ಪಾಕಿಸ್ತಾನ ವಿರುದ್ಧ ರೋಚಕ ಪಂದ್ಯ ಗೆದ್ದ ಬಾಂಗ್ಲಾದೇಶ
ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಡುವಣ ಮೂರನೇ ಏಕದಿನ ಪಂದ್ಯ ರೋಚಕತೆಯಿಂದ ಕೂಡಿತ್ತು. ಈ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾ ಕೊನೆಯಲ್ಲಿ ಬಿಗುವಿನ ದಾಳಿ ನಡೆಸಿತು. ಮೂರು ಪಂದ್ಯಗಳ ಸರಣಿಯನ್ನು ಬಾಂಗ್ಲಾ 2-1 ರಿಂದ ಗೆದ್ದು ಬೀಗಿತು.
ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಫೀಲ್ಡಿಂಗ್ ಮಾಡಲು ಮುಂದಾಯಿತು. ಬಾಂಗ್ಲಾ ಪರ ಆರಂಭಿಕರಾದ ಸೈಫ್ ಹಸನ್ (36) ಹಾಗೂ ತಂಜಿದ್ ಹಸನ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೊಡಿ 18.1 ಓವರ್‌ಗಳಲ್ಲಿ 105 ರನ್‌ಗಳ ಜೊತೆಯಾಟ ನೀಡಿತು. ನಜ್ಮುಲ್ ಹೊಸೇನ್ ಶಾಂತೊ 3 ಬೌಂಡರಿ ನೆರವಿನಿಂದ 27 ರನ್ ಬಾರಿಸಿ ಔಟ್ ಆದರು.

ಪಾಕಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶದ ಆರಂಭಿಕ ತಂಜಿದ್ ಹಸನ್ ಚೊಚ್ಚಲ ಏಕದಿನ ಶತಕ ಬಾರಿಸಲು ಯಶಸ್ವಿಯಾದರು. ಇವರು 107 ಎಸೆತಗಳಲ್ಲಿ 6 ಬೌಂಡರಿಗಳು ಮತ್ತು 7 ಸಿಕ್ಸರ್‌ಗಳು ಸೇರಿದಂತೆ 107 ರನ್ ಗಳಿಸಿದರು. ಇದರೊಂದಿಗೆ, ತಂಜಿದ್ ಹಸನ್ ತಮೀಮ್ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬಾಂಗ್ಲಾ ಬ್ಯಾಟರ್ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಈ ದಾಖಲೆ ಸೌಮ್ಯಾ ಸರ್ಕಾರ ಹೆಸರಿನಲ್ಲಿತ್ತು.
ವಿಕೆಟ್ ಕೀಪರ್ ಲಿಟನ್ ದಾಸ್ 41, ತೋಹಿದ್ ಹೃದಯ್ ಅಜೇಯ 48 ರನ್ ಸಿಡಿಸಿದ್ದಾರೆ. ಅಂತಿಮವಾಗಿ ಬಾಂಗ್ಲಾದೇಶ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 290 ರನ್ ಸೇರಿಸಿತು.
ಸಲ್ಮಾನ್ ಅಲಿ ಅಘಾ ಶತಕ
ಪಾಕಿಸ್ತಾನ ತಂಡದ ಪರ ಯಾವೊಬ್ಬ ಬ್ಯಾಟರ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಸಲ್ಮಾನ್ ಅಲಿ ಅಘಾ ಅವರನ್ನು ಹೊರತು ಪಡಿಸಿ ಉಳಿದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. 32 ವರ್ಷದ ಸಲ್ಮಾನ್ ಅಲಿ ತಮ್ಮ ಏಕದಿನ ವೃತ್ತಿ ಜೀವನದ 2ನೇ ಶತಕ ಬಾರಿಸಿದರು. ಸಲ್ಮಾನ್ 98 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ನೆರವಿನಿಂದ 106 ರನ್ ಸಿಡಿಸಿದರು. ಅಬ್ದುಲ್ ಸಮಾದ್ 34, ಶಾನ್ ಮಸೂದ್ 38, ಶಾಹೀನ್ ಶಾ ಅಫ್ರಿದಿ 37 ರನ್ ಸಿಡಿಸಿದರು. ಅಂತಿಮವಾಗಿ ಪಾಕ್ 50 ಓವರ್‌ಗಳಲ್ಲಿ 279 ರನ್‌ಗೆ ಆಲೌಟ್ ಆಯಿತು.
ಬಾಂಗ್ಲಾದೇಶದ ಟಸ್ಕಿನ್ ಅಹ್ಮದ್ 4, ವೇಗದ ಬೌಲರ್ ಮುಸ್ತಾಫಿಜುರ್ ರಹಮಾನ್ 3, ನಹೀದ್ ರಾಣಾ 2 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications