T20 World Cup ಸೆಮಿಫೈನಲ್ ತಲುಪಿದ ದೇಶದಲ್ಲಿ ಕ್ರಿಕೆಟ್ ಬ್ಯಾನ್?
ವಿಶ್ವದಲ್ಲಿ ಕ್ರಿಕೆಟ್ ಕ್ರೀಡೆಯನ್ನು ಬೆಳೆಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಶ್ರಮಿಸುತ್ತಿದೆ. ಈ ನಡುವೆ ಹಲವು ದೇಶಗಳಲ್ಲಿ ಕ್ರಿಕೆಟ್ ಬೆಳವಣಿಗೆ ಕಂಡಿದೆ. ಇನ್ನು ಕಾಣುತ್ತಿದೆ. ಆದರೆ ಇಲ್ಲೊಂದು ದೇಶದಲ್ಲಿ ಕ್ರಿಕೆಟ್ ಈಗಾಗಲೇ ಹೆಸರು ಮಾಡಿದ್ದು, ಈ ದೇಶದಲ್ಲಿ ಈ ಕ್ರೀಡೆಯನ್ನು ಬ್ಯಾನ್ ಮಾಡುವ ಊಹಾಪೋಹಗಳು ಎದ್ದಿವೆ.
ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಆದಾ ಛಾಪೂ ಮೂಡಿಸಿರುವ ತಂಡ ಅಫ್ಘಾನಿಸ್ತಾನ. ಇತ್ತೀಚಿಗೆ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿ ಸಂಚಲನ ಮೂಡಿಸಿತ್ತು. ಈಗ ಈ ದೇಶದಲ್ಲಿ ಕ್ರಿಕೆಟ್ ಬ್ಯಾನ್ ಮಾಡುವ ಬಗ್ಗೆ ಊಹಾಪೋಹಗಳು ಎದ್ದಿವೆ. ಆಫ್ಘಾನ್ ತನ್ನ ದೇಶದಲ್ಲಿ ಕ್ರಿಕೆಟ್ ಅನ್ನು ಸಂಪೂರ್ಣವಾಗಿ ನಿಷೇಧಿಸಲು ತಯಾರಿ ನಡೆಸುತ್ತಿದೆ.

ಆಫ್ಗನ್‌ನಲ್ಲಿ ಕ್ರಿಕೆಟ್ ಬ್ಯಾನ್
ಅಫ್ಘಾನಿಸ್ತಾನ ತಂಡ ಈಗ ಹಲವು ದೊಡ್ಡ ದೊಡ್ಡ ತಂಡಗಳ ವಿರುದ್ಧ ಕ್ರಿಕೆಟ್ ಆಡುತ್ತಿದೆ. ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ್ದ ಅಫ್ಘಾನಿಸ್ತಾನ, ಟಿ20 ವಿಶ್ವಕಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿತ್ತು. ಈ ತಂಡ ಹಲವು ಸ್ಟಾರ್ ಆಟಗಾರರಿಗೆ ಅವಕಾಶ ನೀಡಿದೆ. ವಿಶ್ವದ ಸ್ಟಾರ್ ಸ್ಪಿನ್ ಬೌಲರ್ ರಶೀದ್ ಖಾನ್, ಗುರ್ಬಾಜ್, ನವೀನ್ ಉಲ್ ಹಕ್ ಮತ್ತು ಮೊಹಮ್ಮದ್ ನಬಿ ಕ್ರಿಕೆಟ್ ಅಂಗಳದಲ್ಲಿ ಹೆಸರು ಮಾಡಿದ್ದಾರೆ.
ಈ ಕ್ರಿಕೆಟಿಗರು ವಿಶ್ವದಾದ್ಯಂತ ಕ್ರಿಕೆಟ್ ಲೀಗ್‌ಗಳಲ್ಲಿ ಆಡುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ತಾಲಿಬಾನ್ ಸರ್ಕಾರ ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಅನ್ನು ಸಂಪೂರ್ಣವಾಗಿ ನಿಷೇಧಿಸಬಹುದು ಎಂಬ ವರದಿಗಳು ಕೇಳಿ ಬರುತ್ತಿವೆ. ಇಷ್ಟೇ ಅಲ್ಲ, ತಾಲಿಬಾನ್‌ನ ಪರಮೋಚ್ಚ ನಾಯಕ ದೇಶದಲ್ಲಿ ಕ್ರಿಕೆಟ್ ನಿಷೇಧಿಸಲು ಆದೇಶಿಸಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿದೆ. ಆದರೆ, ಈ ಬಗ್ಗೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಭಾರತ ಪ್ರವಾಸದಲ್ಲಿರುವ ಆಫ್ಘಾನ್
ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಭಾರತ ಪ್ರವಾಸದಲ್ಲಿದೆ. ಇಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ಈ ಪಂದ್ಯ ಗ್ರೇಟರ್ ನೋಯ್ಡಾದಲ್ಲಿ ನಡೆಯಬೇಕಿತ್ತು. ಆದರೆ ಸತತ ಮಳೆಯಿಂದಾಗ ನಾಲ್ಕು ದಿನಗಳ ಪಂದ್ಯ ರದ್ದಾಗಿದೆ. ಒಂದೇ ಒಂದು ಎಸೆತವನ್ನು ಸಹ ಈ ಟೆಸ್ಟ್ ಕಂಡಿಲ್ಲ. ಮಳೆಯಿಂದಾಗಿ ಅಫ್ಘಾನಿಸ್ತಾನ ತಂಡ ನಿರಾಸೆ ಅನುಭವಿಸಿದೆ. ಕಿವೀಸ್ ವಿರುದ್ಧ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಲು ಅಫ್ಘಾನಿಸ್ತಾನ ಸಂಪೂರ್ಣ ಸಿದ್ಧವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications