದಲನೇ ಅಭ್ಯಾಸ ಪಂದ್ಯವನ್ನು ಆಡಲಿದೆ.
ಆದರೆ, ಬ್ರಿಸ್ಬೇನ್‌ನಲ್ಲಿ ಸರಿಯಾದ ಸೌಲಭ್ಯಗಳನ್ನು ಒದಗಿಸಿಲ್ಲ ಎಂದು ಟೀಂ ಇಂಡಿಯಾ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಐಸಿಸಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಭಾರತದ ಆಟಗಾರರನ್ನು ಕಡೆಗಣಿಸಿದರಾ ಎನ್ನುವ ಪ್ರಶ್ನೆ ಮೂಡಿದೆ.
ಬ್ರಿಸ್ಬೇನ್‌ನಲ್ಲಿ ಟೀಂ ಇಂಡಿಯಾಕ್ಕೆ 4-ಸ್ಟಾರ್ ಹೋಟೆಲ್‌ನಲ್ಲಿ ವಸತಿ ಕಲ್ಪಿಸಲಾಗಿದ್ದು, ಟೀಂ ಇಂಡಿಯಾದ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ, ಇದೇ ನಗರದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಮಾತ್ರ ಪಂಚತಾರ ಹೋಟೆಲ್‌ನಲ್ಲಿ ವಸತಿ ಸೌಕರ್ಯ ನೀಡಲಾಗಿದೆ. ಐಸಿಸಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದ ಈ ತಾರತಮ್ಯದ ನೀತಿಗೆ ರೋಹಿತ್ ಶರ್ಮಾ ಮತ್ತು ತಂಡ ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲಾ ತಂಡಗಳನ್ನು ಸಮಾನವಾಗಿ ಕಾಣಬೇಕು, ಎಲ್ಲಾ ತಂಡಗಳನ್ನು ಒಂದೇ ರೀತಿ ಗೌರವಿಸಬೇಕು. ಆದರೆ, ಕ್ರಿಕೆಟ್ ಆಸ್ಟ್ರೇಲಿಯಾ ಈ ವಿಚಾರದಲ್ಲಿ ಎಡವಿದೆ.

ಆಸ್ಟ್ರೇಲಿಯಾ ಇರುವ ಹೋಟೆಲ್‌ನಲ್ಲಿ ಪಾಕಿಸ್ತಾನ ತಂಡ
ಟೀಂ ಇಂಡಿಯಾ ಆಟಗಾರರಯ ಬ್ರಿಸ್ಬೇನ್‌ನಲ್ಲಿ 4-ಸ್ಟಾರ್ ಸೌಲಭ್ಯವಿರುವ ರೈಡ್ಜಸ್ ಫೋರ್ಟಿಟ್ಯೂಡ್ ವ್ಯಾಲಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದೆ. ಭಾರತವು ಮೆಲ್ಬೋರ್ನ್‌ಗೆ ತೆರಳುವ ಮೊದಲು ಗಬ್ಬಾದಲ್ಲಿ ಅಕ್ಟೋಬರ್ 17 ಮತ್ತು 19 ರಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಆಡಲಿದೆ.
ಸ್ಥಳೀಯ ಕ್ರಿಕೆಟ್ ಸಂಸ್ಥೆಯೊಂದಿಗೆ ಸಮನ್ವಯದೊಂದಿಗೆ ಐಸಿಸಿ ಕಾರ್ಯಕ್ರಮಗಳಿಗಾಗಿ ಐಸಿಸಿಯು ವಸತಿ ವ್ಯವಸ್ಥೆ ಮಾಡಿದೆ. ಆದರೆ ಪ್ರವಾಸಿ ತಂಡಕ್ಕಿಂತ ಆತಿಥೇಯ ತಂಡವು ಉತ್ತಮ ಸೌಲಭ್ಯಗಳನ್ನು ಪಡೆಯುವುದು ಎಂದಿಗೂ ಒಪ್ಪಲು ಆಗಲ್ಲ. ಕುತೂಹಲಕಾರಿಯಾಗಿ, ಪಾಕಿಸ್ತಾನ ತಂಡ ಕೂಡ ಆಸ್ಟ್ರೇಲಿಯಾ ತಂಡದ ಆಟಗಾರರು ಇರುವ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದೆ.
T20 World Cup: ಬ್ರಿಸ್ಬೇನ್‌ನಲ್ಲಿ ಇಂದಿನಿಂದ ಟೀಂ ಇಂಡಿಯಾ ಅಭ್ಯಾಸ, ತಂಡ ಸೇರಿಕೊಂಡ ಶಮಿ

ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಅಭ್ಯಾಸ
ರೋಹಿತ್ ಶರ್ಮಾ ನೇತೃತ್ವದ ಭಾರತ ಸೋಮವಾರ ಬ್ರಿಸ್ಬೇನ್‌ನಲ್ಲಿ ವಾರ್ಮ್-ಅಪ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಅಭ್ಯಾಸ ಪಂದ್ಯಕ್ಕೂ ಮುನ್ನ ಭಾನುವಾರ ಟೀಂ ಇಂಡಿಯಾ ಆಟಗಾರರು ಅಭ್ಯಾಸ ಮಾಡಲಿದ್ದಾರೆ. ಮೊಹಮ್ಮದ್ ಶಮಿ ಈಗಾಗಲೇ ತಂಡವನ್ನು ಸೇರಿಕೊಂಡಿದ್ದು ಅಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ.
ರೋಹಿತ್ ಶರ್ಮಾ ಅವರು ಮೆಲ್ಬೋರ್ನ್‌ನಲ್ಲಿ ಕ್ಯಾಪ್ಟನ್ಸ್ ಡೇಗೆ ಹಾಜರಾಗಿ ಈಗಾಗಲೇ ಬ್ರಿಸ್ಬೇನ್ ತಲುಪಿದ್ದಾರೆ. ಅಭ್ಯಾಸದ ಅವಧಿಯಲ್ಲಿ ಎಲ್ಲಾ ಕಣ್ಣುಗಳು ಮೊಹಮ್ಮದ್ ಶಮಿಯ ಮೇಲೆ ಇರುತ್ತವೆ, ಮೊದಲನೇ ಅಭ್ಯಾಸ ಪಂದ್ಯದಲ್ಲಿ ಶಮಿ ಆಡುವ ಸಾಧ್ಯತೆ ಇದೆ.

ಸಂಪೂರ್ಣವಾಗಿ ಫಿಟ್ ಆಗಿರುವ ಶಮಿ
"ಮೊಹಮ್ಮದ್ ಶಮಿ ಫಿಟ್ ಆಗಿರುವ ಬಗ್ಗೆ ಸಾಕಷ್ಟು ಸಕಾರಾತ್ಮಕ ಮಾತುಗಳು ಕೇಳಿಬರುತ್ತಿವೆ. ಅವರು ಉತ್ತಮವಾಗಿ ಪ್ರದರ್ಶನ ನೀಡಲಿದ್ದಾರೆ. ಕಳೆದ 12 ತಿಂಗಳುಗಳಲ್ಲಿ ಆಟಗಾರರ ನಿರ್ವಹಣೆ ಮಾಡಲು ನಾವು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಆದರೆ, ಗಾಯಗಳು ಸಂಭವಿಸುತ್ತವೆ. ಆಟದಲ್ಲಿ ಅದು ಸಹಜ" ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಬೆನ್ನುನೋವಿನಿಂದ ಬುಮ್ರಾ ಪಂದ್ಯಾವಳಿಯಿಂದ ಹೊರಗುಳಿದರು, ಬೌಲಿಂಗ್ ವಿಭಾಗಕ್ಕೆ ಅದು ದೊಡ್ಡ ಹೊಡೆತವಾಗಿದೆ. ಕಳೆದ ಒಂದು ವರ್ಷದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಸಾಕಷ್ಟು ಸುಧಾರಣೆಯಾಗಿದ್ದರು, ಬೌಲಿಂಗ್ ತಂಡದ ದೌರ್ಬಲ್ಯವಾಗಿದೆ.

ಟಿ20 ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications