T20 World Cup 2024: ಅಫ್ಘಾನಿಸ್ತಾನದ ಗೆಲುವಿಗೆ ತಾಲಿಬಾನ್ ಸಂತಸ; ರಶೀದ್ ಖಾನ್‌ಗೆ ವೀಡಿಯೊ ಕರೆ!
ಜೂನ್ 26 ಬುಧವಾರ, ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ 2024ರಲ್ಲಿ ಅಫ್ಘಾನಿಸ್ತಾನ ತಂಡ ತನ್ನ ಅದ್ಭುತ ಪ್ರದರ್ಶನದ ಮೂಲಕ ಸಂಚಲನ ಮೂಡಿಸಿದೆ.
ರಶೀದ್ ಖಾನ್ ಮುನ್ನೆಡೆಸುತ್ತಿರುವ ಅಫ್ಘಾನಿಸ್ತಾನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಂತಹ ಬಲಿಷ್ಠ ತಂಡಗಳನ್ನು ಸೋಲಿಸಿದ್ದಲ್ಲದೆ, ಟಿ20 ವಿಶ್ವಕಪ್‌ನಲ್ಲಿ ತಮ್ಮ ಮೊದಲ ಸೆಮಿಫೈನಲ್ ಪಂದ್ಯವಾಡಲು ಸಜ್ಜಾಗಿದೆ.

ಟೂರ್ನಿಯುದಕ್ಕೂ ಒಗ್ಗಟ್ಟಿನಿಂದ ತಂಡಕ್ಕೆ ಯಶಸ್ಸು ತಂದು ಕೊಟ್ಟಿರುವ ಅಫ್ಘಾನ್ ಬೌಲಿಂಗ್ ವಿಭಾಗಕ್ಕೆ ಈ ಎಲ್ಲಾ ಪ್ರಶಂಸೆಗಳು ಸಲ್ಲುತ್ತವೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಅಫ್ಘಾನಿಸ್ತಾನ ತಂಡಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಇದಲ್ಲದೆ ವಿಶ್ವ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಭಾರತದ ಮಾಜಿ ಆರಂಭಿಕ ಬ್ಯಾಟರ್ ವಾಸಿಂ ಜಾಫರ್ ಅವರು ಸಹಾ ಅಫ್ಘಾನಿಸ್ತಾನ ತಂಡವನ್ನು ಶ್ಲಾಘಿಸಿದ್ದಾರೆ. "ವಿಶ್ವಕಪ್‌ನಲ್ಲಿ ಇದುವರೆಗೆ ಪ್ರದರ್ಶಿಸಿದ ರೀತಿಗೆ ಅಫ್ಘಾನಿಸ್ತಾನವು ಗೌರವಕ್ಕೆ ಅರ್ಹವಾಗಿದೆ" ಎಂದು ವಾಸಿಂ ಜಾಫರ್ ಬರೆದುಕೊಂಡಿದ್ದಾರೆ.
ಮಂಗಳವಾರ ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ಗೆಲ್ಲುತ್ತಿದ್ದಂತೆ ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಆರ್ಹತೆ ಪಡೆಯಿತು. ಇದಾದ ಬಳಿಕ ಅಫ್ಘಾನಿಸ್ತಾನವನ್ನು ತನ್ನ ಕಪಿ ಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡು ಆಳ್ವಿಕೆ ನಡೆಸುತ್ತಿರುವ ಭಯೋತ್ಪಾದಕ ಸಂಘಟನೆಯಾದ ತಾಲಿಬಾನ್ ಸರ್ಕಾರವು ನಾಯಕ ರಶೀದ್ ಖಾನ್ ಮತ್ತು ತಂಡದ ಸಾಧನೆಗೆ ಮೆಚ್ಚುಗೆ ಸಲ್ಲಿಸಿದೆ.
ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರಿಗೆ ವೀಡಿಯೊ ಕರೆ ಮೂಲಕ ಅಭಿನಂದಿಸಿದ್ದಾರೆ. ವೀಡಿಯೊ ಕರೆಯಲ್ಲಿ ಇಬ್ಬರೂ ಪಾಷ್ಟೋ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಂಗ್ಲಾದೇಶ ವಿರುದ್ಧ ಗೆಲುವಿನ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಭಾವುಕರಾಗಿ ಮಾತನಾಡಿದ ರಶೀದ್, ಸೆಮಿಫೈನಲ್ ಪಂದ್ಯವು ಅಫ್ಘಾನಿಸ್ತಾನದ ಯುವಕರಿಗೆ ಉತ್ತಮ ಸ್ಫೂರ್ತಿಯಾಗಲಿದೆ. ಅಫ್ಘಾನಿಸ್ತಾನ ತಂಡ ಚೊಚ್ಚಲ ಬಾರಿಗೆ ಸೆಮಿಫೈನಲ್ ತಲುಪಿದೆ.
19 ವರ್ಷದೊಳಗಿನವರ ಹಂತದಲ್ಲಿ ಈ ಸಾಧನೆ ಮಾಡಿದ್ದೇವೆ. ಆದರೆ ಈ ಮಟ್ಟದಲ್ಲಿ ಮಾಡಿಲ್ಲ. ಸೂಪರ್-8 ರಲ್ಲಿ ನಾವು ಮೊದಲ ಬಾರಿಗೆ ಭಾಗವಹಿಸಿದ್ದೇವೆ ಮತ್ತು ನಂತರ ಸೆಮಿಫೈನಲ್ ತಲುಪಿದ್ದೇವೆ ಎಂದು ಖುಷಿ ಹಂಚಿಕೊಂಡಿದ್ದಾರೆ.
ಜೂನ್ 27 ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಮೊದಲ ಬಾರಿಗೆ ಟಿ20 ವಿಶ್ವಕಪ್‌ನ ಫೈನಲ್‌ಗೆ ಪ್ರವೇಶಿಸುವುದು ಅಫ್ಘಾನಿಸ್ತಾನದ ಗುರಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications