T20 World Cup: ಭಾರತಕ್ಕೆ ವಿರಾಟ್ ಕೊಹ್ಲಿ ಉನ್ನತ ಫಾರ್ಮ್ ಏಕೆ ಬೇಕು; ವಿವರಿಸಿದ ಇರ್ಫಾನ್ ಪಠಾಣ್

ಸದ್ಯ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯ ಕಳಪೆ ಬ್ಯಾಟಿಂಗ್ ಫಾರ್ಮ್ ಜಗತ್ತಿನಾದ್ಯಂತ ಹೆಚ್ಚು ಚರ್ಚಿಸಲ್ಪಟ್ಟ ವಿಷಯವಾಗಿದೆ. ಈ ನಡುವೆ ಸ್ಟಾರ್ ಬ್ಯಾಟರ್ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಪ್ರವಾಸವನ್ನು ತಪ್ಪಿಸಿಕೊಂಡು ಸ್ವಲ್ಪ ವಿರಾಮ ತೆಗೆದುಕೊಂಡರು.
ಆದಾಗ್ಯೂ, ಭಾನುವಾರ (ಆಗಸ್ಟ್ 28)ದಂದು ಭಾರತವು ತಮ್ಮ ಆರಂಭಿಕ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ವೇಳೆ ಬ್ಯಾಟಿಂಗ್ ಲಯಕ್ಕೆ ಮರಳಲು ಸಿದ್ಧರಾಗಿದ್ದಾರೆ. ಏಷ್ಯಾ ಕಪ್‌ಗಿಂತ ಹೆಚ್ಚಾಗಿ 2022ರ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ ಪಂದ್ಯಾವಳಿ ಬಂದಾಗ ಭಾರತಕ್ಕೆ ವಿರಾಟ್ ಕೊಹ್ಲಿಯವರ ಅತ್ಯುತ್ತಮ ಫಾರ್ಮ್ ಅವಶ್ಯಕತೆಯಿದೆ ಎಂದು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯ ಪಿಚ್‌ಗಳು ಇಷ್ಟ
"ವಿರಾಟ್ ಕೊಹ್ಲಿ ಮನಸ್ಸಿನಲ್ಲಿ ಏನು ಯೋಚಿಸುತ್ತಾರೆ, ಅವರು ಯಾವ ರೀತಿಯ ಮನಸ್ಥಿತಿಯೊಂದಿಗೆ ಪಂದ್ಯಾವಳಿಗೆ ಬರುತ್ತಾರೆ ಮತ್ತು ಪಂದ್ಯಗಳನ್ನು ಆಡುತ್ತಾರೆ ಎಂಬುದು ಮುಖ್ಯ. ಏಷ್ಯಾ ಕಪ್ ತುಂಬಾ ಮುಖ್ಯವಾಗಿದೆ, ಆದರೆ ನಾನು ವಿಶ್ವಕಪ್ ಅನ್ನು ಎದುರು ನೋಡುತ್ತಿದ್ದೇನೆ. ಆಸ್ಟ್ರೇಲಿಯಾದಲ್ಲಿ ಪಿಚ್‌ಗಳು ತುಂಬಾ ಚೆನ್ನಾಗಿರುತ್ತವೆ, ಅಲ್ಲಿನ ಪಿಚ್‌ಗಳು ವಿರಾಟ್ ಕೊಹ್ಲಿ ಇಷ್ಟಪಡುತ್ತಾರೆ. ಅವರು ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಉತ್ತಮವಾಗಿ ಆಡುತ್ತಾರೆ. ಈ ಹಿಂದೆ ವಿರಾಟ್ ಕೊಹ್ಲಿ ಅಲ್ಲಿನ ಪಿಚ್‌ಗಳಲ್ಲಿ ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ," ಎಂದು ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಸ್ಟಾರ್ ಸ್ಪೋರ್ಟ್ಸ್ ಶೋ 'ಗೇಮ್‌ಪ್ಲಾನ್'ನಲ್ಲಿ ಹೇಳಿದರು.
"ಆದ್ದರಿಂದ, ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ವಿರಾಟ್ ಕೊಹ್ಲಿಯ ಉನ್ನತ ಫಾರ್ಮ್ ಅಗತ್ಯವಿದೆ. ಅವರು ಏಷ್ಯಾ ಕಪ್‌ನಿಂದ ಉನ್ನತ ಫಾರ್ಮ್‌ನಲ್ಲಿ ಮರಳಲಿದ್ದಾರೆ, ಇದು ವಿರಾಟ್ ಕೊಹ್ಲಿ ಮತ್ತು ಭಾರತ ತಂಡಕ್ಕೆ ಗೆಲ್ಲಲೇಬೇಕಾದ ಪರಿಸ್ಥಿತಿ ಎಂದು ನಾನು ಭಾವಿಸುತ್ತೇನೆ," ಎಂದು ಇರ್ಫಾನ್ ಪಠಾಣ್ ತಿಳಿಸಿದರು.

ಭಾರತವು ಇತರ ಆಯ್ಕೆಗಳನ್ನು ನೋಡಬೇಕಾಗಬಹುದು
ಒಂದು ವೇಳೆ ವಿರಾಟ್ ಕೊಹ್ಲಿ ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ ಏನಾಗುತ್ತದೆ ಎಂಬ ಪ್ರಶ್ನೆಗೆ, ಭಾರತವು ಇತರ ಆಯ್ಕೆಗಳನ್ನು ನೋಡಬೇಕಾಗಬಹುದು, ಎಂದು ಯುವ ಪ್ರತಿಭೆಗಳತ್ತ ಗಮನ ಹರಿಸಬೇಕು ಎಂದು ಸೂಚ್ಯವಾಗಿ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟರು.
"ಈಗಾಗಲೇ ಭಾರತ ತಂಡಕ್ಕೆ ಯುವ ಆಟಗಾರರು ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಹೀಗಾಗಿ ಹಲವು ಆಯ್ಕೆಗಳಿವೆ, ತಂಡದ ಮ್ಯಾನೇಜ್‌ಮೆಂಟ್ ಆಯ್ಕೆ ಮಾಡಬೇಕಾಗುತ್ತದೆ," ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹೇಳಿದರು.

ಏಷ್ಯಾ ಕಪ್‌ನಲ್ಲಿ ವಿರಾಟ್ ಕೊಹ್ಲಿ ವಿಜೃಂಭಿಸುತ್ತಾರೆ
"ಸದ್ಯ ಉತ್ತಮ ಫಾರ್ಮ್‌ನಲ್ಲಿರುವ ಯಾರಾದರೂ ವಿಶ್ವಕಪ್‌ಗೆ ಹೋಗಬೇಕು. ನೀವು ವಿಶ್ವಕಪ್‌ನಲ್ಲಿ ಫಾರ್ಮ್ ಅನ್ನು ಹೊಂದಲು ಸಾಧ್ಯವಿಲ್ಲ. ವಿಶ್ವಕಪ್‌ನಲ್ಲಿ ನೀವು ಫಾರ್ಮ್ ಅನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಆದರೆ ಏಷ್ಯಾ ಕಪ್‌ನಲ್ಲಿ ವಿರಾಟ್ ಕೊಹ್ಲಿ ವಿಜೃಂಭಿಸುತ್ತಾರೆ, ಅವರು ತುಂಬಾ ಆತ್ಮವಿಶ್ವಾಸದಿಂದಿದ್ದಾರೆ," ಎಂದು ಹೇಳುವ ಮೊದಲು ಇರ್ಫಾನ್ ಪಠಾಣ್ ತಿಳಿಸಿದರು.
ಆಗಸ್ಟ್ 28ರಂದು ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್ 2022ರ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವು ಸಾಂಪ್ರದಾಯಿಕ ಎದುರಾಳಿ ಭಾರತವನ್ನು ಎದುರಿಸಲಿದೆ.

ಏಷ್ಯಾ ಕಪ್ 2022ಗಾಗಿ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್
ಸ್ಟ್ಯಾಂಡ್‌ಬೈ ಆಟಗಾರರು: ಶ್ರೇಯಸ್ ಅಯ್ಯರ್, ದೀಪಕ್ ಚಹಾರ್ ಮತ್ತು ಅಕ್ಷರ್ ಪಟೇಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications