Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್: 2 ಬಾರಿಯ ಚಾಂಪಿಯನ್ನರಿಗೆ ಮೊದಲ ಪಂದ್ಯದಲ್ಲೇ ಆಘಾತ: ವಿಂಡೀಸ್ ಪಡೆಯನ್ನು ಕೆಡವಿದ ಸ್ಕಾಟ್ಲೆಂಡ್

T20 world cup, WI vs SCO: Scotland win against West Indies by 42 runs in 3rd match

ಟಿ20 ವಿಶ್ವಕಪ್‌ನ ಎರಡನೇ ದಿನವೂ ಅಚ್ಚರಿಯ ಕ್ರಿಕೆಟ್ ಪಂಡಿತರ ಲೆಕ್ಕಾಚಾರವನ್ನು ಬುಡಮೇಲು ಮಾಡುವ ಫಲಿತಾಂಶ ಹೊರಬಿದ್ದಿದೆ. ವಿಶ್ವಕಪ್‌ ಅರ್ಹತಾ ಸುತ್ತಿನ ಮೊದಲ ದಿನದಾಟದಲ್ಲಿ ಶ್ರೀಲಂಕಾ ತಂಡಕ್ಕೆ ನಮೀಬಿಯಾ ಆಘಾತ ನೀಡಿದ್ದರೆ ಎರಡನೇ ದಿನದಾಟದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ದೊಡ್ಡ ಆಘಾತವನ್ನು ಅನುಭವಿಸಿದೆ. ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಭಾರೀ ಸೋಲು ಅನುಭವಿಸಿದ್ದು ಮುಖಭಂಗಕ್ಕೆ ಒಳಗಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಸ್ಕಾಟ್ಲೆಂಡ್ ತಂಡ ವೆಸ್ಟ್ ಇಂಡೀಸ್‌ಗೆ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಗಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಸ್ಕಾಟ್ಲೆಂಡ್ ತಂಡ ಬೌಲಿಂಗ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಯಿತು. ಇದರ ಪರಿಣಾಮವಾಗಿ ಎರಡು ಬಾರಿಯ ಟಿ20 ವಿಶ್ವಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಸ್ಕಾಟ್ಲೆಂಟ್ ತಂಡವನ್ನು 118 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು.

ಸವಾಲಿನ ಗುರಿ ನೀಡಿದ ಸ್ಕಾಟ್ಲೆಂಟ್

ಸವಾಲಿನ ಗುರಿ ನೀಡಿದ ಸ್ಕಾಟ್ಲೆಂಟ್

ವೆಸ್ಟ್ ಇಂಡೀಸ್ ತಂಡ ಟಾಸ್ ಗೆದ್ದು ಸ್ಕಾಟ್ಲೆಂಟ್ ತಂಡವನ್ನು ಮೊದಲಿಗೆ ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಈ ಸವಾಲನ್ನು ಸ್ವೀಕರಿಸಿದ ಸ್ಕಾಟ್ಲೆಂಡ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕ ಆಟಗಾರ ಜಾರ್ಜ್ ಮುನ್ಸೇ ಈ ಪಂದ್ಯದಲ್ಲಿ ಭರ್ಜರಿ ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ. 53 ಎಸೆತಗಳಲ್ಲಿ 66 ರನ್‌ಗಳಿಸಿದ ಮುನ್ಸೇ ಅಜೇಯವಾಗಿಳಿದರು. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 160 ರನ್‌ಗಳಿಸಲು ಯಶಸ್ವಿಯಾಯಿತು.

ವಿಂಡೀಸ್ ಆಟಗಾರರ ಕಳಪೆ ಪ್ರದರ್ಶನ

ವಿಂಡೀಸ್ ಆಟಗಾರರ ಕಳಪೆ ಪ್ರದರ್ಶನ

ಸ್ಕಾಟ್ಲೆಂಡ್ ತಂಡದ ವಿರುದ್ಧವೂ ವೆಸ್ಟ್ ಇಂಡೀಸ್ ತಂಡದ ಕಳಪೆ ಬ್ಯಾಟಿಂಗ್ ಪ್ರದರ್ಶನ ಮುಂದುವರಿದಿದೆ. ಯಾವ ಜೋಡಿ ಕೂಡ ಕ್ರೀಸ್‌ನಲ್ಲಿ ನೆಲೆಯೂರಿ ಜೊತೆಯಾಟವಾಟ ನೀಡಲು ಸಾಧ್ಯವಾಗಲೇ ಇಲ್ಲ. ಜೇಸನ್ ಹೋಲ್ಡರ್ 38 ರನ್‌ಗಳನ್ನು ಗಳಿಸಿದ್ದು ವಿಂಡೀಸ್ ಪರ ದಾಖಲಾದ ಅತಿ ಹೆಚ್ಚಿನ ಮೊತ್ತವಾಗಿದೆ. 18.3 ಓವರ್‌ಗಳಲ್ಲಿ ಕೇವಲ 118 ರನ್‌ಗಳಿಗೆ ಆಲೌಟ್ ಆಗುವ ಮೂಲಕ 42 ರನ್‌ಗಳ ಅಂತರದಿಂದ ವೆಸ್ಟ್ ಇಂಡೀಸ್ ಸೋಲು ಅನುಭವಿಸಿದೆ.

ಇತ್ತಂಡಗಳ ಪ್ಲೇಯಿಂಗ್ XI

ಇತ್ತಂಡಗಳ ಪ್ಲೇಯಿಂಗ್ XI

ವೆಸ್ಟ್ ಇಂಡೀಸ್: ಕೈಲ್ ಮೇಯರ್ಸ್, ಎವಿನ್ ಲೂಯಿಸ್, ಬ್ರೆಂಡನ್ ಕಿಂಗ್, ಶಮರ್ ಬ್ರೂಕ್ಸ್, ನಿಕೋಲಸ್ ಪೂರನ್ (ನಾಯಕ & ವಿಕೆಟ್ ಕೀಪರ್), ರೋಮನ್ ಪೊವೆಲ್, ಜೇಸನ್ ಹೋಲ್ಡರ್, ಓಡಿಯನ್ ಸ್ಮಿತ್, ಅಕೀಲ್ ಹುಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್
ಬೆಂಚ್: ಜಾನ್ಸನ್ ಚಾರ್ಲ್ಸ್, ಯಾನಿಕ್ ಕ್ಯಾರಿಯಾ, ಶೆಲ್ಡನ್ ಕಾಟ್ರೆಲ್, ರೇಮನ್ ರೀಫರ್

ಸ್ಕಾಟ್ಲೆಂಡ್: ಜಾರ್ಜ್ ಮುನ್ಸಿ, ಮೈಕೆಲ್ ಜೋನ್ಸ್, ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್), ರಿಚಿ ಬೆರಿಂಗ್ಟನ್ (ನಾಯಕ), ಕ್ಯಾಲಮ್ ಮ್ಯಾಕ್ಲಿಯೋಡ್, ಕ್ರಿಸ್ ಗ್ರೀವ್ಸ್, ಮೈಕೆಲ್ ಲೀಸ್ಕ್, ಮಾರ್ಕ್ ವ್ಯಾಟ್, ಜೋಶ್ ಡೇವಿ, ಸಫ್ಯಾನ್ ಷರೀಫ್, ಬ್ರಾಡ್ ವೀಲ್
ಬೆಂಚ್: ಹಮ್ಜಾ ತಾಹಿರ್, ಕ್ರೇಗ್ ವ್ಯಾಲೇಸ್, ಕ್ರಿಸ್ ಸೋಲ್, ಬ್ರಾಂಡನ್ ಮೆಕ್ಮುಲ್ಲೆನ್

Story first published: Monday, October 17, 2022, 15:37 [IST]
Other articles published on Oct 17, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+