For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ರಿಷಭ್ ಪಂತ್ ಬ್ಯಾಟಿಂಗ್ ಸಾಮರ್ಥ್ಯದ ಅನುಕೂಲ ಪಡೆಯಲು ವಿವಿಎಸ್ ಲಕ್ಷ್ಮಣ್ ಪ್ರಮುಖ ಸಲಹೆ

T20 World Cup: VVS Laxman suggestion for Rishabh pant batting order

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತದ ಬ್ಯಾಟಿಂಗ್ ಸರದಿಯಲ್ಲಿ ಹೆಚ್ಚು ಕುತೂಹಲ ಮೂಡಿಸಿರುವ ಆಟಗಾರನೆಂದರೆ ರಿಷಭ್ ಪಂತ್. ಇತ್ತೀಚಿನ ದಿನಗಳಲ್ಲಿ ಪಂತ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿರುವ ಸಾಮರ್ಥ್ಯ ಇದಕ್ಕೆ ಕಾರಣ. ಚುಟುಕು ಕ್ರಿಕೆಟ್‌ನಲ್ಲಿ ಪಂತ್ ಬ್ಯಾಟ್‌ನಿಂದ ಸಂಪೂರ್ಣ ಸಾಮರ್ಥ್ಯ ಹೊರ ಬಂದಿಲ್ಲ ಎಂಬುದು ಕೂಡ ಅಷ್ಟೇ ನಿಜ. ಇಂತಾ ಸಂದರ್ಭದಲ್ಲಿ ರಿಷಭ್ ಪಂತ್ ಬ್ಯಾಟ್‌ನಿಂದ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಕೊಡುಗೆ ಬರಬೇಕೆಂದರೆ ಮಾಡಬೇಕಿರುವುದು ಏನು ಎಂಬುದನ್ನು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ವಿವರಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಬ್ಯಾಟಿಂಗ್ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಪಂತ್ 14 ಎಸೆತಗಳನ್ನು ಎದುರಿಸಿ ಅಜೇಯ 29 ರನ್‌ಗಳಿಸಿದ್ದರು. ಈ ಬಗ್ಗೆ ವಿವಿಎಸ್ ಲಕ್ಷ್ಮಣ್ ಬಳಿಕ ರಿಷಭ್ ಪಂತ್‌ಗೆ ನಾಲ್ಕನೇ ಕ್ರಮಾಂಕ ಅತ್ಯಂತ ಸೂಕ್ತವೇ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಲಕ್ಷ್ಮಣ್ ನೀಡಿದ ಉತ್ತರ ಹೀಗಿದೆ.

"ನನ್ನ ಪ್ರಕಾರ ನಾಲ್ಕನೇ ಕ್ರಮಾಂಕ ಸೂರ್ಯಕುಮಾರ್ ಯಾದವ್‌ಗೆ ಹೆಚ್ಚು ಸೂಕ್ತವಾಗಿದೆ. ರಿಷಭ್ ಪಂತ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುವುದು ಸೂಕ್ತ. ಆದರೆ 13-14 ಓವರ್‌ಗಳಾಗುವಾಗ ಎರಡು ಅಥವಾ ಮೂರು ವಿಕೆಟ್‌ಗಳು ಕಳೆದುಕೊಂಡಿದ್ದರೆ ಅಂತಾ ಸಂದರ್ಭದಲ್ಲಿ ರುಷಭ್ ಪಂತ್ ಕಣಕ್ಕಿಳಿಯುವುದು ಉತ್ತಮ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್. ಮುಂದುವರಿದು ಮಾತನಾಡಿದ ಅವರು "ನಾನು ಇಲ್ಲಿ ಓವರ್‌ಗಳ ವಿಚಾರವಾಗಿ ಹೆಚ್ಚು ಗಮನ ನೀಡಲು ಬಯಸುತ್ತೇನೆ ಯಾಕೆಂದರೆ ರಿಷಭ್ ಪಂತ್ ತಮ್ಮ ಸ್ಪೋಟಕ ಬ್ಯಾಟಿಂಗ್‌ ಸಾಮರ್ಥ್ಯದ ಕಾರಣದಿಂದಾಗಿ ಪಂದ್ಯದ ಗತಿಯನ್ನು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ.

ಇನ್ನು ಇದೇ ಸಂದರ್ಭದಲ್ಲಿ ವಿವಿಎಸ್ ಲಕ್ಷ್ಮಣ್ ತಂಡದಲ್ಲಿರುವ ಮ್ಯಾಚ್ ವಿನ್ನರ್ ಆಟಗಾರರಾದ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಅವರಂತಾ ಆಟಗಾರರನ್ನು ಪರಿಸ್ಥಿತಿ ನೋಡಿಕೊಂಡು ಕ್ರಮಾಂಕದಲ್ಲಿ ಬದಲಾವನೆ ಮಾಡುವುದು ಹೆಚ್ಚು ಉತ್ತಮ ಎಂದು ಹೇಳಿದ್ದಾರೆ. ಇನ್ನು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ರಿಷಭ್ ಪಂತ್ ಫಿನಿಷರ್‌ಗಳಾಗಿ ನಿಭಾಯಿಸಿದ ರೀತಿಗೂ ಲಕ್ಷ್ಮಣ್ ಸಂತಸ ವ್ಯಕ್ತಪಡಿಸಿದ್ದಾರೆ.

"ಅಂತಿಮ ನಾಲ್ಕು ಓವರ್‌ಗಳಲ್ಲಿ 40 ರನ್‌ಗಳ ಅವಶ್ಯಕತೆಯಿತ್ತು. ಇಂತಾ ಸಂದರ್ಭಗಳು ಟಿ20 ವಿಶ್ವಕಪ್‌ನ ಪ್ರಮುಖ ಘಟ್ಟದಲ್ಲಿ ಸಾಮಾನ್ಯವಾಗಿ ಎದುರಾಗುತ್ತದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಪಂದ್ಯ ನಿಜಕ್ಕೂ ಉತ್ತಮವಾದ ಅಭ್ಯಾಸ ಪಂದ್ಯವಾಗಿತ್ತು. ಇಂತಾ ಸಂದರ್ಭಗಳಲ್ಲಿ ಸವಾಲನ್ನು ಹೇಗೆ ಸ್ವೀಕರಿಸುತ್ತೇವೆ ಎಂಬುದು ಪ್ರಮುಖವಾಗುತ್ತದೆ" ಎಂದಿದ್ದಾರೆ ವಿವಿಎಸ್ ಲಕ್ಷ್ಮಣ್.

ಕೊಹ್ಲಿಗೆ ಮೂರನೇ ಕ್ರಮಾಂಕವೇ ಸೂಕ್ತ: ಇನ್ನು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿಯೇ ಕಣಕ್ಕಿಳಿಯುವುದು ಅತ್ಯಂತ ಸೂಕ್ತ ಎಂದಿದ್ದಾರೆ. "ಆರಂಭಿಕರಾಗಿ ತಂಡದಲ್ಲಿ ಅನುಭವಿಗಳಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಅವರಂತಾ ಆಟಗಾರರಿದ್ದಾರೆ. ಮತ್ತೊಂದೆಡೆ ಇಶಾನ್ ಕಿಶನ್ ಅವರಂತಾ ಆಟಗಾರ ಆಡುವ ರೀತಿಯಿಂದಾಗಿ ಆಡುಇವ ಬಳಗದಲ್ಲಿ ಇರಲೇ ಬೇಕೆಂದು ಬಲವಂತ ಮಾಡುವಂತಿದೆ. ಆದರೆ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಸೂಕ್ತ ಆಟಗಾರ" ಎಂದಿದ್ದಾರೆ ಲಕ್ಷ್ಮಣ್.

Story first published: Tuesday, October 19, 2021, 19:30 [IST]
Other articles published on Oct 19, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+