Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MS ಧೋನಿಯ ಆ ಒಂದು ಸಲಹೆ ನನ್ನ ಆಟವನ್ನೇ ಬದಲಿಸಿಬಿಟ್ಟಿತು: ಹಾರ್ದಿಕ್ ಪಾಂಡ್ಯ

Hardik pandya

ಭಾರತದ ಮಾಜಿ ನಾಯಕ ಮತ್ತು ಲೆಜೆಂಡರಿ ಆಟಗಾರ ಮಹೇಂದ್ರ ಸಿಂಗ್ ಧೋನಿಯ ಆ ಒಂದು ಸಲಹೆ ನನಗೆ ಇಲ್ಲಿಯವರೆಗೆ ಸಹಾಯ ಮಾಡಿದೆ ಎಂದು ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಅಕ್ಟೋಬರ್ 23 ರಂದು ಭಾರತ ತನ್ನ ಮೊದಲ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಶುಭಾರಂಭ ಮಾಡುವ ಕನಸನ್ನು ಹೊತ್ತಿದೆ. ಹೀಗಾಗಿಯೇ 15 ವರ್ಷಗಳ ನಂತರ ಮತ್ತೊಮ್ಮೆ ಟ್ರೋಫಿ ಗೆಲ್ಲಲು ಭಾರತೀಯ ಆಟಗಾರರು ಕಠಿಣ ತಾಲೀಮು ನಡೆಸುತ್ತಿದ್ದಾರೆ.

ಈ ವರ್ಷ ಭಾರತ ತಂಡದಲ್ಲಿ ಹಲವು ಆಟಗಾರರು ಕಂಬ್ಯಾಕ್ ಮಾಡಿರುವುದು ಒಳ್ಳೆಯ ಸಂಗತಿಯಾಗಿದೆ. ಅವರಲ್ಲಿ ಒಬ್ಬರು ಹಾರ್ದಿಕ್ ಪಾಂಡ್ಯ. ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಸಂಪೂರ್ಣ ಫಿಟ್‌ ಆಗಿಲ್ಲದ ಪಾಂಡ್ಯ ಈ ವರ್ಷ ಅದ್ಭುತ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಲ್ಲೂ ಅದ್ಭುತ ಆಟವಾಡುತ್ತಿದ್ದಾರೆ.

ಈ ವೇಳೆ ಪಾಂಡ್ಯ ಈ ಬಾರಿಯ ಟಿ20 ವಿಶ್ವಕಪ್ ಎದುರಿಸುವ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ''ನನ್ನ ಫಿಟ್ನೆಸ್ ಗಣನೀಯವಾಗಿ ಸುಧಾರಿಸಿದೆ ಎಂದು ಅವರು ಹೇಳಿದರು. ನನಗೆ, ನಾನು ಎಷ್ಟು ರನ್ ಗಳಿಸುತ್ತೇನೆ ಎಂಬುದು ಮುಖ್ಯವಲ್ಲ, ನಾನು ಯಾವ ವಾತಾವರಣದಲ್ಲಿ ಹೇಗೆ ಪ್ರದರ್ಶನ ನೀಡುತ್ತೇನೆ ಎಂಬುದು ಮುಖ್ಯ. ಇದಕ್ಕಾಗಿ ನಾನು ಇವತ್ತಿನವರೆಗೂ ಧೋನಿ ನೀಡಿದ ಸಲಹೆಯನ್ನು ಪಾಲಿಸುತ್ತಿದ್ದೇನೆ'' ಎಂದಿದ್ದಾರೆ.

''ಸ್ಕೋರ್ ಬೋರ್ಡ್ ನೋಡಿ, ಅದಕ್ಕೆ ತಕ್ಕಂತೆ ಆಟವಾಡಿ, ಆಗ ತಂಡಕ್ಕೆ ಏನು ಬೇಕು ಎಂಬುದು ಗೊತ್ತಾಗುತ್ತದೆ, ಅಂದುಕೊಂಡಂತೆ ಆಡಬೇಡಿ ಎಂದು ಧೋನಿ ಒಮ್ಮೆ ನನಗೆ ಹೇಳಿದ್ದರು. ಅದರಂತೆ ಇಂದಿನವರೆಗೂ ಕೆಲಸ ಮಾಡುತ್ತಿದ್ದೇನೆ. ಅಭ್ಯಾಸ ಪಂದ್ಯದಲ್ಲೂ ನಾನು ಗಳಿಸಿದ್ದು 27 ರನ್ ಮಾತ್ರ. ಆದರೆ ನಾನು ಬ್ಯಾಟ್‌ನ ಮಧ್ಯಭಾಗದಲ್ಲಿ 21 ಎಸೆತಗಳನ್ನು ಹೊಡೆದೆ. ಇದೀಗ ನನಗೆ ಇದು ಅತ್ಯುತ್ತಮ ವಿಷಯವಾಗಿದೆ'' ಎಂದಿದ್ದಾರೆ.

'' ಅದೇ ರೀತಿ ನಾನೀಗ ಫೀಲ್ಡಿಂಗ್ ಮೇಲೆ ಹೆಚ್ಚು ಗಮನ ಹರಿಸಲಿದ್ದೇನೆ. ನಾನು ಸ್ವಭಾವತಃ ಫೀಲ್ಡರ್. ನಾನು ಕಠಿಣ ಕ್ಯಾಚ್‌ಗಳನ್ನು ಸಹ ತೆಗೆದುಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ಈ ಸರಣಿಯಲ್ಲಿ ಹೇಗಾದರೂ ಮಾಡಿ ನನ್ನ ಜೀವನದ ಅತ್ಯುತ್ತಮ ಕ್ಯಾಚ್ ಹಿಡಿಯುವ ಗುರಿ ಹೊಂದಿದ್ದೇನೆ'' ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ಸದ್ಯ ಹಾಟ್ ಫಾರ್ಮ್‌ನಲ್ಲಿದ್ದು ಟೀಂ ಇಂಡಿಯಾದ ಎಕ್ಸ್ ಫ್ಯಾಕ್ಟರ್ ಆಗಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಟೀಂ ಇಂಡಿಯಾ ಲೈನಪ್ ಅನ್ನು ಬ್ಯಾಲೆನ್ಸ್ ಮಾಡಿರುವ ಈ ಕ್ರಿಕೆಟಿಗ ಭಾರತದ ಪ್ರಮುಖ ಪ್ಲೇಯರ್ ಆಗಿದ್ದಾರೆ.

Story first published: Tuesday, October 18, 2022, 23:57 [IST]
Other articles published on Oct 18, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+