ಅಪ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯ ಕಚೇರಿಗೆ ನುಗ್ಗಿದ ತಾಲಿಬಾನಿಗಳು, ಮಾಜಿ ಕ್ರಿಕೆಟಿಗ ಸಾಥ್

ಅಪ್ಘಾನಿಸ್ತಾನ ಈಗ ಸಂಪೂರ್ಣವಾಗಿ ತಾಲಿಬಾನಿಗಳ ವಶವಾಗಿದ್ದು ಇಡೀ ದೇಶದಲ್ಲಿ ಆತಂಕದ ವಾತಾವರಣವಿದೆ. ಅಲ್ಲಿನ ಜನರು ತಮ್ಮ ಭವಿಷ್ಯದ ಬಗ್ಗೆ ಈಗ ಆತಂಕಗೊಂಡಿದ್ದಾರೆ. ಅಪ್ಘಾನಿಸ್ತಾನದ ಕ್ರಿಕೆಟ್ ಭವಿಷ್ಯದ ಬಗ್ಗೆಯೂ ಈಗ ಪ್ರಶ್ನೆಗಳು ಎದ್ದಿದೆ. ಇಂತಾ ಸಂದರ್ಭದಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯ ಕಚೇರಿಗೆ ಶಸ್ತ್ರಸಜ್ಜಿತ ತಾಲಿಬಾನಿಗಳು ಪ್ರವೇಶಿಸಿದ್ದಾರೆ. ಈವೇಳೆ ಈ ತಾಲಿಬಾನಿಗಳಿಗೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಬ್ದುಲ್ಲಾ ಮಜಾರಿ ಕೂಡ ಸಾತ್ ನೀಡಿದ್ದರು.
ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದುಕೊಂಡಿದ್ದರೂ ಕ್ರಿಕೆಟ್‌ಗೆ ಯಾವುದೇ ಆತಂಕವಿಲ್ಲ ಎಂದು ಇದಕ್ಕೂ ಮುನ್ನವೇ ಅಲ್ಲಿನ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯ ನಿರ್ವಾಹಕ ಹಮೀದ್ ಶಿನ್ವರಿ ಹೇಳಿಕೆಯನ್ನು ನೀಡಿದ್ದರು. ಇದಕ್ಕೆ ಪೂರವೆಂಬಂತೆ ಎಸಿಬಿ ಮುಖ್ಯ ಕಚೇರಿಗೆ ಬಂದೂಕುಧಾರಿ ತಾಲಿಬಾನಿಗಳು ಪ್ರವೇಶಿಸಿದ್ದಾರೆ. ಇವುಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದೆ.
ಈ ಸಂದರ್ಭದಲ್ಲಿ ತಾಲಿಬಾನಿ ಮುಖಂಡರು ಪ್ರತಿಕ್ರಿಯಿಸಿದ್ದು 'ದೇಶದಲ್ಲಿ ಕ್ರಿಕೆಟ್ ಚಟುವಟಿಕೆ ಯಾವುದೇ ಅಡೆ ತಡೆಯಿಲ್ಲದೆ ಮುಂದಿವರಿಯಲಿದೆ. ಹಿಂದಿನಂತೆಯೇ ಕ್ರಿಕೆಟ್ ಚಟುವಟಿಕೆ ಸಾಗಲಿವೆ. ದೇಶದಲ್ಲಿ ಕ್ರಿಕೆಟ್ ಚಟುವಟಿಗೆ ಸ್ಥಗಿತಗೊಳಿಸುವ ಸಂಬಂಧ ಇದುವರೆಗೂ ಯಾವುದೇ ಸೂಚನೆ ಅಥವಾ ಆದೇಶ ಹೊರಡಿಸಿಲ್ಲ. ಹೀಗಾಗಿ ಆಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಯಾವುದೇ ಆತಂಕವಿಲ್ಲ" ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಾಗಿದೆ
ಕಳೆದ ಸೋಮವಾರ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಹಮೀದ್ ಶಿನ್ವರಿ ಪ್ರತಿಕ್ರಿಯೆ ನೀಡಿದ್ದರು. ಈ ಸಂದರ್ಭದಲ್ಲಿ ಅವರು "ತಾಲಿಬಾನಿಗಳು ಕ್ರಿಕೆಟನ್ನು ಪ್ರೀತಿಸುತ್ತಾರೆ. ಅವರು ನಮಗೆ ಆರಂಭದಿಮದಲೂ ಬೆಂಬಲವನ್ನು ನೀಡಿಕೊಂಡು ಬಂದಿದ್ದಾರೆ. ಅವರು ನಮ್ಮ ಯಾವುದೇ ಚಟುವಟಿಕೆಗಳಿಗೆ ಮಧ್ಯಪ್ರವೇಶಿಸಲಾರರು. ಅವರ ಮಧ್ಯ ಪ್ರವೇಶವನ್ನು ನಾನು ಕಂಡಿಲ್ಲ. ಅವರಿಂದ ಬೆಂಬಲವನ್ನು ಪಡೆಯುವ ನಿರೀಕ್ಷೆಯಲ್ಲಿದ್ದು ನಮ್ಮ ಕ್ರಿಕೆಟ್ ಮುಂದುವರಿಯಲಿದೆ. ನಾವು ಸಕ್ರಿಯ ಮುಖ್ಯಸ್ಥರನ್ನು ನೇಮಕ ಮಾಡಿಕೊಳ್ಳಲಿದ್ದು ಮುಂದಿನ ಆದೇಶದವರೆಗೆ ನಾನು ಸಿಇಒ ಆಗಿ ಮುಂದುವರಿಯಲಿದ್ದೇನೆ. ಈ ಮೂಲಕ ನಾವು ಕ್ರಿಕೆಟ್ ತಾಲಿಬಾನ್ ಅವಧಿಯನ್ನು ಮತ್ತಷ್ಟು ಮಿಂಚಲಿದೆ ಎಂದು ಹೇಳಬಹುದು ಎಂದು ಹೇಳಿಕೆಯನ್ನು ನೀಡಿದ್ದರು.
ಅಫ್ಘಾನಿಸ್ತಾನದಲ್ಲಿ ಸಾಕಷ್ಟು ಬದಲಾವನೆಗಳು ಸಂಭವಿಸುತ್ತಿದೆ. ಇದೇ ಸಂದರ್ಭದಲ್ಲಿ ಕಾಬೂಲ್‌ನಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯಥ್ಯಯಗಳು ಉಂಟಾಗಿದ್ದು ಲಭ್ಯತೆಯ ಮೇಲೆ ಪರಿಣಾಮ ಬೀರಿದೆ. ಆದರೆ ನಮಗೆ ಹಾರಾಟಕ್ಕೆ ವಿಮಾನ ಲಭ್ಯವಾಗುತ್ತಿದ್ದಂತೆಯೇ ಸಾಧ್ಯವಾದಷ್ಟು ಶೀಘ್ರವಾಗಿ ನಾವು ತೆರಳಲಿದ್ದೇವೆ. ನಮ್ಮ ಆಟಗಾರರು ಕಾಬೂಲ್‌ನಲ್ಲಿಯೇ ಲಭ್ಯವಿದ್ದು ಈಗ ಅವರು ಸರಣಿಗಾಗಿ ಸಿದ್ಧತೆಯನ್ನು ನಡೆಸುತ್ತಿದ್ದಾರೆ" ಎಂದು ಶಿನ್ವಾರಿ ತಿಳಿಸಿದ್ದಾರೆ.
ಪಾಕಿಸ್ತಾನ ವಿರುದ್ಧದ ಸರಣಿಗಾಗಿ ಅಪ್ಘಾನಿಸ್ತಾನ ತಂಡ ಮುಂದಿನ ನಾಲ್ಕೈದು ದಿನಗಳಲ್ಲಿ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. "ಮುಂದಿನ ನಾಲ್ಕು ದಿನಗಳಲ್ಲಿ ನಮ್ಮ ತಂಡ ಅಪ್ಘಾನಿಸ್ತಾನದಿಂದ ತೆರಳುವ ಸಾಧ್ಯತೆಯಿದೆ. ಈ ವಿಚಾರವಾಗಿ ನಾವು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಜೊತೆಗೆ ಸಂಪರ್ಕದಲ್ಲಿದ್ದು ಮಾಹಿತಿಯನ್ನು ನೀಡಿದ್ದೇವೆ. ಈ ಸಂದರ್ಭದಲ್ಲಿ ಸರಣಿಯನ್ನು ಆಯೋಜಿಸಲು ಒಪ್ಪಿಕೊಂಡಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ನಾವು ಧನ್ಯವಾದವನ್ನು ಸಲ್ಲಿಸುತ್ತಿದ್ದು ಆಭಾರಿಯಾಗಿದ್ದೇವೆ" ಎಂದಿದ್ದಾರೆ. ಈ ಸರಣಿಯ ಎಲ್ಲಾ ಪಂದ್ಯಗಳು ಕೂಡ ಹಂಬಂತೋಟ ಕ್ರೀಡಾಂಗಣದಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications