T20 World Cup: ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪ್ಲಾನಿಂಗ್

ಟಿ20 ವಿಶ್ವಕಪ್ ಟೂರ್ನಿಗಾಗಿ ಈಗಾಗಲೇ ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕೆ ತೆರಳಿದೆ. ಅಕ್ಟೋಬರ್ 8 ರಂದು ಶನಿವಾರ ಸತತ ತರಬೇತಿ ಪಡೆದಿದ್ದ ಟೀಂ ಇಂಡಿಯಾ, ಭಾನುವಾರವೂ ಕೂಡ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿತು. ತರಬೇತಿ ಅವಧಿಯ ನಂತರ ಟೀಂ ಇಂಡಿಯಾ ಆಟಗಾರರು ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯಾ ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಮೊದಲನೇ ಪಂದ್ಯವನ್ನು ವೀಕ್ಷಿಸಿದರು.
ಟೀಂ ಇಂಡಿಯಾ ಮೈದಾನದಲ್ಲಿ ಮಾತ್ರವಲ್ಲದೆ ಹೊರಗೆ ಕೂಡ ತಮ್ಮ ಕೆಲಸವನ್ನು ಪ್ರಾರಂಭಿಸಿದ್ದಾರೆ. ಪರ್ತ್‌ನ ಡಬ್ಲ್ಯೂಎಸಿಎ (WACA) ನಲ್ಲಿ ಅಭ್ಯಾಸವನ್ನು ಪೂರ್ಣಗೊಳಿಸಿದ ನಂತರ, ಟೀಮ್ ಇಂಡಿಯಾ ಸ್ಟ್ಯಾಂಡ್‌ನಿಂದ ಆಸ್ಟ್ರೇಲಿಯಾ ಇಂಗ್ಲೆಂಡ್ ನಡುವಿನ ಮೊದಲನೇ ಟಿ20 ಪಂದ್ಯವನ್ನು ವೀಕ್ಷಿಸಿದರು.
ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್ ಮತ್ತು ಹರ್ಷಲ್ ಪಟೇಲ್ ಪಂದ್ಯದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಭಾರತ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಸೋಮವಾರ ಪಶ್ಚಿಮ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧ ಆಡಲಿದೆ. ಅಕ್ಟೋಬರ್ 23ರಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಭಾರತ ತನ್ನ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

ಕಠಿಣ ಅಭ್ಯಾಸದಲ್ಲಿ ತೊಡಗಿರುವ ಟೀಂ ಇಂಡಿಯಾ
ಭಾನುವಾರ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಡಬ್ಲ್ಯೂಎಸಿಎ (WACA) ನಲ್ಲಿ ಎರಡನೇ ಅಭ್ಯಾಸ ಆರಂಭಿಸಿತ್ತು. ಶುಕ್ರವಾರ ನಡೆದ ಲಘು ಅಭ್ಯಾಸದ ನಂತರ ಆಟಗಾರರು ಭಾನುವಾರ ಕಠಿಣ ತಾಲೀಮು ನಡೆಸಿದರು. ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಲು ಮುಂದಿನ ಕೆಲವು ದಿನಗಳವರೆಗೆ ಟೀಂ ಇಂಡಿಯಾ ಆಟಗಾರರು ಗ್ರೌಂಡ್‌ನಲ್ಲಿ ಕಠಿಣ ತರಬೇತಿಯನ್ನು ಪಡೆಯುತ್ತಾರೆ ಎಂದು ತಂಡದ ಮ್ಯಾನೇಜ್‌ಮೆಂಟ್ ಹೇಳಿದೆ.
ಅಕ್ಟೋಬರ್ 10 ಮತ್ತು 13 ರಂದು ಟೀಂ ಇಂಡಿಯಾ ವೆಸ್ಟರ್ನ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ. ನಂತರ ಅಕ್ಟೋಬರ್ 17 ಮತ್ತು 19ರಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯಗಳನ್ನಾಡಲಿದೆ.
ಧೋನಿ ನಾಯಕರಾಗಿದ್ದಾಗ ಭಾರತಕ್ಕೆ ಪಾಕಿಸ್ತಾನ ಲೆಕ್ಕಕ್ಕೇ ಇರಲಿಲ್ಲ ಎಂದ ಶಾಹಿದ್ ಅಫ್ರಿದಿ

ಆಸ್ಟ್ರೇಲಿಯಾ ಇಂಗ್ಲೆಂಡ್ ಮೊದಲ ಟಿ20 ಪಂದ್ಯ ವೀಕ್ಷಣೆ
ಭಾನುವಾರ ಕಠಿಣ ತರಬೇತಿ ಪಡೆದ ನಂತರ ಟೀಂ ಇಂಡಿಯಾದ ಆಟಗಾರರು ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯವನ್ನು ವೀಕ್ಷಣೆ ಮಾಡಿದರು.
ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್ ಮತ್ತು ಹರ್ಷಲ್ ಪಟೇಲ್ ಪಂದ್ಯವನ್ನು ವೀಕ್ಷಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಪಂದ್ಯದ ವೀಕ್ಷಣೆ ವೇಳೆ ಎರಡೂ ತಂಡಗಳ ಬಲಾಬಲವನ್ನು ಲೆಕ್ಕ ಹಾಕುವ ಅವಕಾಶ ಟೀಂ ಇಂಡಿಯಾಕ್ಕೆ ಸಿಕ್ಕಿದೆ. ಇದೇ ವೇಳೆ ಆಸ್ಟ್ರೇಲಿಯಾ ಪಿಚ್‌ಗಳ ಬಗ್ಗೆಯೂ ಉತ್ತಮ ಮಾಹಿತಿ ಸಿಗುತ್ತದೆ. ಮಾತ್ರವಲ್ಲದೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಆಟಗಾರರ ಆಟಗಳನ್ನು ವಿಶ್ಲೇಷಣೆ ಮಾಡಲು ಟೀಂ ಇಂಡಿಯಾ ಆಟಗಾರರಿಗೆ ಈ ಪಂದ್ಯ ಅನುಕೂಲ ಮಾಡಿಕೊಡಲಿದೆ.

ಏಕದಿನ ಸರಣಿಯ ನಂತರ ಮೀಸಲು ಆಟಗಾರರು ಆಸ್ಟ್ರೇಲಿಯಾಕ್ಕೆ
ಆಸ್ಟ್ರೇಲಿಯಾಕ್ಕೆ ತೆರಳಿರುವ ಟೀಂ ಇಂಡಿಯಾದಲ್ಲಿ ಸದ್ಯ 14 ಜನರ ತಂಡ ಮತ್ತು ನೆಟ್ ಬೌಲರ್ ಮಾತ್ರ ಇದ್ದಾರೆ. ಮೀಸಲು ಆಟಗಾರರು ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುತ್ತಿದ್ದು ಅಕ್ಟೋಬರ್ 12ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ.
ಗಾಯಗೊಂಡಿರುವ ಜಸ್ಪ್ರೀತ್ ಬುಮ್ರಾ ಬದಲಿ ಆಟಗಾರನನ್ನು ಬಿಸಿಸಿಐ ಶೀಘ್ರದಲ್ಲೇ ಹೆಸರಿಸುವ ಸಾಧ್ಯತೆ ಇದೆ. ಬುಮ್ರಾ ಬದಲಿಗೆ ಹಿರಿಯ ವೇಗಿ ಮೊಹಮ್ಮದ್ ಶಮಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಎನ್‌ಸಿಎಯಲ್ಲಿ ಈಗಾಗಲೇ ಫಿಟ್ನೆಸ್ ಪರೀಕ್ಷೆಯಲ್ಲಿ ಭಾಗಿಯಾಗಿರುವ ಶಮಿ, ಅಕ್ಟೋಬರ್ 12ರಂದು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದಾರೆ.

ಟಿ20 ವಿಶ್ವಕಪ್ ಟೀಂ ಇಂಡಿಯಾ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications