ಫಾರ್ಮ್ ಇದೆ, ಅರ್ಹತೆ ಇದೆ ಅದ್ರೆ ಅದೃಷ್ಟವಿಲ್ಲ: 2021 & 2022 ವಿಶ್ವಕಪ್‌ನಿಂದ ಹೊರಗುಳಿದ 6 ನತದೃಷ್ಟರು!

ಟೀಮ್ ಇಂಡಿಯಾದ ಆಡುವ ಬಳಗದವನ್ನು ಬಿಸಿಸಿಐ ಈಗಾಗಲೇ ಘೋಷಣೆ ಮಾಡಿದೆ. ಈ ಮೂಲಕ ಈ ಬಾರಿಯ ಟಿ20 ವಿಶ್ವಕಪ್‌ಗೆ ಯಾರೆಲ್ಲಾ ಆಯ್ಕೆಯಾಗಬಹುದು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ರೋಹಿತ್ ಶರ್ಮಾ ಭಾರತ ತಂಡವನ್ನು ಈ ಬಾರಿಯ ವಿಶ್ವಕಪ್‌ನಲ್ಲಿ ಮುನ್ನಡೆಸಲಿದ್ದು ಕೆಎಲ್ ರಾಹುಲ್ ಉಪಜನಾಯಕನ ಜವಾಬ್ಧಾರಿ ಹೊತ್ತುಕೊಂಡಿದ್ದಾರೆ. ಇನ್ನು ಕಳೆದ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳದ ಅರ್ಷ್‌ದೀಪ್ ಸಿಂಗ್, ದೀಪಕ್ ಹೂಡಾ ಹಾಗೂ ಹರ್ಷಲ್ ಪಟೇಲ್ ಅವರಂತಾ ಆಟಗಾರರು ಕೂಡ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇಂದು ವರ್ಷದ ಅಂತರದಲ್ಲಿ ಎರಡು ಟಿ20 ವಿಶ್ವಕಪ್ ನಡೆಯುತ್ತಿರುವ ಕಾರಣದಿಂದಾಗಿ ಭಾರತದ ಆಡುವ ಬಳಗದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಕಾಣಿಸಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಟಿ20 ಮಾದರಿಯಲ್ಲಿ ಪರಿಣಾಮಕಾರಿ ಪ್ರದರ್ಶನವನ್ನು ನೀಡಿದ ಹೊರತಾಗಿಯೂ ಈ ಎರಡು ವರ್ಷದ ಟಿ20 ವಿಶ್ವಕಪ್‌ನಲ್ಲಿಯೂ ಟೀಮ್ ಇಂಡಿಯಾ ಸ್ಕ್ವಾಡ್‌ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಆರು ಪ್ರತಿಭಾವಂತ ಕ್ರಿಕೆಟಿಗರು ವೈಫಲ್ಯ ಅನುಭವಿಸಿದ್ದಾರೆ. ಆ ಆರು ಕ್ರಿಕೆಟಿಗರು ಯಾರು? ಮುಂದೆ ಓದಿ..

ಯಾರ್ಕರ್ ಸ್ಪೆಶಲಿಸ್ಟ್ ಟಿ ನಟರಾಜನ್
ಐಪಿಎಲ್‌ನಲ್ಲಿ ನೀಡಿದ ಅದ್ಭುತ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡ ಟಿ ನಟರಾಜನ್ ರಾಷ್ಟ್ಈಯ ತಂಡದ ಪರವಾಗಿಯೂ ಅಮೋಘ ಪ್ರದರ್ಶನ ನಿಡಿ ಮಿಂಚಿದ್ದರು. ಅದರಲ್ಲೂ ಟಿ20 ಮಾದರಿಯಲ್ಲಿ ಭಾರತದ ಪರವಾಗಿ ದೊಡ್ಡ ಅಸ್ತ್ರವಾಗುವ ನಿರೀಕ್ಷೆ ಮೂಡಿಸಿದ್ದಾರೆ. ಆದರೆ ಗಾಯದ ಸಮಸ್ಯೆ ಟಿ ನಟರಾಜನ್ ಅವರಿಗೆ ಬಹಳ ಕಾಡಿದ್ದು ಭಾರತ ತಂಡದಿಂದಲೇ ಹೊರಬೀಳುವಂತೆ ಮಾಡಿದೆ. ಭಾರತದ ವಿಶ್ವಕಪ್ ತಂಡದಲ್ಲಿ ನಟರಾಜನ್ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದರೆ ಅದ್ಭುತ ಸೇರ್ಪಡೆಯಾಗಿರುತ್ತಿತ್ತು.

ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್
ಐಪಿಎಲ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟಿ20 ಮಾದರಿಯಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿರುವ ಆಲ್‌ರೌಂಡರ್‌ಗಳ ಪೈಕಿ ವಾಶಿಂಗ್ಟನ್ ಸುಂದರ್ ಕೂಡ ಒಬ್ಬರು. ಕೆಲವೇ ಸಮಯಗ್ಳ ಹಿಂದೆ ಸುಂದರ್ ಟಿ20 ಮಾದರಿಯಲ್ಲಿ ಭಾರತದ ಅಗ್ರ ಶ್ರೇಯಾಂಕದ ಬೌಲರ್ ಕೂಡ ಆಗಿದ್ದರು. ಆದರೆ ಟಿ ನಟರಾಜನ್ ಅವರಂತೆಯೇ ವಾಶಿಂಗ್ಟನ್ ಸುಂದರ್‌ಗೂ ಗಾಯದ ಸಮಸ್ಯೆ ಬಹುವಾಗಿ ಕಾಡಿದೆ. ಹೀಗಾಗಿ ಹಿಂದಿನ ವರ್ಷದ ಹಾಗೂ ಈ ವರ್ಷದ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಪಡೆಯಲು ವಿಫಲವಾಗಿದ್ದಾರೆ.

ಮತ್ತೆ ಅವಕಾಶ ಕಳೆದುಕೊಂಡ ಸಂಜು ಸ್ಯಾಮ್ಸನ್
ಕಳೆದ ವರ್ಷದ ಹಾಗೂ ಈ ವರ್ಷದ ವಿಶ್ವಕಪ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ವಿಫಲವಾಗಿರುವ ಆಟಗಾರರ ಪೈಕಿ ಸಂಜು ಸ್ಯಾಮ್ಸನ್ ಮತ್ತೋರ್ವ ಪ್ರಮುಖ ಆಟಗಾರ. ಸಂಜು ಸ್ಯಾಮ್ಸನ್ ಅವರ ಸಾಮರ್ಥ್ಯದ ಬಗ್ಗೆ ಭಾರತದ ಬಹುತೇಕ ಕ್ರಿಕೆಟ್ ಅಭಿಮಾನಿಗಳಿಗೆ ಅರಿವಿದೆ. ಐಪಿಎಲ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಆದರೆ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು ಸಂಜುಗೆ ಸಾಕಷ್ಟು ಹಿನ್ನಡೆಯುಂಟು ಮಾಡಿದೆ. ಈ ಬಾರಿಯ ತಂಡದಲ್ಲಿ ಅವಕಾಶ ದೊರೆಯಲಿ ಎಂದು ಸಾಕಷ್ಟು ಪ್ರಮಾಣದಲ್ಲಿ ಅಭಿಮಾನಿಗಳು ನಿರೀಕ್ಷೆ ವ್ಯಕ್ತಪಡಿಸಿದ್ದರೂ ಅಭಿಮಾನಿಗಳು ರಿಷಬ್ ಪಂತ್ ಮೇಲೆ ತಮ್ಮ ನಿರೀಕ್ಷೆಯನ್ನು ಮುಂದುವರಿಸಿದ್ದಾರೆ. ಹೀಗಾಗಿ ಸಂಜು ಮತ್ತೆ ತಮ್ಮ ಅವಕಾಶಕ್ಕಾಗಿ ಕಾಯಬೇಕಿದೆ.

ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಐಯ್ಯರ್
ಶ್ರೇಯಸ್ ಐಯ್ಯರ್ ಕೂಡ ಕಳೆದ ವರ್ಷದ ಹಾಗೂ ಈ ವರ್ಷದ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವ ಆಟಗಾರ. 2022ರ ತವರಿನ ಕ್ರಿಕೆಟ್ ಋತುವಿನಲ್ಲಿ ಶ್ರೇಯಸ್ ಐಯ್ಯರ್ ಭರ್ಜರಿ ಪ್ರದರ್ಶನ ನೀಡಿದ್ದರೂ ಟಿ20 ವಿಶ್ವಕಪ್‌ನ ಪ್ರಾಥಮಿಕ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿಯೂ ಮೀಸಲು ಆಟಗಾರನಾಗಿದ್ದ ಶ್ರೇಯಸ್ ಈ ಬಾರಿಯೂ ಮೀಸಲು ಆಟಗಾರನಾಗಿಯೇ ಉಳಿದುಕೊಂಡಿದ್ದಾರೆ.

ಸ್ಪಿನ್ನರ್ ಕುಲ್‌ದೀಪ್ ಯಾದವ್
ಎಡಗೈ ಚೈನಾಮನ್ ಸ್ಪಿನ್ನರ್ ಒಂದು ಕಾಲದಲ್ಲಿ ಭಾರತದ ಪ್ರಮುಖ ಸ್ಪಿನ್ ಬೌಲರ್ ಎನಿಸಿಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕುಲ್‌ದೀಪ್ ಯಾದವ್‌ಗೆ ಹೆಚ್ಚಿನ ಅವಕಾಶಗಳನ್ನು ನೀಡಿಲ್ಲ. ಐಪಿಎಲ್‌ನಲ್ಲಿ ತಮ್ಮ ಉತ್ತಮ ಪ್ರದರ್ಶನ ನೀಡಿದ್ದರು ಕೂಡ ಕುಲ್‌ದೀಪ್ ಯಾದವ್ ಕಳೆದ ಬಾರಿಯಂತೆಯೇ ಈ ಬಾರಿಯೂ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ.

ಹಿರಿಯ ಕ್ರಿಕೆಟಿಗ ಶಿಖರ್ ಧವನ್
ಟೀಮ್ ಇಂಡಿಯಾದ ಅನುಭವಿ ಕ್ರಿಕೆಟಿಗ ಶಿಖರ್ ಧವನ್ ಟಿ20 ಮಾದರಿಯ ತಂಡದಿಂದ ಹೊರಬಿದ್ದಿದ್ದಾರೆ. ಏಕದಿನ ತಂಡದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರನಾಗಿರುವ ಶಿಖರ್ ಧವನ್ ಚುಟುಕು ಮಾದರಿಯಲ್ಲಿ ಸ್ಥಾನ ಉಳಿಸಿಕೊಂಡಿಲ್ಲ. ಚುಟುಕು ಮಾದರಿಯಲ್ಲಿ ಆರಂಭಿಕ ಆಟಗಾರನಾಗಿ ರೋಹಿತ್ ಶರ್ಮಾಗೆ ಕೆಎಲ್ ರಾಹುಲ್ ಸ್ಥಾನ ಭದ್ರಪಡಿಸಿಕೊಂಡಿದ್ದು ಪರ್ಯಾಯ ಆರಂಭಿಕ ಆಟಗಾರನಾಗಿ ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್ ಅವರನ್ನು ಕಣಕ್ಕಿಳಿಸುತ್ತಿದ್ದು ಧವನ್‌ಗೆ ಸ್ಥಾನವಿಲ್ಲದಂತಾಗಿದೆ. ಹೀಗಾಗಿ ಕಳೆದ ವರ್ಷದಂತೆ ಈ ವರ್ಷವೂ ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications