For Quick Alerts
ALLOW NOTIFICATIONS  
For Daily Alerts
 

ICC Rankings: ವೈಫಲ್ಯದ ಹೊರತಾಗಿಯೂ 43 ಸ್ಥಾನಗಳ ಏರಿಕೆ ಕಂಡ ಗಿಲ್: ಜೈಸ್ವಾಲ್‌ಗೂ ಅದ್ಭುತ ಯಶಸ್ಸು

ನೂತನ ಐಸಿಸಿ ಶ್ರೇಯಾಂಖಪಟ್ಟಿ ಬಿಡುಗಡೆಯಾಗಿದ್ದು ಭಾರತೀಯ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಅದ್ಭುತ ಏರಿಕೆ ಕಂಡಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಶುಬ್ಮನ್ ಗಿಲ್ ಹೇಳಿಕೊಳ್ಳುವಂತಾ ಯಶಸ್ಸು ಸಾಧಿಸಲು ಸಾಧ್ಯವಗಿರಲಿಲ್ಲ. ಹಾಗಿದ್ದರೂ ಟಿ20 ಶ್ರೇಯಾಂಕಪಟ್ಟಿಯಲ್ಲಿ ಶುಬ್ಮನ್ ಗಿಲ್ ಬರೊಬ್ಬರಿ 43 ಸ್ಥಾನಗಳ ಏರಿಕೆ ಸಾಧಿಸಿದ್ದಾರೆ. ಈ ಮೂಲಕ ತಮ್ಮ ವೃತ್ತಿಜೀವನದಲ್ಲಿ ಅತ್ಯುತ್ತಮ 25ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಐದು ಪಂದ್ಯಗಳ ಟಿ20 ಸರಣಿಯಲ್ಲಿ ಶುಬ್ಮನ್ ಗಿಲ್ ನಾಲ್ಕು ಬಾರಿ ಒಂದಂಕಿಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದರು. ಆದರೆ ಸರಣಿಯ ನಾಲ್ಕನೇ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಭಾರತ ಸರಣಿಯಲ್ಲಿ ಕಮ್‌ಬ್ಯಾಕ್ ಮಾಡಲು ಕಾರಣವಾದರು ಶುಬ್ಮನ್ ಗಿಲ್. ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಜೊತೆ ಸೇರಿ ಮೊದಲ ವಿಕೆಟ್‌ಗೆ ದಾಖಲೆಯ 165 ರನ್‌ಗಳ ಜೊತೆಯಾಟ ನೀಡಿದ್ದರು. ಇದು ಭಾರತದ ಪರವಾಗಿ ಟಿ20 ಮಾದರಿಯಲ್ಲಿ ದಾಖಲಾದ ಜಂಟಿ ಅತ್ಯುತ್ತಮ ಆರಂಭಿಕ ಜೊತೆಯಾಟ ಎನಿಸಿಕೊಂಡಿದೆ.

T20I rankings: Shubman Gill rises 43 places despite poor performance against West Indies

ಐದು ಪಂದ್ಯಗಳ ಸರಣಿಯ ಕೊನೆಯ ಎರಡು ಟಿ20 ಪಂದ್ಯಗಳಲ್ಲಿ 77 ಮತ್ತು 9 ರನ್‌ಗಳನ್ನು ಗಳಿಸಿದ ಬಳಿಕ ಗಿಲ್ ಭರ್ಜರಿ 43 ಸ್ಥಾನಗಳ ಗಮನಾರ್ಹ ಏರಿಕೆ ಕಂಡಿದ್ದು 25ನೇ ಸ್ಥಾನವನ್ನು ತಲುಪಿದ್ದಾರೆ. ಇದಕ್ಕೂ ಮುನ್ನ ಅವರ ಅತ್ಯುತ್ತಮ ಶ್ರೇಯಾಂಕ 30ನೇ ಸ್ಥಾನವಾಗಿತ್ತು. ಅಹಮದಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅಜೇಯ 126 ರನ್ ಗಳಿಸಿದ ನಂತರ ಅವರು ಫೆಬ್ರವರಿ, 2023ರಲ್ಲಿ ಈ ಸ್ಥಾನಕ್ಕೇರಿದ್ದರು.

ಇನ್ನು ಇದೇ ಸರಣಿಯಲ್ಲಿ ಶುಬ್ಮನ್ ಗಿಲ್ ಅವರ ಆರಂಭಿಕ ಜೊತೆಗಾರ ಯಶಸ್ವಿ ಜೈಸ್ವಾಲ್ ಕೂಡ ಶ್ರೇಯಾಂಕದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದಾರೆ. 51 ಎಸೆತಗಳಲ್ಲಿ ಅಜೇಯ 84 ರನ್ ಗಳಿಸಿದ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರದರ್ಶನದ ನಂತರ, ಜೈಸ್ವಾಲ್ ಸಾವಿರಕ್ಕೂ ಹೆಚ್ಚು ಸ್ಥಾನಗಳ ಏರಿಕೆಯೊಂದಿಗೆ 88ನೇ ಸ್ಥಾನವನ್ನು ತಲುಪಿದ್ದಾರೆ.

ಈ ಸರಣಿ ಹಲವು ವೆಸ್ಟ್ ಇಂಡೀಸ್ ಆಟಗಾರರ ಶ್ರೇಯಾಂಕದಲ್ಲಿಯೂ ಪ್ರಗತಿಗೆ ಕಾರಣವಾಗಿದೆ. 55 ಎಸೆತಗಳಲ್ಲಿ ಅಜೇಯ 85 ರನ್ ಗಳಿಸಿದ ಆರಂಭಿಕ ಬ್ಯಾಂಡನ್ ಕಿಂಗ್ ಐದು ಸ್ಥಾನ ಮೇಲೇರಿ ವೃತ್ತಿಜೀವನದ ಅತ್ಯುತ್ತಮ 13ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಉಳಿದಂತೆ ಕೈಲ್ ಮೇಯರ್ಸ್ ಮತ್ತು ಶಿಮ್ರಾನ್ ಹೆಟ್ಮೆಯರ್ ಕೂಡ ತಮ್ಮ ಶ್ರೇಯಾಂಕಗಳನ್ನು ಸುಧಾರಿಸಿದ್ದಾರೆ. ಇವರಿಬ್ಬರು ಕ್ರಮವಾಗಿ 45 ಮತ್ತು 85 ನೇ ಸ್ಥಾನಕ್ಕೆ ಏರಿಕ್ಕೆ ಏರಿದ್ದಾರೆ.

Story first published: Wednesday, August 16, 2023, 16:21 [IST]
Other articles published on Aug 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+