IPL 2023: ಜಿಯೋ ಸಿನಿಮಾದಲ್ಲಿ ಮೊದಲ ವಾರಾಂತ್ಯ ಐಪಿಎಲ್ ಪಂದ್ಯಗಳ ವೀಕ್ಷಣೆ ಸಂಖ್ಯೆ ಎಷ್ಟು?
2023ರ ಟಾಟಾ ಐಪಿಎಲ್ ಅಧಿಕೃತ ಡಿಜಿಟಲ್ ಸ್ಟ್ರೀಮಿಂಗ್ ಪಾಲುದಾರ ಆದ ಜಿಯೋ ಸಿನಿಮಾಗೆ ಮೊದಲ ವಾರಾಂತ್ಯದಲ್ಲಿ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಜಿಯೋ ಸಿನಿಮಾದಲ್ಲಿ ಮೊದಲ ವಾರಾಂತ್ಯದ ವಿಡಿಯೋ ವೀಕ್ಷಕರ ಸಂಖ್ಯೆಯು ಡಿಜಿಟಲ್‌ನಲ್ಲಿ ಟಾಟಾ ಐಪಿಎಲ್‌ನ ಕೊನೆಯ ಋತುವಿನಲ್ಲಿ ಮಾಡಿದ್ದ ದಾಖಲೆಯನ್ನು ಮೀರಿಸಿದೆ. ಅಲ್ಲದೇ 2022ರ ಐಸಿಸಿ ಟಿ20 ವಿಶ್ವಕಪ್‌ಗಿಂತಲೂ ಅಧಿಕವಾಗಿದೆ.
ಪ್ರತಿ ಪಂದ್ಯಕ್ಕೆ ಪ್ರತಿ ವೀಕ್ಷಕರು ಸರಾಸರಿ ಸಮಯ 57 ನಿಮಿಷಗಳನ್ನು ಜಿಯೋ ಸಿನಿಮಾಗೆ ಮೀಸಲಿಟ್ಟಿದ್ದಾರೆ. ಕಳೆದ ಋತುವಿನ ಮೊದಲ ವಾರಾಂತ್ಯಕ್ಕೆ ಹೋಲಿಸಿದರೆ ಜಿಯೋ ಸಿನಿಮಾದಲ್ಲಿ ಪ್ರತಿ ಪಂದ್ಯಕ್ಕೆ ಪ್ರತಿ ವೀಕ್ಷಕ ಕಳೆದ ಸಮಯವು ಶೇ.60ರಷ್ಟು ಹೆಚ್ಚಾಗಿದೆ.

ಮೊದಲ ವಾರಾಂತ್ಯದಲ್ಲಿ 2023ರ ಐಪಿಎಲ್ ಪಂದ್ಯಗಳನ್ನು ಜಿಯೋ ಸಿನಿಮಾದಲ್ಲಿ 147 ಕೋಟಿ ವಿಡಿಯೋ ವೀಕ್ಷಣೆಗಳು ಆಗಿದ್ದು, ಡಿಜಿಟಲ್‌ನಲ್ಲಿ ಟಾಟಾ ಐಪಿಎಲ್‌ಗಾಗಿ ಅತಿ ಹೆಚ್ಚು ಆರಂಭಿಕ ವಾರಾಂತ್ಯದ ದಾಖಲೆಯಾಗಿದೆ.
"ಈ ಸಂಖ್ಯೆಗಳು ಅಸಾಧಾರಣವಾಗಿದೆ ಮತ್ತು ದೇಶದಾದ್ಯಂತ ಡಿಜಿಟಲ್ ಕ್ರಾಂತಿಗೆ ಸಾಕ್ಷಿಯಾಗಿದೆ. ಪಾರಂಪರಿಕ ಸೇವೆಗಳಿಗಿಂತ ಭಿನ್ನವಾಗಿ, ಡಿಜಿಟಲ್‌ನಲ್ಲಿನ ಜನರ ವೀಕ್ಷಣೆಯು ನಿಖರ ಸಂಖ್ಯೆಯನ್ನು ಆಧರಿಸಿದೆ. ಈ ವಾರದ ಜಿಯೋ ಸಿನಿಮಾದ ಕಾರ್ಯಕ್ಷಮತೆಯು ಅದಕ್ಕೆ ದೊಡ್ಡ ಸಾಕ್ಷಿಯಾಗಿದೆ," ಎಂದು ವಯಾಕಾಮ್ 18 ಸ್ಪೋರ್ಟ್ಸ್ ಸಿಇಒ ಅನಿಲ್ ಜಯರಾಜ್ ಹೇಳಿದ್ದಾರೆ.
"ಟಾಟಾ ಐಪಿಎಲ್ 2023ರ ಆರಂಭಿಕ ವಾರಾಂತ್ಯದಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ, ಭೋಜ್‌ಪುರಿ, ಪಂಜಾಬಿ, ಒರಿಯಾ ಮತ್ತು ಗುಜರಾತಿ ಸೇರಿದಂತೆ ಐಪಿಎಲ್ ಅನ್ನು ಹೆಚ್ಚು ಪ್ರವೇಶಿಸಬಹುದಾದ ಭಾಷೆಗಳಲ್ಲಿ ಪ್ರಸಾರ ಮಾಡಲಾಗಿದೆ. ಜಿಯೋ ಸಿನಿಮಾದ ವೀಕ್ಷಕರು ತೋರಿಸಿದ ನಂಬಿಕೆಗೆ ಧನ್ಯವಾದಗಳು. ಪ್ರತಿಯೊಬ್ಬ ಅಭಿಮಾನಿಯ ಟಾಟಾ ಐಪಿಎಲ್ ವೀಕ್ಷಣೆಯ ಅನುಭವವನ್ನು ಹೆಚ್ಚಿಸಲು ನಾವು ಶ್ರಮಿಸುವ ಈ ಪ್ರಯಾಣದಲ್ಲಿ ನಮ್ಮೊಂದಿಗೆ ಎಲ್ಲಾ ಪ್ರಾಯೋಜಕರು, ಜಾಹೀರಾತುದಾರರು ಮತ್ತು ಪಾಲುದಾರರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ," ಎಂದು ಅನಿಲ್ ಜಯರಾಜ್ ತಿಳಿಸಿದ್ದಾರೆ.

ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ನಡುವಿನ ಉದ್ಘಾಟನಾ ಪಂದ್ಯದೊಂದಿಗೆ ಜಿಯೋ ಸಿನಿಮಾ ವೀಕ್ಷಣೆ ಆರಂಭವಾಗಿದ್ದು, ಒಂದೇ ಸಮಯದಲ್ಲಿ 1.6 ಕೋಟಿ ಗರಿಷ್ಠ ವೀಕ್ಷಣೆ ದಾಖಲೆ ಸಾಧಿಸಿತು. ಜೊತೆಗೆ ಜಿಯೋ ಸಿನಿಮಾ 2.5 ಕೋಟಿಗಿಂತ ಹೆಚ್ಚು ಡೌನ್‌ಲೋಡ್‌ಗಳು, ನೋಂದಣಿ ಆಗಿದೆ. ಒಂದೇ ದಿನದಲ್ಲಿ ಹೆಚ್ಚು ಇನ್‌ಸ್ಟಾಲ್ ಆದ ಅಪ್ಲಿಕೇಷನ್‌ನ ದಾಖಲೆಯಾಗಿದೆ.
ಜಿಯೋ ಸಿನಿಮಾದ ವ್ಯಾಪಕ ಅಭಿಮಾನಿಗಳಿಗೆ 4ಕೆ ಫೀಡ್, 12 ಭಾಷೆಯಲ್ಲಿ ಕವರೇಜ್, 16 ಅನನ್ಯ ಫೀಡ್‌ಗಳು, ಹೈಪ್ ಮೋಡ್ ಮತ್ತು ಮಲ್ಟಿ-ಕ್ಯಾಮ್ ಸೆಟಪ್‌ನಂತಹ ವಿಶಿಷ್ಟ ವೈಶಿಷ್ಟ್ಯಗಳನ್ನು ನೀಡುವುದನ್ನು ಮುಂದುವರೆಸಿದೆ. ಆರಂಭಿಕ ವಾರಾಂತ್ಯದಲ್ಲಿ ಅಭೂತಪೂರ್ವ ಪ್ರತಿಕ್ರಿಯೆಯ ನಂತರ, ಅಭಿಮಾನಿಗಳನ್ನು ಸಂತೋಷಪಡಿಸಲು ಜಿಯೋ ಸಿನಿಮಾ ಪ್ರತಿ ವಾರ ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ.
ಭಾರತದ ನೆಚ್ಚಿನ ಕ್ರೀಡಾ ಹಬ್ಬವನ್ನು ಇಂಗ್ಲಿಷ್, ಹಿಂದಿ, ಕನ್ನಡ, ಮರಾಠಿ, ಗುಜರಾತಿ, ಭೋಜ್‌ಪುರಿ, ಪಂಜಾಬಿ, ಒರಿಯಾ, ಬೆಂಗಾಲಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ 12 ಭಾಷೆಗಳಲ್ಲಿ ಜಿಯೋ ಸಿನಿಮಾಗೆ ವೀಕ್ಷಕರನ್ನು ತರಲಾಗುತ್ತಿದೆ.
ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ 2023ರ ಆವೃತ್ತಿಗೆ ಮುನ್ನ ಜಿಯೋ ಸಿನಿಮಾ ಜೊತೆಗೆ ವಿಶೇಷ ಪಾಲುದಾರಿಕೆಯನ್ನು ಘೋಷಿಸಿದವು.
ಜಾಗತಿಕ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್, ಭಾರತ ತಂಡದ ಮಾಜಿ ನಾಯಕ ಮತ್ತು ನಾಲ್ಕು ಬಾರಿ ಐಪಿಎಲ್ ವಿಜೇತ ಎಂಎಸ್ ಧೋನಿ, ವಿಶ್ವ ನಂ.1 ಟಿ20 ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಮತ್ತು ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರು ತಮ್ಮ ವಿಶ್ವ ದರ್ಜೆಯ, ಡಿಜಿಟಲ್ ಟಾಟಾ ಐಪಿಎಲ್ ಪ್ರಸಾರವನ್ನು ಹೆಚ್ಚಿಸಲು ಜಿಯೋ ಸಿನಿಮಾ ಜೊತೆ ಕೈಜೋಡಿಸಿದ್ದಾರೆ.
ಜಿಯೋ ಸಿನಿಮಾ (iOS ಮತ್ತು Android) ಅನ್ನು ಡೌನ್ಲೋಡ್ ಮಾಡುವ ಮೂಲಕ ವೀಕ್ಷಕರು ತಮ್ಮ ಆದ್ಯತೆಯ ಕ್ರೀಡೆಗಳನ್ನು ವೀಕ್ಷಿಸುವುದನ್ನು ಮುಂದುವರಿಸಬಹುದು. ಇತ್ತೀಚಿನ ಅಪ್‌ಡೇಟ್ಸ್, ಸುದ್ದಿ, ಸ್ಕೋರ್‌ಗಳು ಮತ್ತು ವೀಡಿಯೊಗಳಿಗಾಗಿ ಅಭಿಮಾನಿಗಳು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟ್ಟರ್ ಮತ್ತು ಯೂಟ್ಯೂಬ್‌ನಲ್ಲಿ ಸ್ಪೋರ್ಟ್ಸ್18 ಅನ್ನು ಅನುಸರಿಸಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications